ಪೆಟ್ರೋಲ್​ಗೆ ಕೇಂದ್ರ, ರಾಜ್ಯ ತೆರಿಗೆಗಳು, ಕಮಿಷನ್​ಗಳೆಷ್ಟು? ಜಿಎಸ್​ಟಿಯಿಂದ ಬೆಲೆ ಕಡಿಮೆ ಆಗುತ್ತಾ?

ಪೆಟ್ರೋಲ್​ಗೆ ಕೇಂದ್ರ, ರಾಜ್ಯ ತೆರಿಗೆಗಳು, ಕಮಿಷನ್​ಗಳೆಷ್ಟು? ಜಿಎಸ್​ಟಿಯಿಂದ ಬೆಲೆ ಕಡಿಮೆ ಆಗುತ್ತಾ?

ನವದೆಹಲಿ, ಏಪ್ರಿಲ್ 2: ಜಾಗತಿಕ ಕಚ್ಛಾ ತೈಲ ಬೆಲೆ ಇದೇ ರೀತಿ ಅಧಿಕ ಮಟ್ಟದಲ್ಲೇ ಇದ್ದರೆ ಪೆಟ್ರೋಲ್ ಮತ್ತು ಡೀಸಲ್ ರೀಟೇಲ್ ಬೆಲೆಗಳನ್ನು ಏರಿಸುವುದು ಅನಿವಾರ್ಯವಾಗಬಹುದು. ಸಾಮಾನ್ಯ ಜನರಿಗೆ ಬೆಲೆ ಏರಿಕೆಯ ಬಿಸಿ ತಾಗಬಾರದೆಂದು ಸರ್ಕಾರ ಬೆಲೆ ಏರಿಕೆಯನ್ನು ತಡೆ ಹಿಡಿದಿದೆ. ಒಂದಷ್ಟು ಸೆಂಟ್ರಲ್ ಎಕ್ಸೈಸ್ ಟ್ಯಾಕ್ಸ್ ಅನ್ನು ತಗ್ಗಿಸಿ, ರೀಟೇಲ್ ಬೆಲೆ (Petrol price) ಏರಿಕೆಯನ್ನು ತಾತ್ಕಾಲಿಕವಾಗಿ ತಡೆಹಿಡಿದಿದೆ.

ಪೆಟ್ರೋಲ್ ಮೇಲೆ ಯಾವೆಲ್ಲಾ ತೆರಿಗೆಗಳಿವೆ? ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಪೆಟ್ರೋಲ್ ಬೆಲೆ ಯಾಕೆ ವ್ಯತ್ಯಾಸ ಇರುತ್ತದೆ? ಪೆಟ್ರೋಲ್, ಡೀಸಲ್ ಅನ್ನು ಜಿಎಸ್​ಟಿ ವ್ಯಾಪ್ತಿಗೆ ತಂದರೆ ಬೆಲೆ ಕಡಿಮೆ ಆಗಬಹುದು ಎನ್ನುವ ವಾದ ಸರಿಯಾ? ಏನದರ ಲೆಕ್ಕಾಚಾರ… ಇಲ್ಲಿದೆ ಮಾಹಿತಿ

ಪೆಟ್ರೋಲ್ ಮೇಲೆ ಕೇಂದ್ರಕ್ಕಿಂತ ರಾಜ್ಯಗಳಿಂದಲೇ ಹೆಚ್ಚಿನ ತೆರಿಗೆ

ಒಂದು ಲೀಟರ್ ಪೆಟ್ರೋಲ್ ಮತ್ತು ಡೀಸಲ್​ನ ಬೆಲೆಯಲ್ಲಿ ಯಾವೆಲ್ಲಾ ಅಂಶಗಳ ಪ್ರಭಾವ ಇರುತ್ತದೆ, ನೋಡಿ…

  • ಒಎಂಸಿ ಮೂಲ ಬೆಲೆ
  • ಕೇಂದ್ರೀಯ ತೆರಿಗೆಗಳು
  • ರಾಜ್ಯದ ತೆರಿಗೆಗಳು (ವ್ಯಾಟ್)
  • ಡೀಲರ್ ಕಮಿಷನ್

ಇದನ್ನೂ ಓದಿ: ಟ್ರಂಪ್ ಸರ್ಕಾರದಿಂದ ಫಾರ್ಮಾ ಉತ್ಪನ್ನಗಳಿಗೆ ನೂರಕ್ಕೆ ನೂರು ಟ್ಯಾರಿಫ್; ಲೋಹಗಳಿಗೂ ಭರ್ಜರಿ ಸುಂಕ

ಕೇಂದ್ರೀಯ ತೆರಿಗೆಗಳಲ್ಲಿ, ಬೇಸಿಕ್ ಎಕ್ಸೈಸ್ ಡ್ಯೂಟಿ, ರೋಡ್ ಅಂಡ್ ಇನ್​ಫ್ರಾಸ್ಟ್ರಕ್ಚರ್ ಸೆಸ್, ಅಗ್ರಿಕಲ್ಚರ್ ಇನ್​ಫ್ರಾಸ್ಟ್ರಕ್ಚರ್ ಅಂಡ್ ಡೆವಲಪ್ಮೆಂಟ್ ಸೆಸ್ ಮತ್ತು ಸ್ಪೆಷಲ್ ಅಡಿಶನಲ್ ಎಕ್ಸೈಸ್ ಡ್ಯೂಟಿ ಇರುತ್ತವೆ.

ರಾಜ್ಯ ತೆರಿಗೆಗಳಲ್ಲಿ ವ್ಯಾಟ್, ಫಿಕ್ಸೆಡ್ ಸೆಸ್, ಅಡಿಶನಲ್ ಟ್ಯಾಕ್ಸ್, ಎನ್ವಿರಾನ್ಮೆಂಟ್ ಸೆಸ್ ಇತ್ಯಾದಿ ಒಳಗೊಂಡಿವೆ. ವ್ಯಾಟ್ ಎಂಬುದು ಶೇಕಡವಾರು ಲೆಕ್ಕದಲ್ಲಿ ಇರುತ್ತದೆ. ಸೆಸ್ ನಿಶ್ಚಿತ ದರವಾಗಿರುತ್ತದೆ.

ಕರ್ನಾಟಕದಲ್ಲಿ ಎಷ್ಟಿದೆ ಟ್ಯಾಕ್ಸ್

ಬೆಂಗಳೂರಿನಲ್ಲಿ ಇವತ್ತಿನ 1 ಲೀಟರ್ ಪೆಟ್ರೋಲ್ ಬೆಲೆ: 102.63 ರೂ

  • ಮೂಲ ಬೆಲೆ: 64.56 ರೂ
  • ಕೇಂದ್ರ ತೆರಿಗೆ: 11.90 ರೂ
  • ಕರ್ನಾಟಕದ ತೆರಿಗೆ: 23.59 ರೂ
  • ಡೀಲರ್ ಕಮಿಷನ್: 2.58 ರೂ

ಭಾರತದಲ್ಲಿ ಅತಿಹೆಚ್ಚು ಟ್ಯಾಕ್ಸ್ ಹಾಕುವ ರಾಜ್ಯಗಳ ಸಾಲಿನಲ್ಲಿ ಕರ್ನಾಟಕ ಇದೆ. ದೆಹಲಿಯಲ್ಲಿ ಬಹಳ ಕಡಿಮೆ ಟ್ಯಾಕ್ಸ್ ಹಾಕಲಾಗುತ್ತದೆ. ಹೀಗಾಗಿ, ಪೆಟ್ರೋಲ್ ಬೆಲೆ ದೆಹಲಿಯಲ್ಲಿ ಕರ್ನಾಟಕಕ್ಕಿಂತ ಕಡಿಮೆ ಇರುತ್ತದೆ. ರಾಜ್ಯದಿಂದ ರಾಜ್ಯಕ್ಕೆ ಬೆಲೆಯಲ್ಲಿ ಏರುಪೇರಾಗುವುದು ಇದೇ ತೆರಿಗೆ ವ್ಯತ್ಯಾಸದಿಂದ.

ಇದನ್ನೂ ಓದಿ: ಪೆಟ್ರೋಕೆಮಿಕಲ್ ಉತ್ಪನ್ನಗಳಿಗೆ ಆಮದು ಸುಂಕದಿಂದ ವಿನಾಯಿತಿ; ಹಲವು ಉದ್ಯಮಗಳಿಗೆ ಅನುಕೂಲ

ಪೆಟ್ರೋಲ್ ಅನ್ನು ಜಿಎಸ್​ಟಿ ವ್ಯಾಪ್ತಿಗೆ ತಂದರೆ?

ಪೆಟ್ರೋಲ್ ಮತ್ತು ಡೀಸಲ್ ಅನ್ನು ಜಿಎ್​ಟಿ ವ್ಯಾಪ್ತಿಗೆ ತಂದರೆ ಬೆಲೆ ಕಡಿಮೆ ಆಗುತ್ತದೆ. ಈಗಿರುವ ಅಬಕಾರಿ ಸುಂಕ ಮತ್ತು ವ್ಯಾಟ್ ವ್ಯವಸ್ಥೆಯಲ್ಲಿ ಪೆಟ್ರೋಲ್ ಬೆಲೆಯಲ್ಲಿ ಶೇ. 50ರಷ್ಟು ತೆರಿಗೆಯೇ ಇದೆ. ಸದ್ಯ ಜಿಎಸ್​ಟಿ ಎರಡು ಸ್ಲ್ಯಾಬ್ ಇದೆ. ಶೇ. 5 ಮತ್ತು ಶೇ. 18 ಟ್ಯಾಕ್ಸ್ ಸ್ಲ್ಯಾಬ್ ಇದೆ. ಶೇ. 18 ಜಿಎಸ್​ಟಿ ಹಾಕಿದರೆ ಬೆಲೆ ಪೆಟ್ರೋಲ್ ಬೆಲೆ 80 ರೂಗಿಂತ ಕಡಿಮೆ ಇರುತ್ತದೆ. ಶೇ. 40 ಜಿಎಸ್​ಟಿ ಹಾಕಿದರೂ ಬೆಲೆ 100 ರೂ ದಾಟುವುದಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *