
ಬೆಂಗಳೂರು, (ಏಪ್ರಿಲ್ 05): ಕರ್ನಾಟಕದ ಶಾಸಕರಿಗೆ ಐಪಿಎಲ್ ಟಿಕೆಟ್ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅಧಿವೇಶದಲ್ಲೇ ಐಪಿಎಲ್ ಟಿಕೆಟ್ಗೆ ಬೇಡಿ ಕೊನೆಗೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಓರ್ವ ಶಾಸಕನಿಗೆ ಮೂರು ಐಪಿಎಲ್ ನೀಡಲು ಕೆಎಸ್ಸಿಎ ತೀರ್ಮಾನಿಸಿದ್ದು, ಅದರಂತೆ ಆರ್ಸಿಬಿ ಹಾಗೂ ಸಿಎಸ್ಕೆ ನಡುವೆ ಪಂದ್ಯದ ಟಿಕೆಟ್ ಗಾಗಿ ಶಾಸಕರು ಪಿಎಗಳು ಕ್ಯೂ ನಿಂತುಕೊಂಡು ಟಿಕೆಟ್ ಪಡೆದುಕೊಂಡಿದ್ದು, ಇದೀಗ ಬಿಜೆಪಿ ಶಾಸಕರು ಹಾಗೂ ಸಂಸದರು ಆರ್ಸಿಬಿ ಹಾಗೂ ಸಿಎಸ್ಕೆ ಪಂದ್ಯ ವೀಕ್ಷಣೆಗೆ ಚಿನ್ನಸ್ವಾಮಿ ಸ್ಟೇಡಿಯಂಗೆ ಆಗಮಿಸಿದ್ದಾರೆ. ಬಿಜೆಪಿ ಸಂಸದರಾದ ಬಿವೈ ರಾಘವೇಂದ್ರ, ಡಾ ಸಿ.ಎನ್ ಮಂಜುನಾಥ್ ಹಾಗೂ ಬಿಜೆಪಿ ಶಾಸಕ ಡಾ ಅಶ್ವಥ್ ನಾರಾಯಣ ಮತ್ತು ಜೆಡಿಎಸ್ ಎಂಎಲ್ಸಿ ಶರವಣ ಅವರು ಕುಟುಂಬ ಸಮೇತ ಪಂದ್ಯ ವೀಕ್ಷಿಸುತ್ತಿದ್ದಾರೆ.