ಬೆಂಗಳೂರಿನಲ್ಲಿ ಮಂತ್ರಿ ಬಿಲ್ಡರ್ಸ್ ಮೇಲೆ ಇಡಿ ದಾಳಿ: ಮತ್ತೆ ಶಾಕ್​ ಕೊಟ್ಟ ದೆಹಲಿ ಅಧಿಕಾರಿಗಳು

ಬೆಂಗಳೂರಿನಲ್ಲಿ ಮಂತ್ರಿ ಬಿಲ್ಡರ್ಸ್ ಮೇಲೆ ಇಡಿ ದಾಳಿ: ಮತ್ತೆ ಶಾಕ್​ ಕೊಟ್ಟ ದೆಹಲಿ ಅಧಿಕಾರಿಗಳು

ಬೆಂಗಳೂರು, ಏಪ್ರಿಲ್​ 02: ಪ್ರಮುಖ ರಿಯಲ್​ ಎಸ್ಟೇಟ್​ ಸಂಸ್ಥೆಗಳಲ್ಲಿ ಒಂದಾದ ಮಂತ್ರಿ ಡೆವಲಪರ್ಸ್ ಮತ್ತು ಬಿಲ್ಡರ್ಸ್​​​ಗೆ (Mantri Developers and Builders) ಸೇರಿದ 8 ಕಡೆಗಳಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಗುರುವಾರ ದಾಳಿ ಮಾಡಿದ್ದಾರೆ. ದೆಹಲಿಯಿಂದ ಆಗಮಿಸಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿವಿಧ ಸ್ಥಳಗಳಲ್ಲಿ ಬೆಳಗ್ಗೆಯಿಂದ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ದಾಳಿಗೆ ಕಾರಣವೇನು?

ಅಕ್ರಮ ಹಣ ವರ್ಗಾವಣೆ ಮತ್ತು ದೆಹಲಿಯಲ್ಲಿ ಫ್ಲ್ಯಾಟ್ ಕೊಡುವುದಾಗಿ ಸಾರ್ವಜನಿಕರಿಂದ ಹಣ ಪಡೆದು ಫ್ಲ್ಯಾಟ್ ನೀಡದೆ ವಂಚಿಸಿರುವ ಆರೋಪ ಕೇಳಿಬಂದಿದೆ. ಮಂತ್ರಿ ಡೆವಲಪರ್ಸ್ ಬಹುತೇಕ ನಗದು ವರ್ಗಾವಣೆ ಮಾಡಿಸಿಕೊಂಡಿದೆ. ಹೀಗಾಗಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಶಾಕ್ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮಂತ್ರಿ ಡೆವಲಪರ್ಸ್​ ಮೇಲೆ ಇಡಿ ದಾಳಿ! ಅಕ್ರಮ ಹಣ ವರ್ಗಾವಣೆ ಆರೋಪ

ದಕ್ಷಿಣ ಭಾರತದ ಅತಿದೊಡ್ಡ ರಿಯಲ್ ಎಸ್ಟೇಟ್ ಬಿಲ್ಡರ್ ಸಂಸ್ಥೆ ಮಂತ್ರಿ ಡೆವಲಪರ್ಸ್ ಮೇಲೆ ಇದೀಗ ಮತ್ತೆ ಇ.ಡಿ ದಾಳಿ ಮಾಡಿದೆ. ದೆಹಲಿಯಿಂದ ಆಗಮಿಸಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು 8 ಕಡೆಗಳಲ್ಲಿ ಶೋಧ ನಡೆಸಿದ್ದಾರೆ. ಮಂತ್ರಿ ಡೆವಲಪರ್ಸ್ ಮತ್ತು ಬಿಲ್ಡರ್ಸ್​ ಮೇಲೆ ಇ.ಡಿ ದಾಳಿ ಮಾಡುತ್ತಿರುವುದು ಇದೇ ಮೊದಲೇನಲ್ಲ ಈ ಹಿಂದೆ 2022 ಮತ್ತು 23ರಲ್ಲಿ ಸೇರಿದಂತೆ ಇತ್ತೀಚೆಗೆ ಕೂಡ ಸಂಸ್ಥೆ ಮೇಲೆ ಇ.ಡಿ ಕ್ರಮಕೈಗೊಂಡಿತ್ತು.

300 ಕೋಟಿ ರೂ ಆಸ್ತಿ ಜಪ್ತಿ

ಮಂತ್ರಿ ಡೆವಲಪರ್ಸ್ 1999ರಲ್ಲಿ ಸ್ಥಾಪನೆ ಆಗಿದ್ದು, ಬೆಂಗಳೂರು, ಚೆನೈ, ಹೈದರಾಬಾದ್ ಮತ್ತು ಪುಣೆಯಲ್ಲಿ ಸಂಸ್ಥೆ ತನ್ನ ಶಾಖೆ‌ಗಳನ್ನು ಹೊಂದಿದೆ. ಈ ಹಿಂದೆ ಅಂದರೆ 2023ರಲ್ಲಿ ಪ್ರಕರಣ ಸಂಬಂಧ ಮಂತ್ರಿ ಡೆವಲಪರ್ಸ್​ನ ಸುಮಾರು 300 ಕೋಟಿ ರೂ ಆಸ್ತಿಯನ್ನ ಜಪ್ತಿ ಮಾಡಿದ್ದ ಇ.ಡಿ, ಗ್ರಾಹಕರಿಗೆ ಅಪಾರ್ಟ್ಮೆಂಟ್​ಗೆಂದು ಹಣ ಪಡೆದು ವಂಚನೆ ಆರೋಪ ಎದುರಿಸುತ್ತಿದೆ.

ಇದನ್ನೂ ಓದಿ: ಮಂತ್ರಿ ಡೆವಲಪರ್ಸ್ ನಿರ್ದೇಶಕ ಸುಶೀಲ್ ಮಂತ್ರಿ ಅರೆಸ್ಟ್

ಈ ಹಿನ್ನಲೆ ಗ್ರಾಹಕರ ಹಣವನ್ನು ಹೊರದೇಶದಲ್ಲಿ ಬಂಡವಾಳ ಹೂಡಿಕೆ ಮಾಡಿದ್ದ ಆರೋಪವಿದೆ‌. ಇದೇ ಆರೋಪ ಹಿನ್ನಲೆ 2022ರಲ್ಲಿ ದಾಳಿ ಮಾಡಿದ್ದ ಇ.ಡಿ, ಇದೇ ಪ್ರಕರಣ ಸಂಬಂಧ 2023ರಲ್ಲಿ ಮಂತ್ರಿ ಡೆವಲಪರ್ಸ್​ನ ಸುಮಾರು 300 ಕೋಟಿ ರೂ ಸ್ಥಿರಾಸ್ತಿ ಜಪ್ತಿ ಮಾಡಿತ್ತು. ಈಗ ಮತ್ತೆ ಅಕ್ರಮ ಹಣ ವರ್ಗಾವಣೆ ಆರೋಪ ಹಿನ್ನಲೆ ಇಡಿ ದಾಳಿ ಮಾಡಿದ್ದು, ದಾಖಲೆಗಳ ಪರಿಶೀಲನೆ ಮಾಡಲಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *