
‘ಅಮೃತಧಾರೆ’ (Amruthadhare) ಧಾರಾವಾಹಿಯಲ್ಲಿ ಈಗ ಒಂದು ಪ್ರಮುಖ ಬೆಳವಣಿಗೆ ನಡೆದಿದೆ ಎಂದೇ ಹೇಳಬಹುದು. ಏಕೆಂದರೆ, ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿ ಮದುವೆ ಸಂಭ್ರಮ ನಡೆಯುತ್ತಿದೆ. ಈ ಸಂಭ್ರಮಕ್ಕೆ ಬ್ರೇಕ್ ಬೀಳುವ ಸಮಯ ಕೂಡ ಬಂದಿದೆ. ಹೌದು, ಅಮೃತಧಾರೆ ಧಾರಾವಾಹಿಯಲ್ಲಿ ಈಗ ದೊಡ್ಡ ಟ್ವಿಸ್ಟ್ ಇದೆ. ಜಯದೇವ್ ಕಳ್ಳಾಟವು ಬಯಲಾಗುವ ಸಮಯವು ಸಮೀಪಿಸಿದೆ .
‘ಅಮೃತಧಾರೆ’ ಧಾರಾವಾಹಿಯ ಜಯದೇವ್ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಆತ ತುಂಬಾನೇ ಖಿಲಾಡಿ. ಆತ ನಿಜವಾಗಿಯೂ ಕೆಟ್ಟವನು ಮತ್ತು ಈ ವಿಷಯ ಎಲ್ಲರಿಗೂ ತಿಳಿದಿದೆ. ಆದರೆ, ಯಾರಿಂದಲೂ ಆತನನ್ನು ಹಾಗೂ ಆತ ಮಾಡುವ ಕೆಟ್ಟ ಕೆಲಸವನ್ನು ತಡೆಯಲು ಸಾಧ್ಯವಾಗಲೇ ಇಲ್ಲ. ಹೀಗಿರುವಾಗಲೇ ಜಯದೇವ್ ಒಂದು ದೊಡ್ಡ ನಿರ್ಧಾರ ಮಾಡಿದ್ದಾನೆ.
ಆತ ಮಲ್ಲಿ ವಿರುದ್ಧ ಸಂಚು ರೂಪಿಸುತ್ತಿದ್ದಾನೆ. ಮೊದಲು ತನ್ನ ಬಲಗೈ ಬಂಟ ಸುನಿಯನ್ನು ಅವನ ಹಿಂದೆ ಬಿಟ್ಟಿದ್ದಾನೆ. ಇದಕ್ಕೆ ಸರಿಯಾದ ಸಮಯಕ್ಕೆ ಆತ ಕಾಯುತ್ತಿದ್ದ. ಈಗ ಅಂತಹ ಸಮಯ ಬಂದಿದೆ. ಹೌದು, ಸುನಿಯನ್ನು ಮಲ್ಲಿ ಹಿಂದೆ ಬಿಟ್ಟಿರೋ ಜಯದೇವ್ ಮಜಾ ತೆಗೆದುಕೊಳ್ಳುತ್ತಿದ್ದಾನೆ. ಮುಂದೊಂದು ದಿನ ಎಲ್ಲವನ್ನೂ ಬದಲಿಸಬೇಕು ಎಂಬುದು ಆತನ ಉದ್ದೇಶ. ಮದುವೆ ಆಗದಂತೆ ಕೊನೆ ಕ್ಷಣದಲ್ಲಿ ನಿಲ್ಲಿಸಬೇಕು ಎಂಬುದು ಆತನ ಉದ್ದೇಶ ಆಗಿತ್ತು. ಆದರೆ, ಭೂಮಿಕಾಳೇ ಮದುವೆ ನಿಲ್ಲಿಸುತ್ತೇನೆ ಎಂದು ಹೊರಟಿದ್ದಾಳೆ.
ಇದನ್ನೂ ಓದಿ: ‘ಅಮೃತಧಾರೆ’:ಕಳೆದುಕೊಂಡಿದ್ದಕ್ಕಿಂತ 10 ಪಟ್ಟು ಹೆಚ್ಚು ಗಳಿಸ್ತೀನಿ; ಗೌತಮ್ ಚಾಲೆಂಜ್
ಆದರೆ, ಈ ಪ್ಲ್ಯಾನ್ ಫ್ಲಾಪ್ ಆಗುವ ಸೂಚನೆ ಸಿಕ್ಕಿದೆ. ಸುನಿ ಯಾರು ಹಾಗೂ ಆತನ ಹಿನ್ನೆಲೆ ಏನು ಎಂಬುದು ಭೂಮಿಕಾಗೆ ಗೊತ್ತಾಗಿ ಹೋಗಿದೆ. ಈ ಕಾರಣಕ್ಕೆ ಯಾವುದೇ ಕಾರಣಕ್ಕೂ ಇಬ್ಬರ ಮದುವೆ ನಡೆಯದಂತೆ ನೋಡಿಕೊಳ್ಳುವ ಪ್ಲ್ಯಾನ್ ಅಲ್ಲಿದ್ದಾಳೆ. ಇದರಿಂದ ಆತನಿಗೆ ಸಾಕಷ್ಟು ಹಿನ್ನಡೆ ಆಗುವ ಎಲ್ಲಾ ಲಕ್ಷಣ ಇದೆ. ಒಂದೊಮ್ಮೆ ಈ ಮದುವೆ ನಡೆದು ಹೋದರೆ ಜಯದೇವ್ಗೆ ದೊಡ್ಡ ಹಿನ್ನಡೆ ಆಗೋದು ಪಕ್ಕಾ ಎನ್ನಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.