‘ಧುರಂಧರ್ 2’ ಬಳಿಕ ಮತ್ತೊಂದು ಬ್ಲಾಕ್ ಬಸ್ಟರ್ ನಿರೀಕ್ಷೆಯಲ್ಲಿ ಸಂಜಯ್ ದತ್

‘ಧುರಂಧರ್ 2’ ಬಳಿಕ ಮತ್ತೊಂದು ಬ್ಲಾಕ್ ಬಸ್ಟರ್ ನಿರೀಕ್ಷೆಯಲ್ಲಿ ಸಂಜಯ್ ದತ್

ಬಾಲಿವುಡ್‌ನ ಅನುಭವಿ ನಟ ಸಂಜಯ್ ದತ್ (Sanjay Dutt) ಅವರಿಗೆ ಈಗ ಯಶಸ್ಸಿನ ಸುಗ್ಗಿಯ ಕಾಲ. ಇತ್ತೀಚೆಗಷ್ಟೇ ತೆರೆಕಂಡ ‘ಧುರಂಧರ್’ ಮತ್ತು ‘ಧುರಂಧರ್ 2’ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಸಾವಿರಾರು ಕೋಟಿ ರೂಪಾಯಿ ಗಳಿಸಿ ಅಭೂತಪೂರ್ವ ಯಶಸ್ಸು ಸಾಧಿಸಿವೆ. ಈ ಗೆಲುವಿನ ಬೆನ್ನಲ್ಲೇ ಸಂಜಯ್ ದತ್ ಈಗ ‘ರಾಜ ಶಿವಾಜಿ’ (Raja Shivaji) ಐತಿಹಾಸಿಕ ಚಿತ್ರದ ಮೂಲಕ ಮತ್ತೊಂದು ಬ್ಲಾಕ್‌ಬಸ್ಟರ್ ನೀಡಲು ಸಜ್ಜಾಗಿದ್ದಾರೆ. ಅಲ್ಲದೇ, ‘ಆಖ್ರಿ ಸವಾಲ್’ ಸಿನಿಮಾ ಕೂಡ ಬಿಡುಗಡೆಗೆ ಸಜ್ಜಾಗಿದೆ.

ಮರಾಠ ಸಾಮ್ರಾಜ್ಯದ ಕಥೆಯಿರುವ ‘ರಾಜ ಶಿವಾಜಿ’ ಸಿನಿಮಾದಲ್ಲಿ ಸಂಜಯ್ ದತ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರದ ಟೀಸರ್ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಈ ಸಿನಿಮಾಗೆ ರಿತೇಶ್ ದೇಶ್​ಮುಖ್ ಅವರು ಹೀರೋ. ಸಂಜಯ್ ದತ್ ಅವರು ಅಫ್ಜಲ್ ಖಾನ್​ನ ಪಾತ್ರವನ್ನು ಮಾಡಿದ್ದಾರೆ. ಹಾಗಾಗಿ ನಿರೀಕ್ಷೆ ಜಾಸ್ತಿ ಇದೆ.

‘ರಾಜ ಶಿವಾಜಿ’ ಟೀಸರ್ ಬಿಡುಗಡೆ ಆದ ಬಳಿಕ ಚಿತ್ರದ ಮೇಲಿನ ನಿರೀಕ್ಷೆ ಡಬಲ್ ಆಗಿದೆ. ಅದ್ದೂರಿ ಬಜೆಟ್​ನಲ್ಲಿ ಈ ಸಿನಿಮಾ ನಿರ್ಮಾಣ ಆಗಿದೆ. ಹಿಂದಿ ಮತ್ತು ಮರಾಠಿ ಭಾಷೆಯಲ್ಲಿ ಈ ಚಿತ್ರ ರಿಲೀಸ್ ಆಗಲಿದೆ. ಸಂಜಯ್ ದತ್ ಸಲುವಾಗಿಯೇ ಈ ಸಿನಿಮಾ ನೋಡಬೇಕು ಎಂಬ ಅಪ್ಪಟ ಫ್ಯಾನ್ಸ್ ಕೂಡ ಇದ್ದಾರೆ. ಮೇ 1ರಂದು ಭರ್ಜರಿಯಾಗಿ ಸಿನಿಮಾ ತೆರೆಕಾಣಲಿದೆ.

‘ರಾಜ ಶಿವಾಜಿ’ ಟೀಸರ್:

ಇದರ ಜೊತೆಗೆ ಅವರು ‘ಆಖ್ರಿ ಸವಾಲ್’ ಚಿತ್ರದಲ್ಲೂ ಸಂಜತ್ ದತ್ ನಟಿಸಿದ್ದಾರೆ. ಇದರ ಫಸ್ಟ್ ಲುಕ್ ಪೋಸ್ಟರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಈಗ ಟೀಸರ್ ಕೂಡ ಗಮನ ಸೆಳೆಯುತ್ತಿದೆ. ಆರ್‌ಎಸ್‌ಎಸ್‌ನ 100 ವರ್ಷಗಳ ಪಯಣದ ಕಥೆ ಹೊಂದಿರುವ ಈ ಚಿತ್ರವು ಮೇ 8ರಂದು ಬಿಡುಗಡೆಯಾಗಲಿದೆ. ಸತತ ಹಿಟ್‌ಗಳ ಮೂಲಕ ಸಂಜಯ್ ದತ್ ಅವರು 2026ರ ಸಾಲಿನಲ್ಲಿ ಭಾರತೀಯ ಚಿತ್ರರಂಗದ ಅತ್ಯಂತ ಬೇಡಿಕೆಯ ನಟನಾಗಿ ಹೊರಹೊಮ್ಮುತ್ತಿದ್ದಾರೆ.

ಇದನ್ನೂ ಓದಿ: ‘ರಾಜಾ ಶಿವಾಜಿ’ ಪಾತ್ರದಲ್ಲಿ ಅಬ್ಬರಿಸಿದ ರಿತೇಶ್ ದೇಶ್‌ಮುಖ್; ಟೀಸರ್ ಹೇಗಿದೆ ನೋಡಿ

ಬಾಲಿವುಡ್ ಮಾತ್ರವಲ್ಲದೇ ದಕ್ಷಿಣ ಭಾರತದಲ್ಲೂ ಸಂಜಯ್ ದತ್ ಅವರಿಗೆ ಸಖತ್ ಬೇಡಿಕೆ ಇದೆ. ಕನ್ನಡದ ‘ಕೆಡಿ ದಿ ಡೆವಿಲ್’ ಸಿನಿಮಾದಲ್ಲಿ ಕೂಡ ಸಂಜಯ್ ದತ್ ಅವರು ನಟಿಸಿದ್ದಾರೆ. ಹಾಡುಗಳು ಮೂಲಕ ಸದ್ದು ಮಾಡಿರುವ ಈ ಸಿನಿಮಾ ಕೂಡ ಶೀಘ್ರದಲ್ಲೇ ಬಿಡುಗಡೆ ಆಗಲಿದೆ. ಈ ಚಿತ್ರವೂ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *