‘ಮರಿ, ನಿಮಗಿಂತ ಮೊದಲೇ ನಾನು ಧುರಂಧರ್ 2 ನೋಡಿದೀನಿ’; ದೀಪಿಕಾ ಖಡಕ್ ತಿರುಗೇಟು

‘ಮರಿ, ನಿಮಗಿಂತ ಮೊದಲೇ ನಾನು ಧುರಂಧರ್ 2 ನೋಡಿದೀನಿ’; ದೀಪಿಕಾ ಖಡಕ್ ತಿರುಗೇಟು

ಬಾಲಿವುಡ್ ಸಿನಿಮಾ ‘ಧುರಂಧರ್ 2’ ರಿಲೀಸ್ ಆಗಿ ಮೆಚ್ಚುಗೆ ಪಡೆಯಿತು. ಈ ಚಿತ್ರ ಭಾರತದಲ್ಲೇ ಸಾವಿರಾರು ಕೋಟಿ ರೂಪಾಯಿ ಗಳಿಕೆ ಮಾಡಿ ದಾಖಲೆ ನಿರ್ಮಿಸಿದೆ. ಈ ಚಿತ್ರವನ್ನು ಕ್ರಿಕೆಟರ್​​ಗಳು, ರಾಜಕೀಯ ನಾಯಕರು ಸೇರಿದಂತೆ ಅನೇಕರು ಹಾಡಿ ಹೊಗಳಿದ್ದಾರೆ. ಆದರೆ, ಕಥಾ ನಾಯಕ ರಣವೀರ್ ಸಿಂಗ್ ಪತ್ನಿ ದೀಪಿಕಾ ಪಡುಕೋಣೆ (Deepika Padukone) ಮಾತ್ರ ಈ ವಿಷಯದಲ್ಲಿ ಮೌನ ವಹಿಸಿದ್ದರು. ಈ ಬಗ್ಗೆ ಚರ್ಚೆ ಶುರುವಾಗಿತ್ತು. ಇದಕ್ಕೆ ದೀಪಿಕಾ ಉತ್ತರ ನೀಡಿದ್ದಾರೆ.

ಇನ್​​ಸ್ಟಾಗ್ರಾಮ್ ಒಂದರಲ್ಲಿ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋನ ಮಾರ್ಚ್ 23ರಂದು ಪೋಸ್ಟ್ ಮಾಡಲಾಗಿದೆ. ಅಂದರೆ, ‘ಧುರಂಧರ್ 2’ ರಿಲೀಸ್ ಆದ ಕೇವಲ ನಾಲ್ಕು ದಿನಕ್ಕೆ ಈ ವಿಡಿಯೋ ಅಪ್​​ಲೋಡ್ ಮಾಡಲಾಗಿದೆ. ಇದರಲ್ಲಿ ದೀಪಿಕಾ ‘ಧುರಂಧರ್ 2’ ಸಿನಿಮಾ ನೋಡಿಲ್ಲ ಎಂದು ಟೀಕಿಸಲಾಗಿತ್ತು.

ಇದಕ್ಕೆ ದೀಪಿಕಾ ಪಡುಕೋಣೆ ಕಮೆಂಟ್ ಮೂಲಕವೇ ಉತ್ತರ ಕೊಟ್ಟಿದ್ದಾರೆ. ‘ನೀವೆಲ್ಲರೂ ಸಿನಿಮಾ ನೋಡುವುದಕ್ಕೂ ಮೊದಲೇ ನಾನು ‘ಧುರಂಧರ್ 2’ ಚಿತ್ರವನ್ನು ನೋಡಿದ್ದೇನೆ. ನನ್ನನ್ನು ಮೂರ್ಖತನ ತೋರಿಸಲು ಬಂದು, ನಿಮ್ಮ ಮೂರ್ಖತನ ಬಯಲಾಗಿದೆ’ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

‘ಧುರಂಧರ್ 2’ ಚಿತ್ರವನ್ನು ಎಲ್ಲರೂ ಹಾಡಿ ಹೊಗಳುತ್ತಿದ್ದಾರೆ. ಸಿನಿಮಾ ನೋಡುವವರೆಲ್ಲರೂ ಈಗಾಗಲೇ ಚಿತ್ರವನ್ನು ನೋಡಿಯಾಗಿದೆ. ಆದರೂ ದೀಪಿಕಾ ಮಾತ್ರ ಈ ವಿಷಯದಲ್ಲಿ ಸೈಲೆಂಟ್ ಆಗಿರುವುದು ಏಕೆ ಎಂಬುದು ಅನೇಕರ ಪ್ರಶ್ನೆ ಆಗಿತ್ತು. ಈಗ ಕೊನೆಗೂ ಅದಕ್ಕೆ ಉತ್ತರ ಸಿಕ್ಕಿದೆ.

ಇದನ್ನೂ ಓದಿ: ಪತಿಯ ಸಿನಿಮಾ ದೊಡ್ಡ ಸಕಸ್ಸ್ ಕಂಡರೂ ತುಟಿಪಿಟಿಕ್ ಎನ್ನದ ದೀಪಿಕಾ ಪಡುಕೋಣೆ

ದೀಪಿಕಾ ಪಡುಕೋಣೆ ಸಿನಿಮಾ ನೋಡದೇ ಇರಬಹುದು ಎಂಬುದನ್ನು ನಾನಾ ರೀತಿಯಲ್ಲಿ ಬಿಂಬಿಸಲಾಯಿತು. ದೀಪಿಕಾ ಪಡುಕೋಣೆ ಅವರು 2020ರಲ್ಲಿ ಜೆಡಿಯು ಪ್ರತಿಭಟನೆಗೆ ಬೆಂಬಲ ಕೊಟ್ಟಿದ್ದರು. ಅವರನ್ನು ಎಡಪಂಕ್ತಿಯರ ಸಾಲಿನಲ್ಲಿ ಗುರುತಿಸಲಾಯಿತು. ‘ಧುರಂಧರ್ 2’ ಸಿನಿಮಾಗಳು ಬಲ ಪಂಥೀಯ ತತ್ವಗಳನ್ನು ಹೊಂದಿವೆ. ಈ ಕಾರಣದಿಂದ ದೀಪಿಕಾ ಮೌನ ತಾಳಿರಬಹುದು ಎನ್ನಲಾಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *