
ರಿಷಬ್ ಶೆಟ್ಟಿ (Rishab Shetty) ಅವರು ಇತ್ತೀಚೆಗೆ ಸುದ್ದಿಯಲ್ಲಿದ್ದಾರೆ. ಅವರು ಸೋಶಿಯಲ್ ಮೀಡಿಯಾದಲ್ಲಿ ರಾಜ್ ಬಿ ಶೆಟ್ಟಿ, ಹೊಂಬಾಳೆ ಫಿಲ್ಮ್ಸ್, ರುಕ್ಮಿಣಿ ವಸಂತ್ ಸೇರಿದಂತೆ ಎಲ್ಲರನ್ನೂ ಅನ್ಫಾಲೋ ಮಾಡಿದ್ದು ಚರ್ಚೆ ಆಗಿತ್ತು. ಈಗ ಅವರು ರಿಷಬ್ ಶೆಟ್ಟಿ ಫಿಲ್ಮ್ಸ್, ರಿಷಬ್ ಶೆಟ್ಟಿ ಫೌಂಡೇಷನ್ ಹಾಗೂ ಪತ್ನಿ ಪ್ರಗತಿ ಶೆಟ್ಟಿ ಅವರನ್ನು ಮಾತ್ರ ಫಾಲೋ ಮಾಡುತ್ತಿದ್ದಾರೆ. ಹೀಗಿರುವಾಗಲೇ ಅವರು ಕೆರಾಡಿಯಲ್ಲಿ ತಾವು ಮಾಡಿದ ಸಾಧನೆ ಬಗ್ಗೆ ಹೇಳಿಕೊಂಡಿದ್ದಾರೆ.
ಸಾಮಾನ್ಯವಾಗಿ ಸಿನಿಮಾ ನಿರ್ಮಾಣ ಮಾಡುವಾಗ ದೊಡ್ಡ ದೊಡ್ಡ ಫಿಲ್ಮ್ ಸಿಟಿಯಲ್ಲಿ ಸೆಟ್ ನಿರ್ಮಾಣ ಮಾಡಲಾಗುತ್ತದೆ. ಆದರೆ, ರಿಷಬ್ ಶೆಟ್ಟಿ ಅವರು ಕುಂದಾಪುರದ ಕೆರಾಡಿಯಲ್ಲೇ ‘ಕಾಂತಾರ 2’ ಚಿತ್ರದ ಸೆಟ್ ನಿರ್ಮಾಣ ಮಾಡಿದರು. ಈ ಸೆಟ್ ಅದ್ಭುತವಾಗಿತ್ತು ಎಂಬುದು ‘ಕಾಂತಾರ: ಚಾಪ್ಟರ್ 1’ ಸಿನಿಮಾ ನೋಡಿದವರಿಗೆ ಗೊತ್ತಾಗುತ್ತದೆ. ಈಗ ಇದನ್ನು ಸಿನಿಮಾ ಸಿಟಿಯಾಗಿ ಬದಲಾಯಿಸಿರೋದಾಗಿ ಹೇಳಿದ್ದಾರೆ.
‘ಕಾಂತಾರದ ಬಳಿಕ ಕುಂದಾಪುರ, ಬೈಂದೂರು ಭಾಗ ಫಿಲ್ಮ್ ಸಿಟಿಯಾಗಿ ಬದಲಾಗಿದೆ. ಈ ಭಾಗದಲ್ಲಿ ಇನ್ನಷ್ಟು ಸಿನಿಮಾ ಶೂಟ್ ಆಗುವ ನಿರೀಕ್ಷೆ ಇದೆ. ಈ ಭಾಗದ ಜನರಿಗೆ ಸಿನಿಮಾದ ಮೇಲಿನ ಗೌರವ ಹೆಚ್ಚಾಗಿದೆ’ ಎಂದು ರಿಷಬ್ ಶೆಟ್ಟಿ ಅವರು ಹೇಳಿದ್ದಾರೆ.
View this post on Instagram
ಕುಂದಾಪುರ ಸೇರಿದಂತೆ ಕರಾವಳಿ ಭಾಗದಲ್ಲಿ ಅಪಾರ ಪ್ರಕೃತಿ ಸೌಂದರ್ಯವಿದೆ. ಇದನ್ನು ಕೆಲವು ಸಿನಿಮಾಗಳಲ್ಲಿ ಸೆರೆ ಹಿಡಿಯಲಾಗಿದೆ. ಆದರೆ, ಇದನ್ನು ಸಂಪೂರ್ಣವಾಗಿ ಬಳಸಿಕೊಂಡಿಲ್ಲ ಎಂಬುದು ರಿಷಬ್ ಶೆಟ್ಟಿ ಅವರ ಅಭಿಪ್ರಾಯ. ‘ಕಾಂತಾರ’ ಹಾಗೂ ‘ಕಾಂತಾರ: ಚಾಪ್ಟರ್ 1’ ಬಳಿಕ ಕರಾವಳಿಯ ಸಂಸ್ಕೃತಿ ಎಲ್ಲರಿಗೂ ತಿಳಿದಿದೆ ಎಂಬುದು ವಿಶೇಷ.
ಇದನ್ನೂ ಓದಿ: ‘ಅಧ್ಯಾಯ ಎರಡು’: ‘ಕಾಂತಾರ: ಚಾಪ್ಟರ್ 2’ ಆರಂಭಿಸಿದರೇ ರಿಷಬ್ ಶೆಟ್ಟಿ?
ರಿಷಬ್ ಶೆಟ್ಟಿ ಅವರು ಸದ್ಯ ‘ಜೈ ಹನುಮಾನ್’ ಸಿನಿಮಾ ಶೂಟ್ ಅಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಮುಹೂರ್ತ ಇತ್ತೀಚೆಗೆ ಹಂಪಿಯ ಅಂಜನಾದ್ರಿ ಬೆಟ್ಟದಲ್ಲಿ ನಡೆದಿದೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳು ಅಪಾರವಾದ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.