
ಒಂದು ವಾರಕ್ಕೆ ನೂರು ಕೋಟಿ ರೂಪಾಯಿ ಗಳಿಕೆ ಆದರೆ ದೊಡ್ಡದು ಎನ್ನುವ ಪರಿಸ್ಥಿತಿ ಈಗ ಇದೆ. ಯಾರೂ ಸಿನಿಮಾ ನೋಡಲು ಥಿಯೇಟರ್ಗೆ ಬರುತ್ತಿಲ್ಲ ಎಂಬ ಆರೋಪ ಜೋರಾಗಿರುವ ಈ ಸಂದರ್ಭದಲ್ಲಿ ರಣವೀರ್ ಸಿಂಗ್ ನಟನೆಯ ‘ಧುರಂಧರ್ 2’ ಸಿನಿಮಾ (Dhurandhar 2) ಒಂದೇ ವಾರಕ್ಕೆ ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಆದರೂ ಅತಿ ವೇಗದಲ್ಲಿ ಸಾವಿರ ಕೋಟಿ ರೂಪಾಯಿ ಕ್ಲಬ್ ಸೇರಿದ ಸಿನಿಮಾ ಎಂಬ ದಾಖಲೆಯನ್ನು ಮುರಿಯೋಕೆ ಸಾಧ್ಯವಾಗಿಲ್ಲ.
‘ಧುರಂಧರ್ 2’ ಚಿತ್ರ ಅಬ್ಬರಿಸುತ್ತಿದೆ. ಮೊದಲ ವಾರದಲ್ಲಿ ಈ ಚಿತ್ರ ಎಲ್ಲ ಕಡೆಗಳಲ್ಲೂ ಉತ್ತಮ ಪ್ರದರ್ಶನ ಕಾಣುತ್ತಿದೆ. ಹಿಂದಿ ಮಾತ್ರವಲ್ಲದೆ, ತೆಲುಗು ಭಾಷೆಯಲ್ಲೂ ಚಿತ್ರ ಉತ್ತಮ ರೀತಿಯಲ್ಲಿ ಗಳಿಕೆ ಮಾಡುತ್ತಿದೆ. ಇದರಿಂದ ಸಿನಿಮಾ ಒಂದು ವಾರಕ್ಕೆ 1,006 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ಅತಿ ವೇಗದಲ್ಲಿ ಗಳಿಕೆ ಮಾಡಿದ ಎರಡನೇ ಸಿನಿಮಾ ಆಗಿ ಇದು ಹೊರಹೊಮ್ಮಿದೆ.
ಅತಿ ವೇಗದಲ್ಲಿ ಸಾವಿರ ಕ್ಲಬ್ ಸೇರಿದ ದಾಖಲೆ ‘ಪುಷ್ಪ 2’ ಬಳಿ ಇದೆ. ಈ ಚಿತ್ರ ಏಳು ದಿನಗಳಲ್ಲಿ ಬರೋಬ್ಬರಿ 1067 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಅಲ್ಲು ಅರ್ಜುನ್ ಸಿನಿಮಾ ಮಾಡಿದ ದಾಖಲೆಯನ್ನು ಮುರಿಯಲು ‘ಪುಷ್ಪ 2’ ಬಳಿ ಇನ್ನೂ ಸಾಧ್ಯವಾಗಿಲ್ಲ. ಒಟ್ಟಾರೆ ಗಳಿಕೆ ವಿಷಯದಲ್ಲಿ ‘ಧುರಂಧರ್ 2’ ಚಿತ್ರವು ‘ಪುಷ್ಪ 2’ ಚಿತ್ರದ ದಾಖಲೆಯನ್ನು ಮುರಿಯುತ್ತದೆಯೇ ಎಂಬುದು ಸದ್ಯದ ಕುತೂಹಲ.
ಇದನ್ನೂ ಓದಿ: ‘ಧುರಂಧರ್ 2’ ಅಬ್ಬರಕ್ಕೆ ಹೆದರಿದ ಅಕ್ಷಯ್ ಕುಮಾರ್? ‘ಭೂತ್ ಬಂಗ್ಲ’ ಬಿಡುಗಡೆ ಮುಂದೂಡಿಕೆ ಸಾಧ್ಯತೆ
‘ಧುರಂಧರ್ 2’ ಸಿನಿಮಾ ಬುಧವಾರ (ಮಾರ್ಚ್ 25) 47 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇದು ಚಿತ್ರದ ಹೆಚ್ಚುಗಾರಿಕೆ. ವಾರದ ದಿನವೂ ಸಿನಿಮಾ ಅಬ್ಬರಿಸುತ್ತಿರುವುದು ವಿಶೇಷ. ಈ ವಾರಾಂತ್ಯದಲ್ಲಿ ಸಿನಿಮಾ ಪ್ರತಿ ದಿನ 100 ಕೋಟಿ ರೂಪಾಯಿ ಗಳಿಕೆ ಮಾಡುವ ನಿರೀಕ್ಷೆ ಇದೆ. ವೀಕೆಂಡ್ ಶೋಗಳು ಈಗಲೇ ಹೌಸ್ಪುಲ್ ಪ್ರದರ್ಶನ ಕಾಣುತ್ತಾ ಇವೆ. ರಣವೀರ್ ಸಿಂಗ್ ಅವರು ಸಿನಿಮಾ ಮೂಲಕ ದೊಡ್ಡ ಗೆಲುವು ಕಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.