‘ರಾಮಾಯಣ’ ಟೀಸರ್​ನಲ್ಲಿ ದೊಡ್ಡ ತಪ್ಪು; AI ಅಲ್ಲಿ ಮಾಡಿದ್ದು ಎಂದು ಕಂಡು ಹಿಡಿದ ಫ್ಯಾನ್ಸ್

‘ರಾಮಾಯಣ’ ಟೀಸರ್​ನಲ್ಲಿ ದೊಡ್ಡ ತಪ್ಪು; AI ಅಲ್ಲಿ ಮಾಡಿದ್ದು ಎಂದು ಕಂಡು ಹಿಡಿದ ಫ್ಯಾನ್ಸ್

ಬಹುನಿರೀಕ್ಷಿತ ‘ರಾಮಾಯಣ’ ಟೀಸರ್ (Ramayana Teaser) ಹನುಮ ಜಯಂತಿ ಪ್ರಯುಕ್ತ ಏಪ್ರಿಲ್ 2ರಂದು ರಿಲೀಸ್ ಆಯಿತು. ಸಿನಿಮಾದ ಬಜೆಟ್ 2 ಸಾವಿರ ಕೋಟಿ ರೂಪಾಯಿ, 4 ಸಾವಿರ ಕೋಟಿ ರೂಪಾಯಿ ಎಂದೆಲ್ಲ ಹೇಳಲಾಗಿದೆ. ಈ ಕಾರಣದಿಂದಲೇ ಸಿನಮಾದ ಟೀಸರ್ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಜನರು ಸಿನಿಮಾದಿಂದ ದೊಡ್ಡದನ್ನು ನಿರೀಕ್ಷೆ ಮಾಡುತ್ತಿದ್ದಾರೆ. ಆದರೆ, ಟೀಸರ್ ನೋಡಿದ ಬಳಿಕ ಸಾಕಷ್ಟು ಟೀಕೆ ಎದುರಾಗಿದೆ. ಟೀಸರ್​​​ನಲ್ಲಿರುವ ಎರಡು ದೊಡ್ಡ ತಪ್ಪನ್ನು ನೆಟ್ಟಿಗರು ಕಂಡು ಹಿಡಿದಿದ್ದಾರೆ.

ದೊಡ್ಡ ಬಜೆಟ್ ಸಿನಿಮಾ ಮಾಡಬೇಕು ಎಂದಾಗ ಅದಕ್ಕೆ ಅಷ್ಟೇ ಸಿದ್ಧತೆ ಬೇಕಾಗುತ್ತದೆ. ನಿರ್ದೇಶಕರು ಸಾಕಷ್ಟು ಮುಂದಾಲೋಚನೆ ಹೊಂದಿರಬೇಕಾಗುತ್ತದೆ. ಸಣ್ಣ ಸಣ್ಣ ವಿಷಯಗಳನ್ನು ಗಮನಿಸಬೇಕಾಗುತ್ತದೆ. ಇಲ್ಲವಾದಲ್ಲಿ ಅಲ್ಲಿಯೂ ಜನರು ತಪ್ಪು ಕಂಡು ಹಿಡಿಯುತ್ತಾರೆ. ಆದಿತ್ಯ ಧಾರ್ ಅವರ ‘ಧುರಂಧರ್ 2’ ಚಿತ್ರವನ್ನು ಜನರು ಹೊಗಳಿದ್ದರು. ಆದಿತ್ಯ ಧಾರ್ ಅವರ ಪೀಕ್ ಡೀಟೇಲಿಂಗ್ ಎಂದು ಬೆನ್ನು ತಟ್ಟಿದ್ದರು. ಆದರೆ, ಸಿನಿಮಾದಲ್ಲಿರುವ ತಪ್ಪುಗಳನ್ನು ಕೆಲವರು ಎತ್ತಿ ತೋರಿಸಿದ್ದರು. ಈಗ ‘ರಾಮಾಯಣ’ ಟೀಸರ್​ ಅಲ್ಲೇ ಕೆಲವು ತಪ್ಪು ಕಂಡು ಹಿಡಿದಿದ್ದು, ಇದಕ್ಕೆ ನಿರ್ದೇಶಕ ನಿತೇಶ್ ತಿವಾರಿ ಅವರು ಸಾಕಷ್ಟು ಟೀಕೆ ಎದುರಿಸಿದ್ದಾರೆ.
ಇದನ್ನೂ ಓದಿ: ರಾಮಾಯಣ ಟೀಸರ್: ‘ಇದಕ್ಕಿಂತ ಆದಿಪುರುಷ್ ಎಷ್ಟೋ ಚೆನ್ನಾಗಿತ್ತು’ ಎಂದ ನೆಟ್ಟಿಗರು

ರಾಮ ಜನರ ಮಧ್ಯೆ ನಡೆದುಕೊಂಡು ಬರುವ ದೃಶ್ಯವಿದೆ. ಆಗ ಬಾಲಕನೋರ್ವ ನಮಸ್ಕರಿಸುತ್ತಾನೆ. ರಾಮ ಸ್ವಲ್ಪ ಮುಂದೆ ಹೋದರೆ ಇದೇ ಬಾಲಕ ರಾಮನಿಗೆ ಹೂವನ್ನು ಹಾಕುತ್ತಾ ಇರುತ್ತಾನೆ. ಇದು ದೊಡ್ಡ ತಪ್ಪುಗಳಲ್ಲಿ ಒಂದು. ಇದನ್ನು ಎಐ ಅಲ್ಲಿ ಮಾಡಿರಬಹುದು ಅಥವಾ ಆ ಬಾಲಕನ್ನನ್ನೇ ಮತ್ತೆ ಬಳಸಿಕೊಂಡಿರಬಹುದು ಎಂದು ಊಹಿಸಲಾಗಿದೆ.

ಇನ್ನು, ಮತ್ತೂ ಒಂದು ತಪ್ಪನ್ನು ಎತ್ತಿ ತೋರಿಸಲಾಗಿದೆ. ರಾಮ ಯುದ್ಧಕ್ಕೆ ಸಿದ್ಧನಾಗಿ ನಿಂತಿರುತ್ತಾನೆ. ಎದುರಿನವರ ಮೇಲೆ ಬಾಣ ಹೂಡಲು ರೆಡಿ ಆಗಿರುತ್ತಾನೆ. ಆದರೆ, ಆತನ ಸೈನಿಕರು ಮಾತ್ರ ಇನ್ಯಾವುದೋ ಕಡೆ ನೋಡುತ್ತಾ ನಿಂತಿದ್ದಾರೆ. ಇದು ಎಐನಿಂದ ಮಾಡಿದ ಫೋಟೋ ಎಂಬುದು ನೆಟ್ಟಿಗರಿಗೆ ಸ್ಪಷ್ಟವಾಗಿ ಕಾಣಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *