ಬೆಂಗಳೂರು ಪೊಲೀಸರಿಂದ ‘ಉಚಿತ ಐಪಿಎಲ್ ಟಿಕೆಟ್’; ಒಮ್ಮೆ ಲಿಂಕ್ ಓಪನ್ ಮಾಡಿ ನೋಡಿ

ಬೆಂಗಳೂರು ಪೊಲೀಸರಿಂದ ‘ಉಚಿತ ಐಪಿಎಲ್ ಟಿಕೆಟ್’; ಒಮ್ಮೆ ಲಿಂಕ್ ಓಪನ್ ಮಾಡಿ ನೋಡಿ

ಬೆಂಗಳೂರು, ಏ.1: ಬೆಂಗಳೂರು ಸಿಟಿ ಪೊಲೀಸ್ ತನ್ನ ಅಧಿಕೃತ ಎಕ್ಸ್ (X) ಖಾತೆಯಲ್ಲಿ “FREE IPL TICKETS” ಎಂಬ ಪೋಸ್ಟರ್ ಅನ್ನು ಹಂಚಿಕೊಂಡಿದೆ. ಆದರೆ, ಇದು ನಿಜವಾದ ಆಫರ್ ಅಲ್ಲ, ಬದಲಾಗಿ ಸಾರ್ವಜನಿಕರಲ್ಲಿ ಸೈಬರ್ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಲು ಹೂಡಿರುವ ಒಂದು ತಂತ್ರವಾಗಿದೆ. ಇಂದು ಏಪ್ರಿಲ್ 1, ಅಂದರೆ ಏಪ್ರಿಲ್ ಫೂಲ್ ದಿನ. ಇದನ್ನೇ ಬಳಸಿಕೊಂಡಿರುವ ಬೆಂಗಳೂರು ನಗರ ಪೊಲೀಸರು, ಐಪಿಎಲ್ ಕ್ರೇಜ್ ನಡುವೆ ಸಾರ್ವಜನಿಕರಿಗೆ ಹೇಗೆ ಸೈಬರ್ ವಂಚಕರು ಗಾಳ ಹಾಕುತ್ತಾರೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಪೊಲೀಸರು ಹಂಚಿಕೊಂಡಿರುವ ಪೋಸ್ಟರ್‌ನಲ್ಲಿ “ಬೆಂಗಳೂರು ಸಿಟಿ ಪೊಲೀಸ್ ವತಿಯಿಂದ 2 ಉಚಿತ ಐಪಿಎಲ್ ಟಿಕೆಟ್‌ಗಳನ್ನು ನೀಡಲಾಗುತ್ತಿದೆ, ಭಾಗವಹಿಸಲು ಬಯೋದಲ್ಲಿರುವ ಲಿಂಕ್ ಕ್ಲಿಕ್ ಮಾಡಿ” ಎಂದು ಬರೆಯಲಾಗಿದೆ. ಇದನ್ನು ನೋಡಿದ ಅನೇಕರು ನಿಜವೆಂದು ನಂಬಿ ಲಿಂಕ್ ಹುಡುಕತೊಡಗಿದ್ದಾರೆ. ಆದರೆ, ವಾಸ್ತವದಲ್ಲಿ ಇದು ವಂಚಕರ ಜಾಲದ ಬಗ್ಗೆ ಎಚ್ಚರಿಸುವ ಒಂದು ಪ್ರ್ಯಾಂಕ್ ಆಗಿದೆ.

ಇದನ್ನೂ ಓದಿ: ಬೆಂಗಳೂರು ‘ಪೀಕ್ ಹೆಲ್ತ್‌ಕೇರ್’: ಅಮೆರಿಕದಲ್ಲಿ ಸಿಗದ ಲಸಿಕೆ ಕೋರಮಂಗಲದಲ್ಲಿ 10 ನಿಮಿಷದಲ್ಲಿ ಲಭ್ಯ!

ಇಲ್ಲಿದೆ ನೋಡಿ ಪೋಸ್ಟ್​​;

“ಉಚಿತವಾಗಿ ಏನಾದರೂ ಸಿಗುತ್ತದೆ ಎಂಬ ಆಸೆಗೆ ಬಿದ್ದು ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ. ಐಪಿಎಲ್ ಸೀಸನ್‌ನಲ್ಲಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ನಿಮ್ಮ ವೈಯಕ್ತಿಕ ಮಾಹಿತಿ ಹಾಗೂ ಹಣವನ್ನು ದೋಚುವ ಸೈಬರ್ ಕ್ರಿಮಿನಲ್‌ಗಳ ಬಗ್ಗೆ ಎಚ್ಚರದಿಂದಿರಿ” ಎಂದು ಪೊಲೀಸರು ಈ ಪೋಲ್ ಮತ್ತು ಪೋಸ್ಟ್ ಮೂಲಕ ಸಂದೇಶ ನೀಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *