MI vs KKR: 6,6,6,6,6,.. ಸಿಡಿಲಬ್ಬರದ ಅರ್ಧಶತಕ ಚಚ್ಚಿದ ರೋಹಿತ್ ಶರ್ಮಾ

MI vs KKR: 6,6,6,6,6,.. ಸಿಡಿಲಬ್ಬರದ ಅರ್ಧಶತಕ ಚಚ್ಚಿದ ರೋಹಿತ್ ಶರ್ಮಾ

ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ಮುಂಬೈ ಇಂಡಿಯನ್ಸ್‌ ಹಾಗೂ ಕೆಕೆಆರ್ ನಡುವಿನ ಐಪಿಎಲ್ 2026 ರ ಎರಡನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಕೆಕೆಆರ್ 221 ರನ್​ಗಳ ಬೃಹತ್ ಮೊತ್ತ ಕಲೆಹಾಕಿದೆ. ಈ ಗುರಿ ಬೆನ್ನಟ್ಟಿರುವ ಮುಂಬೈ ಇಂಡಿಯನ್ಸ್‌ ಪರ ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ರಿಯಾನ್ ರಿಕಲ್ಟನ್ ತಂಡಕ್ಕೆ ಸ್ಫೋಟಕ ಆರಂಭ ಒದಗಿಸಿಕೊಟ್ಟಿದ್ದು ಮಾತ್ರವಲ್ಲದೆ ಪವರ್‌ಪ್ಲೇನಲ್ಲಿಯೇ ತಂಡವನ್ನು 80 ರನ್​ಗಳ ಗಡಿ ಮುಟ್ಟಿಸಿದ್ದಾರೆ. ಇದೇ ವೇಳೆ ಹಿಟ್​ಮ್ಯಾನ್ ರೋಹಿತ್ ಶರ್ಮಾ ತಮ್ಮ ಅರ್ಧಶತಕವನ್ನು ಪೂರೈಸಿದರು.

ಈ ಐಪಿಎಲ್​ಗೆ ಭರ್ಜರಿ ತಯಾರಿ ಮಾಡಿಕೊಂಡು ಬಂದಿರುವ ರೋಹಿತ್ ಶರ್ಮಾ ದೈಹಿಕವಾಗಿಯೂ ಫಿಟ್ ಆಗಿ ಕಾಣುತ್ತಿದ್ದಾರೆ. ಅದರ ಪರಿಣಾಮ ಮೊದಲ ಪಂದ್ಯದಲ್ಲೇ ಕಂಡುಬಂದಿದೆ. ಎಂದಿನಂತೆ ಆರಂಭಿಕನಾಗಿ ಕಣಕ್ಕಿಳಿದ ರೋಹಿತ್, ಆರಂಭದಲ್ಲೇ ಹೊಡಿಬಡಿ ಆಟಕ್ಕೆ ಮುಂದಾದರು. ಇದರ ಪರಿಣಾಮವಾಗಿ ರೋಹಿತ್ ಪವರ್‌ಪ್ಲೇನಲ್ಲಿಯೇ ತಮ್ಮ ಅರ್ಧಶತಕವನ್ನು ಪೂರೈಸಿದರು.

ಕೇವಲ 23 ಎಸೆತಗಳಲ್ಲಿ ಐದು ಸಿಕ್ಸರ್‌ಗಳು ಮತ್ತು ಮೂರು ಬೌಂಡರಿಗಳ ಸಹಿತ ಅರ್ಧಶತಕ ಬಾರಿಸಿದ ರೋಹಿತ್ ಶರ್ಮಾಗೆ ಇದು ಅವರ ಐಪಿಎಲ್ ವೃತ್ತಿಜೀವನದಲ್ಲಿ ಅತಿ ವೇಗದ ಅರ್ಧಶತಕವಾಗಿದೆ. ರೋಹಿತ್ ಅರ್ಧಶತಕ ಬಾರಿಸುವುದರ ಜೊತೆಗೆ ರಿಕಲ್ಟನ್ ಜೊತೆಗೂಡಿ ಮೊದಲ 6 ಓವರ್​ಗಳಲ್ಲಿ 80 ರನ್​ಗಳ ಜೊತೆಯಾಟವನ್ನು ಕಟ್ಟಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *