
ನಮ್ಮ ಏಳಿಗೆಯಲ್ಲಿ ನೋಡಿ ವಿಷಕಾರುವಂತಹ ಸಂಬಂಧಿಕರು ಇರುವಂತೆ, ಆಫೀಸ್‌ನಲ್ಲಿಯೂ ನಮ್ಮ ಕೆಲಸ ಕಾರ್ಯಗಳನ್ನು ನೋಡಿ, ಸಹಿಸಿಕೊಳ್ಳದ ಒಂದಷ್ಟು ಸಹದ್ಯೋಗಿಗಳಿರುತ್ತಾರೆ. ಆದ್ದರಿಂದ ಆಫೀಸ್‌ನಲ್ಲಿ (office) ಎಷ್ಟು ಜಾಗರೂಕರಾಗಿದ್ದರೂ ಕಡಿಮೆಯೇ. ಅದರಲ್ಲೂ ಮಾತನಾಡುವಾಗ ಮೈಯೆಲ್ಲಾ ಕಣ್ಣಾಗಿರಬೇಕು. ಏಕೆಂದರೆ ಒಂದು ತಪ್ಪು ಮಾತು ಕೂಡ ನಮ್ಮ ಕೆಲಸ, ಹೆಸರು ಹಾಗೂ ಭವಿಷ್ಯಕ್ಕೆ ಕುತ್ತು ತರುವ ಸಾಧ್ಯತೆ ಇರುತ್ತದೆ. ಹಾಗಾಗಿ ಆಫೀಸ್‌ನಲ್ಲಿ ಮಾತುಕತೆ ನಡೆಸುವಾಗ ಸ್ವಲ್ಪ ಜಾಗರೂಕರಾಗಿರಬೇಕು. ಅದರಲ್ಲೂ ಈ ಒಂದಷ್ಟು ವಿಚಾರಗಳನ್ನು ಅಪ್ಪಿತಪ್ಪಿಯೂ ಸಹದ್ಯೋಗಿಗಳೊಂದಿಗೆ ಶೇರ್ ಮಾಡಬಾರದು. ಸಹದ್ಯೋಗಿಗಳೊಂದಿಗೆ ಶೇರ್ ಮಾಡಿಕೊಳ್ಳಲೇಬಾರದ ಆ ವಿಚಾರಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.
ಸಹದ್ಯೋಗಿಗಳ ಬಳಿ ಈ ವಿಚಾರಗಳ ಬಗ್ಗೆ ಮಾತನಾಡದಿದ್ದರೆಯೇ ಒಳ್ಳೆಯದು:
ಸಂಬಳದ ಬಗ್ಗೆ ಯಾರಿಗೂ ಹೇಳಬೇಡಿ: ನಿಮ್ಮ ಸಂಬಳ ಮತ್ತು ಆದಾಯದ ಮೂಲಗಳ ಬಗ್ಗೆ ನಿಮ್ಮ ಸಹದ್ಯೋಗಿಗಳೊಂದಿಗೆ ಮಾತನಾಡುವುದು ಒಳ್ಳೆಯದಲ್ಲ. ಏಕೆಂದರೆ ಇದರಿಂದ ಕೆಲವರು ಅಸೂಯೆ ಪಡುವ ಸಾಧ್ಯತೆ ಇರುತ್ತದೆ. ಇದರಿಂದ ಹಲವು ಸಮಸ್ಯೆಗಳೂ ಎದುರಾಗಬಹುದು.
ವೈಯಕ್ತಿಕ ಸಮಸ್ಯೆಗಳ ಬಗ್ಗೆ ಹಂಚಿಕೊಳ್ಳಬೇಡಿ: ಕಚೇರಿಯಲ್ಲಿ ನಿಮ್ಮ ಸಹದ್ಯೋಗಿಗಳೊಂದಿಗೆ ನಿಮ್ಮ ವೈಯಕ್ತಿಕ ಸಮಸ್ಯೆಗಳನ್ನು ಹಂಚಿಕೊಳ್ಳಬೇಡಿ. ವೈಯಕ್ತಿಕ ಸಮಸ್ಯೆಗಳ ಬಗ್ಗೆ ಮಾತನಾಡುವುದರಿಂದ ಭವಿಷ್ಯದಲ್ಲಿ ನಿಮಗೆ ಸಮಸ್ಯೆಗಳು ಉಂಟಾಗಬಹುದು. ಕೆಲವರು ನಿಮ್ಮ ಈ ಸಮಸ್ಯೆಗಳನ್ನು ತಮ್ಮ ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಳ್ಳುವ ಸಾಧ್ಯತೆ ಇರುತ್ತದೆ.
ಕಚೇರಿಯಲ್ಲಿ ಗಾಸಿಪ್ ಮಾಡಬೇಡಿ: ಕಚೇರಿಯ ಗಾಸಿಪ್‌ಗಳ ಬಗ್ಗೆ ಸಹದ್ಯೋಗಿಗಳೊಂದಿಗೆ ಹಂಚಿಕೊಳ್ಳುವುದು ಸರಿಯಲ್ಲ. ಈ ಗಾಸಿಪ್ ಬೇರೊಬ್ಬರ ಕಿವಿಗೆ ಬಿದ್ದು, ಸಮಸ್ಯೆಗಳು ಎದುರಾಗುವ ಸಾಧ್ಯತೆ ಇರುತ್ತದೆ, ಇದರಿಂದ ನಿಮ್ಮ ಕೆಲಸಕ್ಕೂ ಕುತ್ತು ಬರಬಹುದು. ಆದ್ದರಿಂದ ಮೂರನೇ ವ್ಯಕ್ತಿಗಳ ಬಗ್ಗೆ ಮಾತನಾಡಬೇಡಿ, ಗಾಸಿಪ್‌ನಿಂದ ದೂರವಿರಿ.
ರಾಜಕೀಯ ವಿಷಯಗಳ ಬಗ್ಗೆ ಮಾತನಾಡುವುದು ಸರಿಯಲ್ಲ: ಕಚೇರಿಯಲ್ಲಿ ನಿಮ್ಮ ನೆಚ್ಚಿನ ರಾಜಕಾರಣಿ ಅಥವಾ ರಾಜಕೀಯ ವಿಷಯಗಳ ಬಗ್ಗೆ ಮಾತನಾಡಬೇಡಿ. ಈ ವಿಷಯಗಳ ಬಗ್ಗೆ ಮಾತನಾಡುವುದು ರಾಜಕೀಯ ಚರ್ಚೆಗಳು, ವಾದಗಳು ಮತ್ತ ಭಿನ್ನಾಭಿಪ್ರಾಯಗಳಿಗೆ ಕಾರಣವಾಗಬಹುದು. ಇದು ಆಫೀಸ್ ವಾತಾವರಣವನ್ನೇ ಹಾಳು ಮಾಡಬಹುದು.
ಕೌಟುಂಬಿಕ ಸಮಸ್ಯೆಗಳ ಬಗ್ಗೆ ಯಾರಿಗೂ ಹೇಳಬೇಡಿ: ಕಚೇರಿಯಲ್ಲಿ ಕೌಟುಂಬಿಕ ಸಮಸ್ಯೆಗಳ ಬಗ್ಗೆ ಎಂದಿಗೂ ಮಾತನಾಡಬೇಡಿ, ಕಚೇರಿಯಲ್ಲಿ ಕೌಟುಂಬಿಕ ಸಮಸ್ಯೆಗಳ ಬಗ್ಗೆ ಮಾತನಾಡುವುದರಿಂದ ಭವಿಷ್ಯದಲ್ಲಿ ಸಮಸ್ಯೆಗಳು ಉಂಟಾಗುತ್ತದೆ.
ಬಾಸ್ ಬಗ್ಗೆ ತಪ್ಪಿಯೂ ಮಾತನಾಡಬೇಡಿ: ನಿಮ್ಮ ಬಾಸ್ ಬಗ್ಗೆ ನಿಮ್ಮ ಸಹದ್ಯೋಗಿಗಳ ಬಳಿ ನಕಾರಾತ್ಮಕವಾಗಿ ಮಾತನಾಡುವುದರಿಂದ ಬಹಳಷ್ಟು ಸಮಸ್ಯೆಗಳು ಉಂಟಾಗಬಹುದು, ಇದು ನಿಮ್ಮ ಕೆಲಸಕ್ಕೂ ಕುತ್ತು ತರಹಬಹುದು. ಆದ್ದರಿಂದ ಎಂದಿಗೂ ಬಾಸ್ ಬಗ್ಗೆ ಯಾರೊಂದಿಗೂ ಮಾತನಾಡಬೇಡಿ.
ಇದನ್ನೂ ಓದಿ: ವೃತ್ತಿ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಚಾಣಕ್ಯರ ಈ ಮಾತುಗಳನ್ನು ಪಾಲಿಸಿ
ಹಣಕಾಸಿನ ಸಮಸ್ಯೆಗಳ ಬಗ್ಗೆ ಮಾತನಾಡಬೇಡಿ: ನಿಮ್ಮ ಹಣಕಾಸಿನ ಸಮಸ್ಯೆಗಳ ಬಗ್ಗೆ ಇತರರೊಂದಿಗೆ ಮಾತನಾಡುವುದು ಒಳ್ಳೆಯದಲ್ಲ. ಹಣಕಾಸಿನ ಸಮಸ್ಯೆಗಳ ಬಗ್ಗೆ ಮಾತನಾಡುವುದರಿಂದ ಹಲವು ಸಮಸ್ಯೆಗಳು ಉಂಟಾಗಬಹುದು.
ಸಂಬಂಧಗಳ ಬಗ್ಗೆ ಮಾತನಾಡಬೇಡಿ: ವೈಯಕ್ತಿಕ ಸಂಬಂಧಗಳನ್ನು ಖಾಸಗಿಯಾಗಿ ಇಟ್ಟುಕೊಂಡಷ್ಟು ಒಳ್ಳೆಯದು. ತಿಯೊಬ್ಬರಿಗೂ ಜೀವನದಲ್ಲಿ ಏರಿಳಿತಗಳು ಇರುತ್ತವೆ, ಆದರೆ ಕಚೇರಿ ಅವುಗಳನ್ನು ಹಂಚಿಕೊಳ್ಳಲು ಸೂಕ್ತ ಸ್ಥಳವಲ್ಲ. ಸಹದ್ಯೋಗಿಗಳೊಂದಿಗೆ ನಿಮ್ಮ ಸಂಬಂಧಗಳ ಬಗ್ಗೆ ಮಾತನಾಡುವುದರಿಂದ ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು.
ಭವಿಷ್ಯದ ವೃತ್ತಿಪರ ಯೋಜನೆಗಳು: ನೀವು ಬೇರೆಡೆ ಸಂದರ್ಶನಕ್ಕೆ ಹೋಗುತ್ತಿದ್ದರೆ ಅಥವಾ ಉದ್ಯೋಗ ಬದಲಾವಣೆಗೆ ಯೋಜಿಸುತ್ತಿದ್ದರೆ, ಅವುಗಳನ್ನು ಹಂಚಿಕೊಳ್ಳಬೇಡಿ. ಇದು ಕೂಡ ಸಮಸ್ಯೆಗಳನ್ನು ಉಂಟು ಮಾಡುವ ಸಾಧ್ಯತೆ ಇರುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ