
ವಿಯೆಟ್ನಾಂ, ಮಾರ್ಚ್ 27: ವಿಯೆಟ್ನಾಂನ ಬೃಹತ್ ವಸತಿ ಕಟ್ಟಡಕ್ಕೆ ಬೆಂಕಿ ಹೊತ್ತಿಕೊಂಡಿತ್ತು, ಎಲ್ಲರೂ ಭಯಭೀತರಾಗಿದ್ದರು. ಆದರೆ ಇಬ್ಬರು ಯುವಕರು ಇದ್ಯಾವುದನ್ನೂ ಲೆಕ್ಕಿಸದೆ ಸುತ್ತಿಗೆಯಿಂದ ಮೇಲ್ಛಾವಣಿ ಒಡೆದು ಅದರ ಮೂಲಕ ಹೋಗಿ ಏಳು ಮಂದಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ವಿಡಿಯೋದಲ್ಲಿ ಯುವಕರು ತಾರಸಿ ಮೇಲೆ ಹೋಗಿ ಛಾವಣಿಗೆ ಸುತ್ತಿಗೆಯಿಂದ ಪದೇ ಪದೇ ಹೊಡೆಯುತ್ತಿರುವುದನ್ನು ಕಾಣಬಹುದು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ