ಎಲ್​ಪಿಜಿ ಕೊರತೆ: ರಾಜ್ಯ ಸರ್ಕಾರದಿಂದ ಆಟೋ ಚಾಲಕರಿಗೆ ಮಹತ್ವದ ಪ್ರಕಟಣೆ

ಎಲ್​ಪಿಜಿ ಕೊರತೆ: ರಾಜ್ಯ ಸರ್ಕಾರದಿಂದ ಆಟೋ ಚಾಲಕರಿಗೆ ಮಹತ್ವದ ಪ್ರಕಟಣೆ

ಬೆಂಗಳೂರು, ಏಪ್ರಿಲ್ 08: ಕರ್ನಾಟಕದಲ್ಲಿ ಗ್ಯಾಸ್​ ಸಿಗದೆ ಆಟೋ ಚಾಲಕರಿಗೆ ಸಂಕಷ್ಟ ಎದುರಾಗಿದೆ. ದಿನವಿಡಿ ದುಡಿಮೆ ಬಿಟ್ಟು ಬಂಕ್​ಗಳ ಬಳಿ ಗಂಟೆಗಟ್ಟಲೇ ಕಾಯುವಂತ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಆಟೋ ಚಾಲಕರು ಹೈರಾಣಾಗಿ ಹೋಗಿದ್ದಾರೆ. ಈ ಮಧ್ಯೆ ಆಟೋ ಗ್ಯಾಸ್ (Auto LPG)​​ ಕೊರತೆ ಬಗ್ಗೆ ವಂದತಿಗಳು ಕೂಡ ಹರಿದಾಡಿದ್ದವು. ಸದ್ಯ ಆಟೋ ಎಲ್​ಪಿಜಿ ಸರಬರಾಜು ಕುರಿತು ಸ್ಪಷ್ಟನೆ ನೀಡಿರುವ ರಾಜ್ಯ ಸರ್ಕಾರ,  ಸರಬರಾಜಿನಲ್ಲಿ ವ್ಯತ್ಯಾಸ ಕಂಡುಬಂದಿದ್ದರೂ ಯಾವುದೇ ತೊಂದರೆ ಇಲ್ಲ ಎಂದು ಹೇಳಿದೆ.

ಪ್ರತಿದಿನ 83ರಿಂದ 94 ಮೆಟ್ರಿಕ್ ಟನ್​ವರೆಗೂ ಪೂರೈಕೆ

ಆಟೋ ಎಲ್​ಪಿಜಿ ಸರಬರಾಜು ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ರಾಜ್ಯ ಸರ್ಕಾರ, ಸರಬರಾಜಿನಲ್ಲಿ ವ್ಯತ್ಯಾಸ ಕಂಡುಬಂದಿದ್ದರೂ ಯಾವುದೇ ತೊಂದರೆ ಇಲ್ಲ. IOCL, BPC, HPC ಕಂಪನಿಗಳಿಂದ ಗ್ಯಾಸ್​ ಪೂರೈಕೆ ನಡೆಯುತ್ತಿದೆ. ಏಪ್ರಿಲ್ 2ರಿಂದ ಏಪ್ರಿಲ್‌ 6ರವರೆಗೆ ದಿನನಿತ್ಯ ಸರಬರಾಜು ಆಗುತ್ತಿದೆ. ಪ್ರತಿದಿನ 83ರಿಂದ 94 ಮೆಟ್ರಿಕ್ ಟನ್​ವರೆಗೂ ಪೂರೈಕೆ ಮಾಡಲಾಗಿದೆ. ಏಪ್ರಿಲ್ 5ರಂದು ಅತಿ ಹೆಚ್ಚು 94.11 MT ಸರಬರಾಜು ಮಾಡಲಾಗಿದೆ. ಆಟೋ ಚಾಲಕರು ಆತಂಕಪಡಬೇಕಾಗಿಲ್ಲ ಎಂದು ಸರ್ಕಾರ ಹೇಳಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಆಟೋ ಎಲ್​ಪಿಜಿ ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯ್ಲ್! ಡ್ಯುಯಲ್ ಫ್ಯೂಯಲ್ ಬಳಕೆಗೆ ಸಲಹೆ

ಇನ್ನು ಎಲ್​ಪಿಜಿ ಪೂರೈಕೆ ವ್ಯವಸ್ಥೆಯನ್ನು ಸರ್ಕಾರ ಸಮೀಕ್ಷೆ ಮಾಡುತ್ತಿದೆ. ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಏಪ್ರಿಲ್ 5ರಂದು ಗರಿಷ್ಠ 94.11 MT ಪೂರೈಕೆಯಾಗಿದೆ. ಆಟೋ ಚಾಲಕರಿಗೆ ಆತಂಕ ಬೇಡ, ಪೂರೈಕೆ ಮೇಲೆ ಸರ್ಕಾರದ ನಿಗಾ ಇದೆ.

  • ದಿನಾಂಕ                            ಆಟೋ ಎಲ್​ಪಿಜಿ ಸರಬರಾಜು (ಮೆಟ್ರಿಕ್ ಟನ್​​ನಲ್ಲಿ)
  • ಏಪ್ರಿಲ್​ 2ರಂದು                             87.78
  • ಏಪ್ರಿಲ್​ 3ರಂದು                             86.05
  • ಏಪ್ರಿಲ್​ 4ರಂದು                             84.80
  • ಏಪ್ರಿಲ್​​ 5ರಂದು                             94.11
  • ಏಪ್ರಿಲ್​ 6ರಂದು                             83.58

ಇನ್ನೂ ಓದಿ: ಸಚಿವ ಕೆ. ಹೆಚ್ ಮುನಿಯಪ್ಪ ನಿವಾಸಕ್ಕೆ ಮುತ್ತಿಗೆ ಹಾಕಿದ ಆಟೋ ಚಾಲಕರು ! ಸಚಿವ ಹೇಳಿದ್ದೇನು?

ಸದ್ಯ ರಾಜ್ಯದಲ್ಲಿನ ಆಟೋ ಮಾಲೀಕರು ಮತ್ತು ಚಾಲಕರುಗಳು ಆತಂಕ ಪಡದೇ ಮತ್ತು ಯಾವುದೇ ವದಂತಿಗಳಿಗೆ ಕಿವಿ ಕೊಡದೇ ಸಹಕರಿಸುವಂತೆ ರಾಜ್ಯ ಸರ್ಕಾರ ಮನವಿ ಮಾಡಿದೆ.

ಕೈಗಾರಿಕಾ ವಲಯಕ್ಕೆ ಎಲ್​ಪಿಜಿ ಹಂಚಿಕೆಗೆ ಮಾರ್ಗಸೂಚಿ 

ಇನ್ನು ಕೈಗಾರಿಕಾ ವಲಯಕ್ಕೆ ಎಲ್​ಪಿಜಿ ಹಂಚಿಕೆ ಕುರಿತು ಕೇಂದ್ರದಿಂದ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಈ ಬಗ್ಗೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಕಾರ್ಯದರ್ಶಿ ಡಾ.ನೀರಜ್ ಮಿತ್ತಲ್​ರಿಂದ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಅಧಿಕೃತ ಪತ್ರ ರವಾನಿಸಲಾಗಿದೆ.

  • ವಿವಿಧ ಕೈಗಾರಿಕಾ ವಲಯಗಳಿಗೆ ಶೇ.70ರಷ್ಟು LPG ಹಂಚಿಕೆಗೆ ನಿರ್ಧಾರ.
  • ಪಿಎನ್‌ಜಿ ಸುಧಾರಣೆ ತಂದ ರಾಜ್ಯಗಳಿಗೆ ಹೆಚ್ಚುವರಿ ಶೇ.10ರಷ್ಟು ಎಲ್‌ಪಿಜಿ
  • ಫಾರ್ಮಾ, ಫುಡ್, ಅಗ್ರಿಕಲ್ಚರ್ ಸೇರಿ ಪ್ರಮುಖ ವಲಯಗಳಿಗೆ ಅನಿಲ ಪೂರೈಕೆ
  • ಬೃಹತ್ LPG ಬಳಕೆಗೆ ದಿನಕ್ಕೆ 0.2 ಟಿಎಂಟಿ ಮಿತಿ ನಿಗದಿ
  • ನೈಸರ್ಗಿಕ ಅನಿಲ ಬಳಸಲು ಸಾಧ್ಯವಿಲ್ಲದ ಘಟಕಗಳಿಗೆ ಮೊದಲ ಆದ್ಯತೆ
  • ಸಿಜಿಡಿ ಘಟಕಗಳಿಗೆ ಪಿಎನ್‌ಜಿ ನೋಂದಣಿ ಕಡ್ಡಾಯ
  • ಪ್ಯಾಕೇಜಿಂಗ್, ಪೇಂಟ್, ಸ್ಟೀಲ್ ಮತ್ತು ಸೆರಾಮಿಕ್ ಘಟಕಗಳಿಗೆ ಸಿಗಲಿದೆ ನೆರವು
  • ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಅನಿಲಪೂರೈಕೆ ವ್ಯವಸ್ಥೆ
  • ಮಾರ್ಚ್​​ 2026ರ ಬಳಕೆ ಆಧರಿಸಿ ಕೈಗಾರಿಕೆಗಳಿಗೆ ಇಂಧನ ಕೋಟಾ ನಿಗದಿ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *