
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ಎಲ್ಲೆಲ್ಲಿಯೂ ಆರ್ಸಿಬಿ ಆಟಗಾರ ಫಿಲ್ ಸಾಲ್ಟ್ ಅವರದ್ದೇ ಅಬ್ಬರ. ಈ ಪಂದ್ಯದಲ್ಲಿ ಫಿಲ್ ಸಾಲ್ಟ್ ಮೂರು ಅದ್ಭುತ ಕ್ಯಾಚ್ಗಳನ್ನು ಹಿಡಿಯುವ ಮೂಲಕ ಇಡೀ ಮೈದಾನವೇ ಹುಚ್ಚೆದ್ದು ಕುಣಿಯುವಂತೆ ಮಾಡಿದರು. ಅದರಲ್ಲೂ 80 ರನ್ ಬಾರಿಸಿ ಶತಕದತ್ತ ಮುನ್ನಗುತ್ತಿದ್ದ ಎಸ್ಆರ್ಎಚ್ ನಾಯಕ ಇಶಾನ್ ಕಿಶನ್ ಅವರ ಅತ್ಯಂತ ಕಷ್ಟಕರವಾದ ಕ್ಯಾಚ್ ಅನ್ನು ಸಾಲ್ಟ್, ಚಿರತೆಯಂತೆ ಎಗರಿ ಎಂದೇ ಕೈನಲ್ಲಿ ಹಿಡಿದರು. ಸ್ವತಃ ಇಶಾನ್ ಕಿಶನ್ ಅವರೇ ಸಾಲ್ಟ್ ಹಿಡಿದ ಈ ಅಸಾಧ್ಯವಾದ ಕ್ಯಾಚ್ಗೆ ಒಂದು ಕ್ಷಣ ದಂಗಾಗಿ ನಿಂತರು.
ಆರ್ಸಿಬಿ ಪರ ಚೊಚ್ಚಲ ಐಪಿಎಲ್ ಪಂದ್ಯವನ್ನಾಡಿದ ಅಭಿನಂದನ್ ಸಿಂಗ್, ಪಂದ್ಯದ 16ನೇ ಓವರ್ ಬೌಲ್ ಮಾಡಲು ಬಂದರು. ಈ ಓವರ್ನ 5ನೇ ಎಸೆತವನ್ನು ಕಿಶನ್ ಭರ್ಜರಿ ಸಿಕ್ಸರ್ ಬಾರಿಸಿದರು. ಕೊನೆಯ ಎಸೆತದಲ್ಲೂ ಇದೇ ಪ್ರಯತ್ನ ಕಂಡುಬಂತು. ಅಭಿನಂದನ್ ಓವರ್ನ ಕೊನೆಯ ಎಸೆತವನ್ನು ಫುಲ್ ಟಾಸ್ ಬೌಲ್ ಮಾಡಿದರು. ಇತ್ತ ಸ್ಟ್ರೈಕ್ನಲ್ಲಿದ್ದ ಕಿಶನ್, ಪಾಯಿಂಟ್ ದಿಕ್ಕಿನ ಕಡೆಗೆ ಸ್ಲೈಸ್ ಮಾಡಿದರು. ಇತ್ತ ಫಿಲ್ ಸಾಲ್ಟ್ ಡೀಪ್ ಪಾಯಿಂಟ್ನಿಂದ ತನ್ನ ಬಲಕ್ಕೆ ವೇಗವಾಗಿ ಓಡಿ ಬಂದು ಚಿರತೆಯಂತೆ ಎಗರಿ ತನ್ನ ಬಲಗೈಯನ್ನು ಚಾಚಿ ಸ್ಲೈಡಿಂಗ್ ಮಾಡುವ ಮೂಲಕ ಅದ್ಭುತ ಕ್ಯಾಚ್ ಹಿಡಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ