PPF loan: ಪಿಪಿಎಫ್​ನಲ್ಲಿ ಕೇವಲ 1 ಪರ್ಸಂಟ್ ಬಡ್ಡಿಗೆ ಸಾಲ? ಯಾವ ವರ್ಷ, ಎಷ್ಟು ಅವಧಿ ಇತ್ಯಾದಿ ನಿಯಮಗಳು ತಿಳಿದಿರಿ

PPF loan: ಪಿಪಿಎಫ್​ನಲ್ಲಿ ಕೇವಲ 1 ಪರ್ಸಂಟ್ ಬಡ್ಡಿಗೆ ಸಾಲ? ಯಾವ ವರ್ಷ, ಎಷ್ಟು ಅವಧಿ ಇತ್ಯಾದಿ ನಿಯಮಗಳು ತಿಳಿದಿರಿ

ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಅಥವಾ ಪಿಪಿಎಫ್ (PPF) ದೀರ್ಘಕಾಲದ ಸ್ಮಾಲ್ ಸೇವಿಂಗ್ಸ್ ಸ್ಕೀಮ್ ಆಗಿದೆ. 15 ವರ್ಷದ ಪಾವತಿ ಅವಧಿ, 21 ವರ್ಷಕ್ಕೆ ಮೆಚ್ಯೂರಿಟಿ ಇರುವ ಸ್ಕೀಮ್. ವರ್ಷಕ್ಕೆ ಒಂದೂವರೆ ಲಕ್ಷ ರೂವರೆಗೆ ಹೂಡಿಕೆಗೆ ಅವಕಾಶ ಇರುತ್ತದೆ. ಸದ್ಯ ಶೇ. 7.1ರಷ್ಟು ವಾರ್ಷಿಕ ಬಡ್ಡಿ ಸಿಗುತ್ತದೆ. ದೀರ್ಘಾವಧಿ ಹೂಡಿಕೆಗೆ ಅವಕಾಶ ಕೊಡುವ ಸಣ್ಣ ಉಳಿತಾಯ ಯೋಜನೆ ಇದು. ಬ್ಯಾಂಕುಗಳ ಫಿಕ್ಸೆಡ್ ಡೆಪಾಸಿಟ್ ಮಟ್ಟದಷ್ಟು ಬಡ್ಡಿ, ಜೊತೆಗೆ ಟ್ಯಾಕ್ಸ್ ಬೆನಿಫಿಟ್ ಅನ್ನೂ ಇದು ನೀಡುತ್ತದೆ.

ಎಲ್​ಐಸಿ ಪಾಲಿಸಿ, ಮ್ಯೂಚುವಲ್ ಫಂಡ್, ಹಾಗೂ ಫಿಕ್ಸೆಡ್ ಡೆಪಾಸಿಟ್​ಗಳನ್ನೂ ಬಳಸಿ ಸಾಲ ಪಡೆಯಬಹುದು. ಇದೇ ಸೌಲಭ್ಯವು ಪಿಪಿಎಫ್​ನಲ್ಲೂ ಸಿಗುತ್ತದೆ. ಆದರೆ, ಸಾಲ ಪಡೆಯಲು ಒಂದಷ್ಟು ನಿಬಂಧನೆಗಳಿವೆ. ಈ ಬಗ್ಗೆ ಒಂದಷ್ಟು ಮಾಹಿತಿ…

ಇದನ್ನೂ ಓದಿ: ಮುಖ ಬ್ಯಾಂಕುಗಳಲ್ಲಿ ಶೇ. 7.75ರವರೆಗೆ ಫಿಕ್ಸೆಡ್ ಡೆಪಾಸಿಟ್ ದರಗಳು

ಯಾವಾಗ ಪಿಪಿಎಫ್ ಬಳಸಿ ಸಾಲ ಮಾಡಬಹುದು?

ಅವಧಿಗೆ ಮುಂಚೆ ಪಿಪಿಎಫ್ ಅನ್ನು ವಿತ್​ಡ್ರಾ ಮಾಡಲು ಅವಕಾಶ ಇದೆ. ಅಕೌಂಟ್ ತೆರೆದು 7ನೇ ಹಣಕಾಸು ವರ್ಷದಿಂದ ಈ ಅವಕಾಶ ಸಿಗುತ್ತದೆ. ಆದರೆ, ಅಷ್ಟರೊಳಗೆ ನಿಮಗೆ ಸಾಲ ಬೇಕಿದ್ದರೆ ಪಡೆಯಬಹುದು. ಪಿಪಿಎಫ್ ಅಕೌಂಟ್ ತೆರೆದು 3 ಹಣಕಾಸು ವರ್ಷಗಳಾಗಿರಬೇಕು. 2023-24ರಲ್ಲಿ ನೀವು ಪಿಪಿಎಫ್ ಅಕೌಂಟ್ ತೆರೆದಿದ್ದರೆ ಸಾಲ ಪಡೆಯಲು 2025ರ ಏಪ್ರಿಲ್ 1ರಿಂದ ಅವಕಾಶ ಇರುತ್ತದೆ. 2028ರ ಮಾರ್ಚ್ 31ರವರೆಗೂ ನಿಮಗೆ ಅವಕಾಶ ಇರುತ್ತದೆ. ಅಂದರೆ, ಮೂರು ವರ್ಷದ ಅವಧಿಯಲ್ಲಿ ನೀವು ಪಿಪಿಎಫ್ ಸಾಲ ಪಡೆಯಬಹುದು.

ಶೇ. 25 ಮಾತ್ರವೇ ಸಾಲ

ಪಿಪಿಎಫ್ ಸಾಲ ಪಡೆಯಲು ಇನ್ನೂ ಕೆಲ ಸಂಕೀರ್ಣ ನಿಯಮಗಳಿವೆ. ನೀವು ಸಾಲ ಪಡೆಯಲಾಗುತ್ತಿರುವ ವರ್ಷದ ಹಿಂದಿನ ವರ್ಷದ ಕೊನೆಯಲ್ಲಿ ನಿಮ್ಮ ಪಿಪಿಎಫ್ ಅಕೌಂಟ್​ನಲ್ಲಿ ಎಷ್ಟು ಬ್ಯಾಲನ್ಸ್ ಇದೆಯೋ ಅದರ ಶೇ. 25ರಷ್ಟನ್ನು ಮಾತ್ರವೇ ಸಾಲವಾಗಿ ಪಡೆಯಬಹುದು.

ಇದನ್ನೂ ಓದಿ: ಇಪಿಎಫ್, ಎನ್​ಪಿಎಸ್ ಮತ್ತು ಮ್ಯೂಚುವಲ್ ಫಂಡ್; ರಿಟೈರ್ಮೆಂಟ್ ಪ್ಲಾನಿಂಗ್​ಗೆ ಯಾವುದು ಉತ್ತಮ?

ನೀವು ಮೂರು ವರ್ಷ ಗರಿಷ್ಠ 4.5 ಲಕ್ಷ ರೂ ಹೂಡಿಕೆ ಮಾಡಿದ್ದರೆ 1,12,500 ರೂ ಅನ್ನು ಮಾತ್ರವೇ ಸಾಲವಾಗಿ ಪಡೆಯಬಹುದು.

ಬಡ್ಡಿ ಶೇ. 1 ಮಾತ್ರ, ಆದರೆ…

ಪಿಪಿಎಫ್​ನಲ್ಲಿ ನೀವು ಪಡೆಯುವ ಸಾಲಕ್ಕೆ ಬಡ್ಡಿದರ ವಾರ್ಷಿಕ ಶೇ. 1 ಮಾತ್ರ. ನೀವು 36 ತಿಂಗಳೊಳಗೆ ಅದನ್ನು ತೀರಿಸಿದರೆ ಮಾತ್ರ ಇಷ್ಟು ಕಡಿಮೆ ಬಡ್ಡಿ. ಒಂದು ವೇಳೆ 36 ತಿಂಗಳಲ್ಲಿ ಸಾಲ ವಾಪಸ್ ಮಾಡದಿದ್ದರೆ ಬಡ್ಡಿದರ ಶೇ 6 ಅನ್ವಯ ಆಗುತ್ತದೆ. ಗಮನಿಸಬೇಕಾದ ಸಂಗತಿ ಎಂದರೆ ನೀವು ಸಾಲ ಪಡೆದಿರುವ ಅವಧಿಯಲ್ಲಿ ನಿಮ್ಮ ಪಿಪಿಎಫ್ ಹಣಕ್ಕೆ ಯಾವ ಬಡ್ಡಿ ಆದಾಯ ಸಿಗುವುದಿಲ್ಲ. ಅಂದರೆ, ಪಿಪಿಎಫ್ ಮೊತ್ತಕ್ಕೆ ಸರ್ಕಾರ ವಾರ್ಷಿಕವಾಗಿ ನೀಡುವ ಶೇ. 7.1 ಬಡ್ಡಿ ಈ ಸಂದರ್ಭದಲ್ಲಿ ಜಮೆಯಾಗುವುದಿಲ್ಲ. ಸಾಲ ವಾಪಸ್ ಮಾಡುವವರೆಗೂ ಹೀಗೇ ಇರುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *