‘ಇಂಡಿಯಾ ಗಾಟ್ ಲೇಟೆಂಟ್’: ಮತ್ತೆ ಬರಲಿದ್ದಾರೆ ಸಮಯ್ ರೈನಾ

‘ಇಂಡಿಯಾ ಗಾಟ್ ಲೇಟೆಂಟ್’: ಮತ್ತೆ ಬರಲಿದ್ದಾರೆ ಸಮಯ್ ರೈನಾ

ಕಳೆದ ಕೆಲ ವರ್ಷಗಳಿಂದ ಭಾರತದಲ್ಲಿ ಬಲು ವೇಗವಾಗಿ ಬೆಳೆಯುತ್ತಿರುವ ಸ್ಟಾಂಡಪ್ ಕಾಮಿಡಿ ಕ್ಷೇತ್ರದಲ್ಲಿ ದೊಡ್ಡ ಹೆಸರು ಸಮಯ್ ರೈನಾ (Samai Raina) ಅವರದ್ದು. ಚೆಸ್ ಸ್ಟ್ರೀಮರ್ ಆಗಿ ಬಳಿಕ ಯೂಟ್ಯೂಬ್ ಸ್ಟ್ರೀಮರ್, ಸ್ಟಾಂಡಪ್ ಕಮಿಡಿಯನ್, ಯೂಟ್ಯೂಬ್ ಶೋ ಹೋಸ್ಟ್ ಆಗಿ ಗುರುತಿಸಿಕೊಂಡಿದ್ದ ಸಮಯ್ ರೈನಾ, ಯೂಟ್ಯೂಬ್​​ನಲ್ಲಿ ಆರಂಭಿಸಿದ್ದ ‘ಇಂಡಿಯಾ ಗಾಟ್ ಲೇಟೆಂಟ್’ ಶೋ ಭಾರಿ ದೊಡ್ಡ ಹಿಟ್ ಆಗಿತ್ತು. ಒಂದೇ ದಿನಕ್ಕೆ ಕೋಟ್ಯಂತರ ವೀವ್ಸ್ ಅನ್ನು ಈ ಶೋ ಗಳಿಸುತ್ತಿತ್ತು. ಆದರೆ ಯಾರೋ ಮಾಡಿದ ತಪ್ಪಿನಿಂದಾಗಿ ಶೋ ಅನ್ನು ಬಂದ್ ಮಾಡಿದ್ದು, ಮಾತ್ರವಲ್ಲದೆ ಹಳೆಯ ಎಲ್ಲ ವಿಡಿಯೋಗಳನ್ನು ಡಿಲೀಟ್ ಮಾಡಬೇಕಾಯ್ತು ಸಮಯ್ ರೈನಾ. ಪೊಲೀಸ್ ಎಫ್​ಐಆರ್, ಹಲವು ಕೇಸುಗಳ ಬಳಿಕ ಈ ಶೋ ಮತ್ತೆ ಪ್ರಾರಂಭವೇ ಆಗುವುದಿಲ್ಲ ಎಂದುಕೊಳ್ಳಲಾಗಿತ್ತು. ಆದರೆ ಇದೀಗ ಸ್ವತಃ ಸಮಯ್ ರೈನಾ, ‘ಇಂಡಿಯಾ ಗಾಟ್ ಲೇಟೆಂಟ್’ ಅನ್ನು ಮತ್ತೆ ಪ್ರಾರಂಭಿಸುವುದಾಗಿ ಹೇಳಿದ್ದಾರೆ.

ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ ‘ಇಂಡಿಯಾ ಗಾಟ್ ಲೇಟೆಂಟ್’ ಮೇಲೆ ಕೇಸು ದಾಖಲಾಗಿತ್ತು. ಶೋಗೆ ಅತಿಥಿಯಾಗಿ ಆಗಮಿಸಿದ್ದ ಮತ್ತೊಬ್ಬ ಯೂಟ್ಯೂಬರ್ ರಣ್ವೀರ್ ಅಲ್ಹಾಬಾದಿಯಾ ಹೇಳಿದ್ದ ಒಂದು ಕೆಟ್ಟ ಜೋಕಿನಿಂದಾಗಿ ಶೋ ಮೇಲೆ ಹಾಗೂ ಶೋನಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ಹಲವರ ಮೇಲೆ ಹಲವಾರು ಕೇಸುಗಳು ದಾಖಲಾಗಿದ್ದವು. ಸಮಯ್ ರೈನಾ, ಸಹ ಆಗಿನಿಂದ ‘ಇಂಡಿಯಾ ಗಾಟ್ ಲೇಟೆಂಟ್’ ಬಗ್ಗೆ ಎಲ್ಲಿಯೂ ಮಾತನಾಡಿರಲಿಲ್ಲ, ಆದರೆ ಇದೀಗ ತಮ್ಮ ಹೊಸ ಸ್ಟಾಂಡಪ್​​ ನಲ್ಲಿ ‘ಇಂಡಿಯಾ ಗಾಟ್ ಲೇಟೆಂಟ್’ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

‘ನಾನು ಬಯಸಿದ್ದರೂ ಸಹ ‘ಇಂಡಿಯಾ ಗಾಟ್ ಲೇಟೆಂಟ್’ ಅನ್ನು ಅದು ಅಷ್ಟು ಜನಪ್ರಿಯತೆ ಇದ್ದಾಗ ಮುಕ್ತಾಯ ಮಾಡಲು ಆಗುತ್ತಿರಲಿಲ್ಲ, ಆದರೆ ಈಗ ಮುಕ್ತಾಯ ಆಗಿರುವುದು ಸೀಸನ್ 1 ಮಾತ್ರ’ ಎಂದಿದ್ದಾರೆ. ಆ ಮೂಲಕ ‘ಇಂಡಿಯಾ ಗಾಟ್ ಲೇಟೆಂಟ್ ಸೀಸನ್ 2’ ಬರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ ಸಮಯ್ ರೈನಾ.

ಇದನ್ನೂ ಓದಿ:‘ಇಂಡಿಯಾಸ್ ಗಾಟ್ ಲೇಟೆಂಟ್’ ಪುನರಾರಂಭ ಯಾವಾಗ? ಸಮಯ್ ರೈನಾ ಉತ್ತರವೇನು?

‘ಇಂಡಿಯಾ ಗಾಟ್ ಲೇಟೆಂಟ್’ ವಿವಾದ ಆದಾಗ ಅನುಭವಿಸಿದ ಕಷ್ಟಗಳ ಬಗ್ಗೆಯೂ ಮಾತನಾಡಿರುವ ಸಮಯ್ ರೈನಾ, ‘ನಾನು ಅಪ್​​ಲೋಡ್ ಮಾಡಿದ ವಿಡಿಯೋದಿಂದ ಹಲವಾರು ಮಂದಿ ತೊಂದರೆಗೆ ಒಳಗಾದರು. ಶೋ ನಡೆದ ಹ್ಯಾಬಿಟಾಟ್ ಜಾಗದ ಮಾಲೀಕ ಬಲರಾಜ್ ಮತ್ತು ಅವರ ವಯ್ಯಸ್ಸಾದ ಪೋಷಕರು ಪೊಲೀಸರಿಂದ ತೀವ್ರ ಕಷ್ಟ ಅನುಭವಿಸುವಂತಾಯ್ತು. ರಣ್ವೀರ್ ಅವರ ತಾಯಿಯ ಕ್ಲಿನಿಕ್ ಮೇಲೆ ದಾಳಿ ಮಾಡಲಾಯ್ತು, ಅಪೂರ್ವಗೆ ಕೊಲೆ ಬೆದರಿಕೆಗಳು ಬಂದವು. ನನ್ನ ಮೇಲೆ ಹಲವಾರು ಎಫ್​​ಐಆರ್​​ಗಳು ದಾಖಲಾದವು, ಹ್ಯಾಬಿಟಾಟ್ ಅನ್ನು ಒಡೆದು ಹಾಕಿದರು’ ಎಂದೆಲ್ಲ ನೋವಿನಿಂದ ಸಮಯ್ ರೈನಾ ಹೇಳಿದ್ದಾರೆ.

ಆ ಕಷ್ಟದ ಸಮಯದಲ್ಲಿ ತಮ್ಮ ವಿರುದ್ಧ ತಿರುಗಿ ಬಿದ್ದಿದ್ದ ಮೀಡಿಯಾದವರು, ರಾಜಕಾರಣಿಗಳು ವಿಶೇಷವಾಗಿ ನ್ಯೂಸ್ ಚಾನೆಲ್​​ಗಳವರಿಗೆ ಸಮಯ್ ರೈನಾ ತಮ್ಮ ಹೊಸ ಸ್ಟಾಂಡಪ್​​ನಲ್ಲಿ ತಿರುಗೇಟು ನೀಡಿದ್ದಾರೆ. ಸಮಯ್ ರೈನಾ, ‘ಇಂಡಿಯಾ ಗಾಟ್ ಲೇಟೆಂಟ್ 2’ ಮಾಡುತ್ತಿರುವುದನ್ನು ನೆಟ್ಟಿಗರು ಸ್ವಾಗತಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *