Headlines

ರಶ್ಮಿಕಾ-ವಿಜಯ್ ಮದುವೆ ಮಾಡಿಸಿದ್ದು ಇವರೇ ನೋಡಿ

ರಶ್ಮಿಕಾ-ವಿಜಯ್ ಮದುವೆ ಮಾಡಿಸಿದ್ದು ಇವರೇ ನೋಡಿ

ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್ ದೇವರಕೊಂಡ ಕಳೆದ ತಿಂಗಳು ರಾಜಸ್ಥಾನದ ಉದಯಪುರದಲ್ಲಿ ಬಲು ಅದ್ಧೂರಿಯಾಗಿ ವಿವಾಹವಾದರು. ಇವರ ಮದುವೆಯ ಚಿತ್ರಗಳು, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆದವು. ಅದರಲ್ಲೂ ಮುಹೂರ್ತದ ದಿನ ರಶ್ಮಿಕಾ ಮತ್ತು ವಿಜಯ್ ಅವರುಗಳ ಧರಿಸಿದ್ದ ಉಡುಗೆ, ಧರಿಸಿದ್ದ ಚಿನ್ನದ ಆಭರಣಗಳಂತೂ ಎಲ್ಲರ ಮನಗೆದ್ದವು. ಇಡೀ ಮದುವೆ ಸಂಪ್ರದಾಯಿಕವಾಗಿ, ಸಾಂಸ್ಕೃತಿಕವಾಗಿ ರಿಚ್​ ಆಗಿತ್ತು. ಸುಮಾರು ಒಂದು ವಾರ ನಡೆದ ಇವರ ಮದುವೆಯನ್ನು ಅರೇಂಜ್ ಮಾಡಿದ್ದು ಇವೆಂಟ್ ಮ್ಯಾನೇಜ್​​ಮೆಂಟ್ ಸಂಸ್ಥೆಯಾದ ‘ಆರ್​​ವಿಆರ್ ಇವೆಂಟ್ ಆಂಡ್ ಡಿಜೈನ್’. ಇದರ ಮುಖ್ಯಸ್ಥೆ ಪ್ರಿಯಾ ಮಾಗಂಟಿ ಇದೀಗ ರಶ್ಮಿಕಾ ಮತ್ತು ವಿಜಯ್ ಅವರ ವಿವಾಹದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

“ಈ ವಿವಾಹವು ಕೇವಲ ಎರಡು ದೊಡ್ಡ ತಾರೆಗಳ ಮಿಲನವಾಗಿರಲಿಲ್ಲ, ಬದಲಾಗಿ ಎರಡು ಸರಳ ಮತ್ತು ಸುಂದರ ಮನಸ್ಸುಗಳ ಸಂಗಮವಾಗಿತ್ತು. ರಶ್ಮಿಕಾ ಮತ್ತು ವಿಜಯ್ ಅವರ ನಡುವಿನ ಗೌರವ ಮತ್ತು ಪ್ರೀತಿಯನ್ನು ಕಂಡು ತಾವು ಬೆರಗಾದೆ. ಅದ್ದೂರಿತನಕ್ಕಿಂತ ಹೆಚ್ಚಾಗಿ ಸಂಪ್ರದಾಯ ಮತ್ತು ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಅರ್ಥಪೂರ್ಣವಾಗಿ ಮದುವೆ ನಡೆಯಬೇಕು ಎಂಬುದು ಈ ಜೋಡಿಯ ಆಸೆಯಾಗಿತ್ತು. ದಕ್ಷಿಣ ಭಾರತದ ಸಂಸ್ಕೃತಿಯನ್ನು ಎತ್ತಿ ಹಿಡಿಯುವಂತೆ ಪ್ರತಿಯೊಂದು ಅಲಂಕಾರವನ್ನೂ ವಿನ್ಯಾಸಗೊಳಿಸಲಾಗಿತ್ತು’ ಎಂದಿದ್ದಾರೆ.

ಇದನ್ನೂ ಓದಿ:ಮುನಿಸಿಕೊಂಡ ಬಾಲಕಿಯನ್ನು ಮನೆಗೆ ಕರೆಸಿ ಊಟ ಬಡಿಸಿದ ರಶ್ಮಿಕಾ ಮಂದಣ್ಣ, ವಿಜಯ್

ರಶ್ಮಿಕಾ ಮಂದಣ್ಣ ಅವರು ತಮ್ಮ ಮದುವೆಯ ಪ್ರತಿಯೊಂದು ಸಣ್ಣ ವಿಷಯದಲ್ಲೂ ಆಸಕ್ತಿ ವಹಿಸಿದ್ದರು. ಹೂವಿನ ಅಲಂಕಾರದಿಂದ ಹಿಡಿದು ಅತಿಥಿಗಳಿಗೆ ನೀಡುವ ಉಡುಗೊರೆಯವರೆಗೆ ಎಲ್ಲವೂ ಪರಿಸರ ಸ್ನೇಹಿಯಾಗಿರಬೇಕು ಎಂಬುದು ಅವರ ಕಾಳಜಿಯಾಗಿತ್ತು. ವಿಜಯ್ ಅವರು ಸಿದ್ಧತೆಗಳ ಸಮಯದಲ್ಲಿ ಅತ್ಯಂತ ಶಾಂತವಾಗಿ ಮತ್ತು ಸಹಕಾರದಿಂದ ನಡೆದುಕೊಂಡರು. “ನನ್ನ ಜೀವನದ ಈ ವಿಶೇಷ ದಿನವನ್ನು ಅತ್ಯಂತ ನೆನಪಿನ ಬುತ್ತಿಯಾಗಿಸಲು ನೀವು ಪಟ್ಟ ಶ್ರಮಕ್ಕೆ ಧನ್ಯವಾದಗಳು” ಎಂದು ವಿಜಯ್ ಪ್ಲಾನರ್ ತಂಡಕ್ಕೆ ವೈಯಕ್ತಿಕವಾಗಿ ಕೃತಜ್ಞತೆ ಸಲ್ಲಿಸಿದ್ದಾಗಿ ಪ್ರಿಯಾ ಹೇಳಿದ್ದಾರೆ.

ರಶ್ಮಿಕಾ ಮತ್ತು ವಿಜಯ್ ಅವರ ಕುಟುಂಬದವರು ನೀಡಿದ ಸಹಕಾರ, ಇರಿಸಿದ ನಂಬಿಕೆಗೆ ಧನ್ಯವಾದ ಹೇಳಿರುವ ಪ್ರಿಯಾ, ವಿಶೇಷವಾಗಿ ತಾವು ಕೊಡಗಿಗೆ ರಶ್ಮಿಕಾರ ಮನೆಗೆ ಭೇಟಿ ನೀಡಿದ್ದು, ಅಲ್ಲಿ ಕೊಡವ ಸಂಪ್ರದಾಯವನ್ನು ನೋಡಿ ಕಲಿತು, ಅದನ್ನೇ ಮದುವೆಯಲ್ಲಿ ಬಳಸಿದ್ದು, ಇನ್ನೂ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ‘ಇಷ್ಟು ದೊಡ್ಡ ಮಟ್ಟದ ಖ್ಯಾತಿ ಇದ್ದರೂ, ಈ ಜೋಡಿಯ ಸರಳತೆ ನಮಗೆ ಮಾದರಿ. ಅವರ ಬದುಕು ಹೀಗೆಯೇ ಸುಂದರವಾಗಿರಲಿ’ ಎಂದು ಶುಭ ಹಾರೈಸಿದ್ದಾರೆ.

ಪ್ರಿಯಾ ಮಾಗಂಟಿ ಅವರು ಸೆಲೆಬ್ರಿಟಿ ವೆಡ್ಡಿಂಗ್ ಪ್ರಾನರ್ ಮತ್ತು ಇವೆಂಟ್ ಆರ್ಗನೈಜರ್ ಆಗಿದ್ದಾರೆ. ಹಲವು ಕೋಟ್ಯಧಿಪತಿಗಳ ಮಕ್ಕಳ ಮದುವೆಗಳನ್ನು ಪ್ರಿಯಾ ಮಾಡಿದ್ದಾರೆ. ಕೆಲ ತಿಂಗಳ ಹಿಂದೆ ನಡೆದ ಕ್ರೀಡಾ ತಾರೆ ಪಿವಿ ಸಿಂಧು ಅವರ ಮದುವೆಗೂ ಇವರೇ ಇವೆಂಟ್ ಆರ್ಗನೈಜರ್ ಆಗಿದ್ದರು. ಇನ್ನೂ ಹಲವಾರು ಸೆಲೆಬ್ರಿಟಿಗಳ ಮದುವೆಗಳನ್ನು ಇವರು ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *