Headlines

ಐಪಿಎಲ್ ಆಡಲು ಪಾಕಿಸ್ತಾನ ಸೂಪರ್​ ಲೀಗ್​​ಗೆ ಶಾಕ್ ಮೇಲೆ ಶಾಕ್ ಕೊಟ್ಟ ವಿದೇಶಿ ಆಟಗಾರರು

ಐಪಿಎಲ್ ಆಡಲು ಪಾಕಿಸ್ತಾನ ಸೂಪರ್​ ಲೀಗ್​​ಗೆ ಶಾಕ್ ಮೇಲೆ ಶಾಕ್ ಕೊಟ್ಟ ವಿದೇಶಿ ಆಟಗಾರರು

ಪಾಕಿಸ್ತಾನ ಸೂಪರ್ ಲೀಗ್ ಇಂದಿನಿಂದ (ಮಾರ್ಚ್ 26) ಆರಂಭ ಆಗುತ್ತಿದೆ. ಅದೇ ರೀತಿ ಶನಿವಾರದಿಂದ (ಮಾರ್ಚ್ 28) ಐಪಿಎಲ್ ಆರಂಭ ಆಗಲಿದೆ. ಪಿಎಸ್​​ಎಲ್​​ಗೆ ಹೋಲಿಕೆ ಮಾಡಿದರೆ ಐಪಿಎಲ್ ಜನಪ್ರಿಯತೆ ತುಂಬಾನೇ ಹೆಚ್ಚಿದೆ. ಈಗ ಐಪಿಎಲ್ ಆಡಬೇಕು ಎಂದು ಅನೇಕ ಆಟಗಾರರು ಪಿಎಸ್​​​ಎಲ್​​ನ ತೊರೆಯುತ್ತಿದ್ದಾರೆ. ಇದು ಪಾಕಿಸ್ತಾನ್ ಪ್ರೀಮಿಯರ್ ಲೀಗ್​​​ಗೆ ಶಾಕಿಂಗ್ ಎನಿಸಿದೆ. ಐಪಿಎಲ್​ ಸೇರಲು ಅವರು ಪಿಎಸ್​ಎಲ್ ತೊರೆಯುತ್ತಿದ್ದಾರೆ ಎನ್ನಲಾಗಿದೆ.

ಇತ್ತೀಚೆಗೆ ಜಿಂಬಾಬ್ವೆ ಆಟಗಾರ ಬ್ಲೆಸ್ಸಿಂಗ್ ಮುಜರಬಾನಿ ಅವರು ಇತ್ತೀಚೆಗೆ ಪಿಎಸ್​​ಎಲ್​ ತೊರೆದು ಐಪಿಎಲ್ ಆಡಲು ಬಂದಿದ್ದರು. ಅದೇ ರೀತಿ ಶ್ರೀಲಂಕಾದ ದಸುನ್ ಶನಕ ಹಾಗೂ ಆಸ್ಟ್ರೇಲಿಯಾದ ಸ್ಪೆನ್ಸರ್ ಜಾನ್ಸನ್ ಐಪಿಎಲ್ ಸೇರಲು ಪಿಎಸ್​​​ಎಲ್​ ತೊರೆದಿದ್ದರು. ಈಗ ದಕ್ಷಿಣ ಆಪ್ರಿಕಾದ ಫಾಸ್ಟ್​ ಬೌಲರ್ ಒಟ್ನೀಲ್ ಬಾರ್ಟ್‌ಮನ್ ಪಿಎಸ್​​ಎಲ್ ತೊರೆದಿದ್ದಾರೆ. ಅವರು ಪಾಕಿಸ್ತಾನ ಸೂಪರ್ ಲೀಗ್​​​​​ನಲ್ಲಿ ಹೈದರಾಬಾದ್ ಕಿಂಗ್ಸ್​ ತಂಡವನ್ನು ಪ್ರತಿನಿಧಿಸಬೇಕಿತ್ತು. ಈಗ ಅವರು ಹೊರ ಹೋಗಿದ್ದರಿಂದ ಮಹೇಶ್ ತೀಕ್ಷಣ ಅವರನ್ನು ಆಯ್ಕೆ ಮಾಡಿಕೊಳ್ಳಲು ತಂಡ ಮುಂದಾಗಿದೆ.

ಗಾಯದಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದಿಂದ ಹೊರಗುಳಿದಿದ್ದ ನಾಥನ್ ಎಲಿಸ್ ಅವರ ಜಾಗವನ್ನು ಒಟ್ನೀಲ್ ಬಾರ್ಟ್‌ಮನ್ ತುಂಬಲಿದ್ದಾರೆ ಎನ್ನಲಾಗಿತ್ತು. ಆದರೆ, ಸ್ಪೆನ್ಸರ್ ಜಾನ್​​ಸನ್ ಅವರು ಈ ಸ್ಥಾನ ತುಂಬಿದ್ದಾರೆ. ಸದ್ಯ ಅವರು ಪಿಎಸ್​​ಎಲ್​ ತೊರೆಯಲು ಐಪಿಎಲ್ ಕಾರಣ ಎಂದು ಹೇಳಲಾಗಿತ್ತು. ಈಗಾಗಲೇ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಮಹತ್ವದ ಬದಲಾವಣೆ ಆಗಿದೆ. ಸ್ಯಾಮ್ ಕರನ್ ಇಂಜೂರಿಯಿಂದ ತಂಡದಿಂದ ಹೊರ ಹೋಗಿದ್ದಾರೆ. ಈ ಸ್ಥಾನಕ್ಕೆ ದಸುನ್ ಶನಕ ಬಂದಿದ್ದಾರೆ.

ಇದನ್ನೂ ಓದಿ: ಆರ್​​ಸಿಬಿ ಹೆಸರು ಬದಲಾವಣೆ ವಿಷಯ; ಅಭಿಮಾನಿಗಳಿಗೆ ಗುಡ್​ನ್ಯೂಸ್ ಕೊಟ್ಟ ಅನನ್ಯಾ ಬಿರ್ಲಾ

ಮಾರ್ಚ್ 28ರಂದು ಈ ಸೀಸನ್ ಮೊದಲ ಪಂದ್ಯ ನಡೆಯಲಿದೆ. ಹಾಲಿ ಚಾಂಪಿಯನ್ಸ್ ಆರ್​​ಸಿಬಿ ಹಾಗೂ ಹೈದರಾಬಾದ್ ನಡುವೆ ಪಂದ್ಯ ನಡೆಯಲಿದೆ. ಈಗಾಗಲೇ ಪಂದ್ಯಕ್ಕೆ ಎಲ್ಲಾ ಸಿದ್ಧತೆ ನಡೆದಿದೆ.

ಇನ್ನಷ್ಟು ಕ್ರಿಕೆಟ್​​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *