Gold Coin: ಚಿನ್ನದ ಬೆಲೆ ಇಳಿಕೆ ಬೆನ್ನಲ್ಲೇ ಗೋಲ್ಡ್ ಕಾಯಿನ್​ಗೆ ಭಾರೀ ಬೇಡಿಕೆ!

Gold Coin: ಚಿನ್ನದ ಬೆಲೆ ಇಳಿಕೆ ಬೆನ್ನಲ್ಲೇ ಗೋಲ್ಡ್ ಕಾಯಿನ್​ಗೆ ಭಾರೀ ಬೇಡಿಕೆ!

ಬೆಂಗಳೂರು, ಮಾರ್ಚ್​ 27: ಚಿನ್ನದ ಬೆಲೆಯಲ್ಲಿ (Gold rate) ನಿರಂತರ ಏರುಪೇರು ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಗೋಲ್ಡ್ ಕಾಯಿನ್‌ಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದೆ. 2, 4, 6 ಹಾಗೂ 8 ಗ್ರಾಂ ಗೋಲ್ಡ್ ಕಾಯಿನ್‌ಗಳನ್ನು ಖರೀದಿಸಲು ಗ್ರಾಹಕರು ಮುಗಿಬೀಳುತ್ತಿದ್ದಾರೆ. ಜನರ ಬೇಡಿಕೆ ಪೂರೈಸಲು ಮಳಿಗೆಗಳು ಪರದಾಡುವ ಸ್ಥಿತಿ ಎದುರಾಗಿದೆ.

ಉತ್ತಮ ಲಾಭ ಪಡೆಯುವ ನಿರೀಕ್ಷೆ

ನಗರದ ಬಂಗಾರದ ಮಳಿಗೆಗಳಲ್ಲಿ ಗ್ರಾಹಕರು ಅಂಗಡಿಗೆ ಪ್ರವೇಶಿಸುತ್ತಿದ್ದಂತೆಯೇ ಗೋಲ್ಡ್ ಕಾಯಿನ್‌ಗಳನ್ನು ಕೇಳುತ್ತಿರುವುದರಿಂದ ಬೆಳಗ್ಗೆ ಅಂಗಡಿಗೆ ತರಲಾಗುವ ಕಾಯಿನ್‌ಗಳು ಮಧ್ಯಾಹ್ನದ ವೇಳೆಗೇ ಮಾರಾಟವಾಗುತ್ತಿವೆ. ವಿಶೇಷವಾಗಿ 2 ಮತ್ತು 4 ಗ್ರಾಂ ಗೋಲ್ಡ್ ಕಾಯಿನ್‌ಗಳಿಗೆ ಹೆಚ್ಚಿನ ಬೇಡಿಕೆ ಉಂಟಾಗಿದ್ದು, ಮುಂದಿನ ದಿನಗಳಲ್ಲಿ ಚಿನ್ನದ ದರ ಏರಿಕೆಯಾಗುವ ಸಾಧ್ಯತೆ ಇರುವುದರಿಂದ ಉತ್ತಮ ಲಾಭ ಪಡೆಯಬಹುದು ಎಂಬ ನಿರೀಕ್ಷೆಯಲ್ಲಿ ಜನರು ಹೂಡಿಕೆಗಾಗಿ ಕಾಯಿನ್‌ಗಳನ್ನು ಖರೀದಿಸುತ್ತಿದ್ದಾರೆ.

ಚಿನ್ನದ ದರದಲ್ಲಿ ಅಸ್ಥಿರತೆ

ಇನ್ನೊಂದೆಡೆ, ಕಳೆದ ಮೂರು ದಿನಗಳಿಂದ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಭಾರೀ ಅಸ್ಥಿರತೆ ಕಂಡುಬಂದಿದೆ. ನಿನ್ನೆ ಒಂದೇ ದಿನ 10 ಗ್ರಾಂ ಚಿನ್ನದ ಬೆಲೆಯಲ್ಲಿ 3,450 ರೂಪಾಯಿ ಏರಿಕೆಯಾಗಿದೆ. ಮಾರ್ಚ್ 23ರಂದು 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 12,635 ರೂಪಾಯಿಯಾಗಿದ್ದು, ಎರಡು ದಿನಗಳಲ್ಲಿ 345 ರೂಪಾಯಿ ಏರಿಕೆಯಾಗಿದೆ. ಆದರೆ, ಇಂದು ಮಾರುಕಟ್ಟೆ ಆರಂಭದಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 13,465 ರೂಪಾಯಿಯಾಗಿದ್ದು, ಸಂಜೆ ವೇಳೆಗೆ 215 ರೂಪಾಯಿ ಇಳಿಕೆಯಾಗಿ 13,250 ರೂಪಾಯಿಗೆ ತಲುಪಿದೆ.

ಇದನ್ನೂ ಓದಿ ಚಿನ್ನದ ದರ ಹಾವು-ಏಣಿ ಆಟದ ಮಧ್ಯೆ ಬೆಂಗಳೂರಿನಲ್ಲಿ ಅಕ್ಷಯ ತೃತೀಯಕ್ಕೆ ಈಗಲೇ ಗೋಲ್ಡ್ ಬುಕ್ಕಿಂಗ್ ಜೋರು! ಜ್ಯುವೆಲ್ಲರಿಗಳಲ್ಲಿ ಕ್ಯೂ

ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಮತ್ತೆ ಏರಿಕೆಯಾಗಬಹುದು ಎಂಬ ಭಯದಲ್ಲಿ ಗ್ರಾಹಕರು ಕಡಿಮೆ ದರದಲ್ಲಿ ಚಿನ್ನ ಖರೀದಿಸಲು ಮುಂದಾಗಿದ್ದಾರೆ. ಆಭರಣಗಳಿಗಿಂತ ಗೋಲ್ಡ್ ಕಾಯಿನ್‌ಗಳ ಮೇಲೆ ಹೆಚ್ಚಿನ ಆಸಕ್ತಿ ತೋರುತ್ತಿರುವುದು ಗಮನಾರ್ಹವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *