ಬಾಮೈದನೊಂದಿಗೆ ತಂಗಿ ಪರಾರಿ: ಕೋಪದಲ್ಲಿ ಬಾವ ಮಾಡಿದ್ದೇನು ಗೊತ್ತಾ?

ಬಾಮೈದನೊಂದಿಗೆ ತಂಗಿ ಪರಾರಿ: ಕೋಪದಲ್ಲಿ ಬಾವ ಮಾಡಿದ್ದೇನು ಗೊತ್ತಾ?

ಆನೇಕಲ್​, ಮಾರ್ಚ್​ 26: ಬಾವನಿಂದ ಬಾಮೈದನ ಕೊಲೆ ನಡೆದಿರುವಂತಹ ಘಟನೆ ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಸಮೀಪದ ಬಿಲ್ವಾರದಳ್ಳಿಯ ನಿರ್ಜನ ಪ್ರದೇಶದಲ್ಲಿ ನಡೆದಿದೆ. ಶ್ರೀನಿವಾಸ್​​ನಿಂದ ರಂಜಿತ್ (24)ನ ಕೊಲೆ (kill) ಮಾಡಲಾಗಿದೆ. ಆಸಾಮಿ ಕೊಲೆ ಮಾಡಿದಲ್ಲದೇ ಮೃತದೇಹವನ್ನು ಕಾರಿನ ಡಿಕ್ಕಿಯಲ್ಲಿ ಹಾಕಿದ್ದಾನೆ. ಬಳಿಕ ಪೊಲೀಸ್​ ಠಾಣೆಗೆ ಹೋಗಿ ಶರಣಾಗಿದ್ದಾನೆ. ಸ್ಥಳಕ್ಕೆ ಬನ್ನೇರುಘಟ್ಟ ಪೋಲಿಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಡೆದಿದ್ದೇನು?

ರಂಜಿತ್​ನ ಸ್ವಂತ ಅಕ್ಕ ಪವಿತ್ರರನ್ನು ಶ್ರೀನಿವಾಸ್​​ ಮದುವೆ ಮಾಡಿಕೊಂಡಿದ್ದಾರೆ. ಶ್ರೀನಿವಾಸ್ ತಂಗಿ ಕೋಮಲ್​ ಜೊತೆಗೆ ರಂಜಿತ್ ಸಂಬಂಧ ಹೊಂದಿದ್ದ. ಕೋಮಲ್​​ನ್ನು ಬೇರೊಬ್ಬರೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಆದರೆ ಗಂಡನನ್ನ ಬಿಟ್ಟು ರಂಜಿತ್ ಜೊತೆಗೆ ಪರಾರಿಯಾಗಿದ್ದಳು. ಈ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಗಲಾಟೆ ನಡೆದಿತ್ತು.

ಇದನ್ನೂ ಓದಿ: ಅಕ್ರಮ ಸಂಬಂಧ ಪ್ರಶ್ನಿಸಲು ಬಂದ ಅಕ್ಕ, ತಮ್ಮನ ಕೊಲೆ: 16 ವರ್ಷದ ಬಾಲಕನಿಂದ ಕೃತ್ಯ

ಶ್ರೀನಿವಾಸ್​​ ರಂಜಿತ್​​​​ನ ಕರೆದು ವಾರ್ನಿಂಗ್ ಕೂಡ ಮಾಡಿದ್ದ. ಇದೆಲ್ಲದರಿಂದ ಕೋಪಗೊಂಡ ಶ್ರೀನಿವಾಸ್ ರಂಜಿತ್​ ಮೇಲೆ ಸೇಡು ಬೆಳೆಸಿಕೊಂಡಿದ್ದ. ಇಂದು ಸಂಜೆ ವೇಳೆ ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಸಮೀಪದ ಬಿಲ್ವಾರದಹಳ್ಳಿಯ ನಿರ್ಜನ ಪ್ರದೇಶಕ್ಕೆ ರಂಜಿತ್​ನನ್ನು ಕರೆತಂದಿದ್ದ ಶ್ರೀನಿವಾಸ್​​ ಕೊಲೆ ಮಾಡಿದ್ದಾನೆ. ಸದ್ಯ ಬನ್ನೇರುಘಟ್ಟ ಪೊಲೀಸರಿಂದ ಆರೋಪಿ‌ ಶ್ರೀನಿವಾಸನನ್ನು ವಶಕ್ಕೆ ಪಡೆಯಲಾಗಿದೆ.

ಠಾಣೆ ಇನ್ಸ್‌ಪೆಕ್ಟರ್ ಕೃಷ್ಣಕುಮಾರ್ ಹೇಳಿದ್ದಿಷ್ಟು

ಘಟನಾ ಸ್ಥಳಕ್ಕೆ ಡಿವೈಎಸ್​​ಪಿ ಮೋಹನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ಬಗ್ಗೆ ಬನ್ನೇರುಘಟ್ಟ ಠಾಣೆ ಇನ್ಸ್‌ಪೆಕ್ಟರ್ ಕೃಷ್ಣಕುಮಾರ್​ ಮಾಹಿತಿ ನೀಡಿದ್ದು, ಸೋಕೋ ಟೀಮ್​ನಿಂದ ಸಾಕ್ಷ್ಯ ಸಂಗ್ರಹಿಸಲಾಗಿದೆ. ಕಬ್ಬಿಣದ ರಾಡ್​ನಿಂದ ತಲೆಗೆ ಹೊಡೆದು ಕೊಲೆ ಮಾಡಲಾಗಿದೆ. ಮೃತದೇಹದ ಜೊತೆ ಕಬ್ಬಿಣದ ರಾಡ್ ಪತ್ತೆ ಆಗಿದೆ ಎಂದರು.

ಇದನ್ನೂ ಓದಿ: ಹಾಡಹಗಲೇ ಕತ್ತು ಕೊಯ್ದು ಪತ್ನಿಯನ್ನ ಹತ್ಯೆಗೈದ ಪತಿ: ಬಳಿಕ ಕಾರು ಹಾಯಿಸಿ ವಿಕೃತಿ

ಕೊಲೆ ಬಳಿಕ ಮೃತದೇಹ ಕಾರಿನ ಡಿಕ್ಕಿಗೆ ಹಾಕಲಾಗಿದೆ. ರಂಜಿತ್​​ನ ಕೊಲೆ ಮಾಡಿದ ಶ್ರೀನಿವಾಸ್​​ ನೇರವಾಗಿ ಬನ್ನೇರುಘಟ್ಟ ಠಾಣೆಗೆ ಬಂದಿದ್ದಾನೆ ಎಂದು ಬನ್ನೇರುಘಟ್ಟ ಠಾಣೆ ಇನ್ಸ್‌ಪೆಕ್ಟರ್ ಕೃಷ್ಣಕುಮಾರ್​ ಮಾಹಿತಿ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *