ಮಲಯಾಳಂನ ‘ಪಳ್ಳಿ ಚಟ್ಟಂಬಿ’ ಚಿತ್ರದಲ್ಲಿ ಬಳಕೆ ಆಯ್ತು ಯಕ್ಷಗಾನ; ಇದೆ ಕನ್ನಡದ ಡೈಲಾಗ್

ಮಲಯಾಳಂನ ‘ಪಳ್ಳಿ ಚಟ್ಟಂಬಿ’ ಚಿತ್ರದಲ್ಲಿ ಬಳಕೆ ಆಯ್ತು ಯಕ್ಷಗಾನ; ಇದೆ ಕನ್ನಡದ ಡೈಲಾಗ್

ಮಲಯಾಳಂ ಸಿನಿಮಾಗಳು ಮೊದಲಿನಿಂದಲೂ ಬೆಂಗಳೂರು ನಂಟನ್ನು ಹೊಂದಿವೆ. ಅವರ ಅನೇಕ ಸಿನಿಮಾಗಳು ಬೆಂಗಳೂರಿನಲ್ಲಿ ಶೂಟ್ ಆದ ಉದಾಹರಣೆ ಇದೆ. ‘ಬೆಂಗಳೂರು ಡೇಸ್’, ‘ಡಿಯರ್ ಫ್ರೆಂಡ್’, ‘ಲೋಕಃ: ಚಾಪ್ಟರ್ 1’ ಹೀಗೆಯೇ ಅನೇಕ ಚಿತ್ರಗಳು ಬೆಂಗಳೂರು ಕನೆಕ್ಷನ್ ಹೊಂದಿವೆ. ಈಗ ಮುಂಬರುವ ಮಲಯಾಳಂನ ‘ಪಳ್ಳಿ ಚಟ್ಟಂಬಿ’ ಚಿತ್ರಕ್ಕೂ ಕರ್ನಾಟಕದ ಲಿಂಕ್ ಇದೆ ಎಂಬ ವಿಷಯ ರಿವೀಲ್ ಆಗಿದೆ.

‘ಪಳ್ಳಿ ಚಟ್ಟಂಬಿ’ ಸಿನಿಮಾದಲ್ಲಿ ಟುವಿನೋ ಥಾಮಸ್ ನಟಿಸಿದ್ದಾರೆ. ಈ ಚಿತ್ರಕ್ಕೆ ಕಯಾದು ಲೋಹರ್ ನಾಯಕಿ. ಈ ಮೊದಲು ಕಯಾದು ಅವರು ‘ಮುಗಿಲ್​​ ಪೇಟೆ’ ಹೆಸರಿನ ಕನ್ನಡ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರಕ್ಕೆ ಡಿಜೋ ಜೊಸೆ ಆಂಟೋನಿ ನಿರ್ದೇಶನ ಇದೆ. ಈ ಮೊದಲು ‘ಜನ ಗಣ ಮನ’ ಹೆಸರಿನ ಸಿನಿಮಾ ಮಾಡಿದ್ದರು. ಈ ಚಿತ್ರದ ಕಥೆ ನಡೆದಿದ್ದು ಕೂಡ ಕರ್ನಾಟಕದ ರಾಮನಗರದಲ್ಲಾಗಿತ್ತು. ಈಗ ಅವರ ನಿರ್ದೇಶನದ ‘ಪಳ್ಳಿ ಚಟ್ಟಂಬಿ’ ಚಿತ್ರದಲ್ಲಿ ಕನ್ನಡದ ಕಲೆಯ ಕನೆಕ್ಷನ್ ಇರುವ ವಿಷಯ ರಿವೀಲ್ ಆಗಿದೆ.

ಬೆಂಗಳೂರಿನಲ್ಲಿ ‘ಪಳ್ಳಿ ಚಟ್ಟಂಬಿ’ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟುವಿನೋ, ‘ಈ ಸಿನಿಮಾದಲ್ಲಿ ಯಕ್ಷಗಾನದ ಬಳಕೆ ಆಗಿದೆ. ಅಲ್ಲಿ, ಕನ್ನಡದ ಡೈಲಾಗ್ ಬರುತ್ತದೆ’ ಎಂದು ಟುವಿನೋ ಮಾಹಿತಿ ನೀಡಿದರು. ಇದು ಕುತೂಹಲ ಹೆಚ್ಚಿಸಿದೆ. ಕನ್ನಡ ಪ್ರೇಕ್ಷಕರನ್ನು ಸೆಳೆಯುವ ಉದ್ದೇಶದಿಂದಲೇ ಕನ್ನಡವನ್ನು ಮಲಯಾಳಂನಲ್ಲಿ ಸೇರಿಸಲಾಗುತ್ತದೆಯೇ ಎನ್ನುವ ಪ್ರಶ್ನೆ ಮೂಡಿತು. ಇದಕ್ಕೆ ಉತ್ತರಿಸಿದ ಅವರು, ‘ಕಥೆ ಡಿಮ್ಯಾಂಡ್​ ಮಾಡಿದರೆ ಮಾತ್ರ ಅದನ್ನು ಸೇರಿಸೋದಾಗಿ’ ಹೇಳಿದ್ದಾರೆ ಟುವಿನೋ.

‘ಪಳ್ಳಿ ಚಟ್ಟಂಬಿ’ ಸಿನಿಮಾದ ಕಥೆ ಸಾಗೋದು ಹಳ್ಳಿಯಲ್ಲಿ. ಈ ಸಿನಿಮಾದ ಟ್ರೇಲರ್ ಗಮನ ಸೆಳೆದಿದೆ. ಮಲಯಾಳಂ ಜೊತೆ ಕನ್ನಡದಲ್ಲೂ ಸಿನಿಮಾ ರಿಲೀಸ್ ಆಗುತ್ತಿದೆ. ಈ ಚಿತ್ರವನ್ನು ಕರ್ನಾಟಕದಲ್ಲಿ ಹೊಂಬಾಳೆ ಫಿಲ್ಮ್ಸ್ ಹಂಚಿಕೆ ಮಾಡುತ್ತಿದೆ. ಏಪ್ರಿಲ್ 15ರಂದು ಸಿನಿಮಾ ತೆರೆಗೆ ಬರಲಿದೆ.

ಇದನ್ನೂ ಓದಿ: ‘ಟಾಕ್ಸಿಕ್’ ಚಿತ್ರದಲ್ಲಿ ಯಾವ ಪಾತ್ರ? ಕೊನೆಗೂ ಮೌನ ಮುರಿದ ಟೊವಿನೋ ಥಾಮಸ್

‘ಪಳ್ಳಿ ಚಟ್ಟಂಬಿ’ ಚಿತ್ರವನ್ನು ವರ್ಲ್ಡ್ ವೈಡ್ ಫಿಲಂಸ್, ಸಿ ಕ್ಯೂಬ್ ಬ್ರೋಸ್ ಎಂಟರ್ಟೇನ್ಮೆಂಟ್ ಬ್ಯಾನರ್ ಅಡಿಯಲ್ಲಿ ನೌಫಲ, ಬ್ರಿಜೇಶ್, ಚಾಣುಕ್ಯ ಚೈತನ್ಯ, ಚರಣ್ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾಗೆ ಎಸ್ ಸುರೇಶ್ ಬಾಬು ಕಥೆ ಬರೆದಿದ್ದಾರೆ. ಟಿಜೋ ಟಾಮಿ ಛಾಯಾಗ್ರಹಣ, ಶ್ರೀಜಿತ್ ಸಾರಂಗ್ ಸಂಕಲನ, ಜೇಕ್ಸ್ ಬಿಜೋಯ್ ಸಂಗೀತ ಸಂಯೋಜನೆ ಚಿತ್ರಕ್ಕೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *