
ನವದೆಹಲಿ, ಏಪ್ರಿಲ್ 8: ಭಾರತೀಯ ರಿಸರ್ವ್ ಬ್ಯಾಂಕ್ನ ಮಾನಿಟರಿ ಪಾಲಿಸಿ ಸಮಿತಿಯು (RBI MPC meeting) ನಿರೀಕ್ಷೆಯಂತೆ ರಿಪೋ ದರದ ಯಥಾಸ್ಥಿತಿ ಮುಂದುವರಿಸಲು ನಿರ್ಧರಿಸಿದೆ. ಮೊನ್ನೆಯಿಂದ ನಡೆದ ಆರ್ಬಿಐ ಎಂಪಿಸಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರೊಂದಿಗೆ ಆರ್ಬಿಐನ ರಿಪೋ ದರ ಅಥವಾ ಬಡ್ಡಿದರವು (Repo Rate) ಶೇ. 5.25ರಲ್ಲಿ ಮುಂದುವರಿಯಲಿದೆ. ಪಶ್ಚಿಮ ಏಷ್ಯಾ ಯುದ್ಧದ ಪರಿಣಾಮ ಹಣದುಬ್ಬರ ಏರಿಕೆಯಾಗುವ ಸಾಧ್ಯತೆ ಇದ್ದರಿಂದ ಬಡ್ಡಿದರ ಇಳಿಸದೇ ಇರುವ ತೀರ್ಮಾನವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.
ಎಂಪಿಸಿ ಸಭೆ ಬಳಿಕ ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಪತ್ರಿಕಾಗೋಷ್ಠಿ ಕರೆದು ಪಾಲಿಸಿ ನಿರ್ಧಾರಗಳನ್ನು ಪ್ರಕಟಿಸಿದರು. ಹಾಗೆಯೇ, 2026-27ರ ವರ್ಷಕ್ಕೆ ಜಿಡಿಪಿ ಬೆಳವಣಿಗೆ ಮತ್ತು ಹಣದುಬ್ಬರ ಎಷ್ಟಾಗಬಹುದು ಎಂದು ಮಾಡಲಾಗಿರುವ ಅಂದಾಜನ್ನೂ ಬಹಿರಂಗಪಡಿಸಿದರು.
ಇದನ್ನೂ ಓದಿ: ಪಶ್ಚಿಮ ಏಷ್ಯಾ ಬಿಕ್ಕಟ್ಟಿಗೆ ಸಿಲುಕಿರುವ ಸಣ್ಣ ಉದ್ದಿಮೆಗಳಿಗೆ ಸರ್ಕಾರದಿಂದ 2.5 ಲಕ್ಷ ಕೋಟಿ ರೂ ಸಾಲ ಖಾತ್ರಿ ಯೋಜನೆ ನೆರವು
2026-27ರಲ್ಲಿ ಶೇ. 4.6 ಹಣದುಬ್ಬರ
ಈ ಹಣಕಾಸು ವರ್ಷದಲ್ಲಿ (2026-27) ಹಣದುಬ್ಬರ ಶೇ. 4.6 ಇರಬಹುದು ಎಂದು ಆರ್ಬಿಐ ಪ್ರೊಜೆಕ್ಟ್ ಮಾಡಿದೆ. ಮೊದಲ ಕ್ವಾರ್ಟರ್ನಲ್ಲಿ ಶೇ. 4, ಎರಡನೇ ಕ್ವಾರ್ಟರ್ನಲ್ಲಿ ಶೇ. 4.4, ಮೂರನೇ ಕ್ವಾರ್ಟರ್ನಲ್ಲಿ ಶೇ. 5.2, ನಾಲ್ಕನೇ ಕ್ವಾರ್ಟರ್ನಲ್ಲಿ ಶೇ. 4.7ರಷ್ಟು ಹಣದುಬ್ಬರ ಇರಬಹುದು ಎನ್ನುವುದು ಆರ್ಬಿಐ ಎಂಪಿಸಿಯಲ್ಲಿ ಬಂದಿರುವ ಅಭಿಪ್ರಾಯ.
ಇನ್ನಷ್ಟು ಮಾಹಿತಿ ನಿರೀಕ್ಷಿಸಿ….