ಮಾರ್ಚ್ ತಿಂಗಳಲ್ಲಿ 27 ದಿನಗಳಲ್ಲಿ 1.14 ಲಕ್ಷ ಕೋಟಿ ರೂ ವಿದೇಶೀ ಹೂಡಿಕೆಗಳ ಹೊರಹರಿವು; ಇದು ಹೊಸ ಮಾಸಿಕ ದಾಖಲೆ

ಮಾರ್ಚ್ ತಿಂಗಳಲ್ಲಿ 27 ದಿನಗಳಲ್ಲಿ 1.14 ಲಕ್ಷ ಕೋಟಿ ರೂ ವಿದೇಶೀ ಹೂಡಿಕೆಗಳ ಹೊರಹರಿವು; ಇದು ಹೊಸ ಮಾಸಿಕ ದಾಖಲೆ

ನವದೆಹಲಿ, ಮಾರ್ಚ್ 29: ಭಾರತದ ಈಕ್ವಿಟಿಗಳಿಂದ ಮಾರ್ಚ್ ತಿಂಗಳಲ್ಲಿ 12.3 ಬಿಲಿಯನ್ ಡಾಲರ್​ನಷ್ಟು ಎಫ್​ಪಿಐಗಳ ಹೂಡಿಕೆಗಳು ಹೊರಹೋಗಿವೆ. ಅಂದರೆ, ಮಾರ್ಚ್​ನಲ್ಲಿ ಈವರೆಗೂ (27, ಶುಕ್ರವಾರ) 1.14 ಲಕ್ಷ ಕೋಟಿ ರೂ ಈಕ್ವಿಟಿಗಳನ್ನು ವಿದೇಶೀ ಹೂಡಿಕೆದಾರರು ಮಾರಿದ್ದಾರೆ. ಇನ್ನೂ ಎರಡು ಟ್ರೇಡಿಂಗ್ ಸೆಷನ್​ಗಳು ಉಳಿದಿದ್ದು, ಮತ್ತಷ್ಟು ಸಾವಿರಾರು ಕೋಟಿ ರೂ ಎಫ್​ಪಿಐಗಳ (FPI- Foreign Portfolio Investors) ಹೊರಹರಿವು ಆಗುವ ನಿರೀಕ್ಷೆ ಇದೆ.

ಯಾವುದೇ ಒಂದು ತಿಂಗಳಲ್ಲಿ ಇಷ್ಟು ಮೊತ್ತದ ವಿದೇಶೀ ಹೂಡಿಕೆಗಳ ಹೊರಹರಿವು ಕಂಡಿದ್ದು ಇದೇ ಮೊದಲು. 2024ರ ಅಕ್ಟೋಬರ್ ತಿಂಗಳಲ್ಲಿ 94,017 ಕೋಟಿ ರೂ ಮೊತ್ತದಷ್ಟು ವಿದೇಶೀ ಹೂಡಿಕೆಗಳು ಹೊರಹೋಗಿದ್ದವು. ಅದು ಇಲ್ಲಿಯವರೆಗಿನ ದಾಖಲೆಯಾಗಿತ್ತು. ಮಾರ್ಚ್ ತಿಂಗಳಲ್ಲಿ ಮೊದಲ ಬಾರಿಗೆ 1 ಲಕ್ಷ ಕೋಟಿ ರೂ ಹೊರಹರಿವಿನ ಮೈಲಿಗಲ್ಲು ಸೃಷ್ಟಿಯಾಗಿದೆ.

ಇದನ್ನೂ ಓದಿ: ಅಬಕಾರಿ ಸುಂಕ ಕಡಿತದಿಂದ ಸರ್ಕಾರಕ್ಕೆ ಎರಡೇ ವಾರದಲ್ಲಿ 7,000 ಕೋಟಿ ರೂ ಆದಾಯನಷ್ಟದ ಅಂದಾಜು

ಮಾರ್ಚ್ ತಿಂಗಳಲ್ಲಿ ಎಫ್​ಪಿಐಗಳು ಸತತವಾಗಿ ಹೂಡಿಕೆಗಳನ್ನು ಹಿಂಪಡೆಯುತ್ತಿದ್ದ ಟ್ರೆಂಡ್ ಇತ್ತು. ಈಕ್ವಿಟಿ ಕ್ಯಾಷ್ ಮಾರ್ಕೆಟ್​ನಲ್ಲಿ ಮಾರ್ಚ್ 27ರವರೆಗೆ ವಿದೇಶೀ ಪೋರ್ಟ್​ಫೋಲಿಯೋ ಹೂಡಿಕೆದಾರರು ಮಾರಿದ ಈಕ್ವಿಟಿಗಳ ಮೌಲ್ಯ 1,13,380 ಕೋಟಿ ರೂ ಎನ್ನಲಾಗಿದೆ.

2026ರಲ್ಲಿ, ಅಂದರೆ ಜನವರಿಯಿಂದ ಈಚೆಗೆ ಎಫ್​ಪಿಐಗಳಿಂದ ಆಗಿರುವ ಹೂಡಿಕೆ ನಿರ್ಗಮನ ಒಟ್ಟು 1.27 ಲಕ್ಷ ಕೋಟಿ ರೂ. ಇದರಲ್ಲಿ ಮಾರ್ಚ್ ತಿಂಗಳದ್ದೇ ಸಿಂಹಪಾಲು. ಫೆಬ್ರುವರಿ ತಿಂಗಳಲ್ಲಿ ವಿಭಿನ್ನ ಟ್ರೆಂಡ್ ಇತ್ತು. ಎಫ್​ಪಿಐಗಳು 22,615 ಕೋಟಿ ರೂನಷ್ಟು ಮೊತ್ತದ ಭಾರತೀಯ ಈಕ್ವಿಟಿಗಳನ್ನು ಖರೀದಿ ಮಾಡಿದ್ದವು. ಕಳೆದ 17 ತಿಂಗಳಲ್ಲೇ ಅತಿಹೆಚ್ಚು ಮಾಸಿಕ ಒಳಹರಿವು ಅದಾಗಿತ್ತು.

ಇದನ್ನೂ ಓದಿ: ರಷ್ಯನ್ ಎಲ್​ಎನ್​ಜಿಯನ್ನು ಖರೀದಿಸಲಿರುವ ಭಾರತ; ಎಲ್​ಪಿಜಿ, ಪಿಎನ್​ಜಿ, ಎಲ್​ಎನ್​ಜಿಗಿರುವ ವ್ಯತ್ಯಾಸಗಳೇನು?

ಇರಾನ್ ಯುದ್ಧದ ಪರಿಣಾಮವು ಮಾರ್ಚ್ ತಿಂಗಳಲ್ಲಿ ಈಕ್ವಿಟಿ ಮಾರುಕಟ್ಟೆ ಮೇಲೆ ತೀವ್ರವಾಗಿ ಬಿದ್ದಿದೆ. ಹಾಗೆಯೇ, ಕಳೆದ 18 ತಿಂಗಳಲ್ಲಿ ಭಾರತದ ಈಕ್ವಿಟಿ ಮಾರುಕಟ್ಟೆಯ ಸಾಧನೆಯು ಇತರ ದೇಶಗಳ ಮಾರುಕಟ್ಟೆಗೆ ಹೋಲಿಸಿದರೆ ದುರ್ಬಲ ಸಾಧನೆ ತೋರಿದೆ. ಹೀಗಾಗಿ, ಎಫ್​ಪಿಐಗಳು ಭಾರತದ ಈಕ್ವಿಟಿಗಳಲ್ಲಿ ಹೂಡಿಕೆ ಕಡಿಮೆ ಮಾಡಿರಬಹುದು. ಇದರ ಜೊತೆಗೆ, ಅಮೆರಿಕದ ಬಾಂಡ್ ಯೀಲ್ಡ್ ಹೆಚ್ಚಿರುವುದು ಮತ್ತು ಜಾಗತಿಕವಾಗಿ ಹಣಕಾಸು ಸ್ಥಿತಿ ಸಂಕುಚಿತಗೊಂಡಿರುವುದು ಕೂಡ ಎಫ್​ಪಿಐಗಳ ಹೊರಹರಿವಿಗೆ ಕಾರಣವಾಗಿರಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *