
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 7ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ಹಾಗೂ ಪಂಜಾಬ್ ಕಿಂಗ್ಸ್ (PBKS) ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸಿಎಸ್‌ಕೆ ತಂಡವು 20 ಓವರ್‌ಗಳಲ್ಲಿ 209 ರನ್ ಕಲೆಹಾಕಿದ್ದರು. ಈ ಗುರಿಯನ್ನು ಪಂಜಾಬ್ ಕಿಂಗ್ಸ್ ತಂಡ ಕೇವಲ 18.4 ಓವರ್‌ಗಳಲ್ಲಿ 210 ರನ್ ಗಳಿಸಿ 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
ಇದರೊಂದಿಗೆ ಸಿಎಸ್‌ಕೆ ತಂಡವು ಆಡಿದ ಮೊದಲೆರಡು ಪಂದ್ಯಗಳಲ್ಲಿ ಸೋಲನುಭವಿಸಿದೆ. ಈ ಸೋಲಿಗೆ ಕಾರಣ ಪ್ರಮುಖ ಕಾರಣಗಳು ಇಲ್ಲಿವೆ:
ಶಿಸ್ತಿಲ್ಲದ ಬೌಲಿಂಗ್: ಸಿಎಸ್‌ಕೆ ಬೌಲರ್‌ಗಳು ಪಂದ್ಯದ ಮೇಲೆ ಹಿಡಿತ ಸಾಧಿಸಲು ವಿಫಲರಾದರು. ನಾಯಕ ರುತುರಾಜ್ ಗಾಯಕ್ವಾಡ್ ಅವರೇ ಒಪ್ಪಿಕೊಂಡಂತೆ ಬೌಲಿಂಗ್‌ನಲ್ಲಿ “ಶಿಸ್ತು” ಇರಲಿಲ್ಲ.
ಸ್ಪಿನ್ನರ್‌ಗಳ ವೈಫಲ್ಯ: ತಂಡದ ಪ್ರಮುಖ ಸ್ಪಿನ್ನರ್‌ಗಳಾದ ನೂರ್ ಅಹ್ಮದ್ ಮತ್ತು ರಾಹುಲ್ ಚಹರ್ ಯಾವುದೇ ವಿಕೆಟ್ ಪಡೆಯದೆ, 8 ಓವರ್‌ಗಳಲ್ಲಿ ಬರೋಬ್ಬರಿ 84 ರನ್ ಬಿಟ್ಟುಕೊಟ್ಟರು.
ಪ್ರಿಯಾಂಶ್ ಆರ್ಯ ಅವರ ಬಿರುಸಿನ ಬ್ಯಾಟಿಂಗ್: ಪಂಜಾಬ್‌ನ ಇಂಪ್ಯಾಕ್ಟ್ ಪ್ಲೇಯರ್ ಪ್ರಿಯಾಂಶ್ ಆರ್ಯ ಕೇವಲ 11 ಎಸೆತಗಳಲ್ಲಿ 39 ರನ್ (4 ಸಿಕ್ಸರ್) ಚಚ್ಚುವ ಮೂಲಕ ಪವರ್‌ಪ್ಲೇನಲ್ಲೇ ಪಂದ್ಯವನ್ನು ಪಂಜಾಬ್ ಕಿಂಗ್ಸ್ ಪರ ತಿರುಗಿಸಿದ್ದರು.
ಶ್ರೇಯಸ್ ಅಯ್ಯರ್ ಅವರ ನಾಯಕನ ಆಟ: ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಕೇವಲ 29 ಎಸೆತಗಳಲ್ಲಿ 50 ರನ್ ಗಳಿಸಿ ತಂಡಕ್ಕೆ ಸುಲಭ ಜಯ ತಂದುಕೊಟ್ಟರು.
ಗಾಯಕ್ವಾಡ್ ಅವರ ನಿಧಾನಗತಿಯ ಬ್ಯಾಟಿಂಗ್: ರುತುರಾಜ್ ಗಾಯಕ್ವಾಡ್ 22 ಎಸೆತಗಳಲ್ಲಿ 28 ರನ್ ಗಳಿಸಿದರು. ಅವರು ಇನ್ನಷ್ಟು ವೇಗವಾಗಿ ಆಡಿದ್ದರೆ ಸ್ಕೋರ್ 225 ದಾಟುತ್ತಿತ್ತು, ಆಗ ತಂಡಕ್ಕೆ ಗೆಲ್ಲಲು ಅವಕಾಶವಿರುತ್ತಿತ್ತು.
ಕಳಪೆ ಫೀಲ್ಡಿಂಗ್: ಮೈದಾನದಲ್ಲಿ ಸಿಎಸ್‌ಕೆ ಆಟಗಾರರ ಫೀಲ್ಡಿಂಗ್ ಅಷ್ಟೇನೂ ಪರಿಣಾಮಕಾರಿಯಾಗಿರಲಿಲ್ಲ, ಇದು ಬೌಲರ್‌ಗಳಿಗೆ ಹಿನ್ನಡೆಯಾಯಿತು.
ಚೆಪಾಕ್ ಕೋಟೆ ಕುಸಿತ: ಈ ಸೋಲಿನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ತವರು ಮೈದಾನವಾದ ಚೆಪಾಕ್‌ನಲ್ಲಿ ಸತತ 6ನೇ ಸೋಲು ಅನುಭವಿಸಿತು. ಅದರಲ್ಲೂ ಈ ಬಾರಿ ಟೂರ್ನಿಯಲ್ಲಿ ಚೆಪಾಕ್‌ನಲ್ಲಿ ಶುಭಾರಂಭ ಮಾಡುವಲ್ಲಿ ವಿಫಲವಾಗಿದೆ.
ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ 11: ಶ್ರೇಯಸ್ ಅಯ್ಯರ್ (ನಾಯಕ), ಪ್ರಭ್ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಕೂಪರ್ ಕೊನೊಲಿ, ಶಶಾಂಕ್ ಸಿಂಗ್, ನೆಹಾಲ್ ವಧೇರಾ, ಮಾರ್ಕಸ್ ಸ್ಟೊಯಿನಿಸ್, ಮಾರ್ಕೊ ಯಾನ್ಸೆನ್, ಕ್ಸೇವಿಯರ್ ಬಾರ್ಟ್ಲೆಟ್, ವೈಶಾಕ್ ವಿಜಯಕುಮಾರ್, ಅರ್ಷದೀಪ್ ಸಿಂಗ್, ಯುಜ್ವೇಂದ್ರ ಚಹಲ್.
ಇದನ್ನೂ ಓದಿ: IPL 2026: CSK ದಾಂಡಿಗರ ಆರ್ಭಟಕ್ಕೆ RCB ದಾಖಲೆ ಧೂಳೀಪಟ
ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್ 11: ರುತುರಾಜ್ ಗಾಯಕ್ವಾಡ್ (ನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಆಯುಷ್ ಮ್ಹಾತ್ರೆ, ಸರ್ಫರಾಝ್ ಖಾನ್, ಶಿವಂ ದುಬೆ, ಕಾರ್ತಿಕ್ ಶರ್ಮಾ, ಪ್ರಶಾಂತ್ ವೀರ್, ನೂರ್ ಅಹ್ಮದ್, ಅನ್ಶುಲ್ ಕಂಬೋಜ್, ಮ್ಯಾಟ್ ಹೆನ್ರಿ, ಖಲೀಲ್ ಅಹ್ಮದ್.