ಭಾರತ ಶೇ 7.8, ಅಮೆರಿಕ ಶೇ. 0.5; ಆರ್ಥಿಕ ಬೆಳವಣಿಗೆ ವೇಗದಲ್ಲಿ ಅಜಗಜಾಂತರ

ಭಾರತ ಶೇ 7.8, ಅಮೆರಿಕ ಶೇ. 0.5; ಆರ್ಥಿಕ ಬೆಳವಣಿಗೆ ವೇಗದಲ್ಲಿ ಅಜಗಜಾಂತರ

ವಾಷಿಂಗ್ಟನ್, ಏಪ್ರಿಲ್ 9: ಟ್ಯಾರಿಫ್​ಗಳ ಬರೆ ಎಳೆದು ಜಗತ್ತನ್ನು ಅಲುಗಾಡಿಸಿದ್ದ ಅಮೆರಿಕದ ಆರ್ಥಿಕತೆ (US economy) ಮಂದಗೊಂಡಿದೆ. 2025ರ ಕ್ಯಾಲಂಡರ್ ವರ್ಷದ ಕೊನೆಯ ಕ್ವಾರ್ಟರ್​ನಲ್ಲಿ (ಅಕ್ಟೋಬರ್-ಡಿಸೆಂಬರ್) ಅಮೆರಿಕದ ಜಿಡಿಪಿ ಶೇ. 0.50ರಷ್ಟು ಮಾತ್ರ ಹೆಚ್ಚಿದೆ. ಅಮೆರಿಕದ ವಾಣಿಜ್ಯ ಇಲಾಖೆ ನಿರೀಕ್ಷಿಸಿದುದಕ್ಕಿಂತಲೂ ಕಡಿಮೆ ವೇಗದಲ್ಲಿ ಆರ್ಥಿಕ ಬೆಳವಣಿಗೆ ದಾಖಲಾಗಿದೆ. ಇಲಾಖೆಯು ಈ ಅವಧಿಯಲ್ಲಿ ಶೇ. 0.7ರಷ್ಟು ಜಿಡಿಪಿ ದರದ ನಿರೀಕ್ಷೆ ಮಾಡಿತ್ತು.

ಭಾರತದ ಆರ್ಥಿಕತೆಯು ಇದೇ ಅವಧಿಯಲ್ಲಿ (ಅಕ್ಟೋಬರ್-ಡಿಸೆಂಬರ್) ಶೇ. 7.8ರಷ್ಟು ಬೆಳವಣಿಗೆ ಹೊಂದಿದ್ದು ಗಮನಾರ್ಹ. ಹಣಕಾಸು ವರ್ಷದ (2025-26) ಮೊದಲ ಮೂರು ಕ್ವಾರ್ಟರ್​ಗಳಲ್ಲಿ ಭಾರತ ಕ್ರಮವಾಗಿ ಶೇ. 7.8, ಶೇ. 8.2 ಮತ್ತು ಶೇ. 7.8ರಷ್ಟು ಆರ್ಥಿಕ ಬೆಳವಣಿಗೆ ಪಡೆದಿದೆ. ಆದರೆ, ಅಮೆರಿಕ, ಯೂರೋಪ್ ಇತ್ಯಾದಿ ಮುಂದುವರಿದ ದೇಶಗಳ ಆರ್ಥಿಕತೆ ಬಹಳ ನಿಧಾನಗೊಂಡಿದೆ. ಚೀನಾದ ಜಿಡಿಪಿ ದರ ಶೇ. 4ರ ಆಸುಪಾಸಿನಲ್ಲಿದೆ.

ಇದನ್ನೂ ಓದಿ: ಭಾರತಕ್ಕೆ ಪೆಟ್ರೋಲ್, ಡೀಸಲ್ ಸಮಸ್ಯೆ ವಕ್ಕರಿಸಲಿಲ್ಲ ಯಾಕೆ? ಸರ್ಕಾರದ ಈ ಕೆಲ ಕ್ರಮಗಳೇ ಕಾರಣವಾ?

ಅಮೆರಿಕದ ಸರಕು ಮತ್ತು ಸೇವೆಗಳ ಉತ್ಪನ್ನದ ಮೊತ್ತವು 2ನೇ ಕ್ವಾರ್ಟರ್ ಮತ್ತು 3ನೇ ಕ್ವಾರ್ಟರ್​ನಲ್ಲಿ ಕ್ರಮವಾಗಿ ಶೇ. 3.8 ಮತ್ತು ಶೇ. 4.4ರಷ್ಟು ಹೆಚ್ಚಿತ್ತು. ಆದರೆ, ನಾಲ್ಕನೇ ಕ್ವಾರ್ಟರ್​ನಲ್ಲಿ ಬಹಳ ಕಡಿಮೆಗೊಂಡಿದೆ.

ಸರ್ಕಾರದ ವೆಚ್ಚ ಮತ್ತು ಹೂಡಿಕೆ ಕೂಡ ಕಡಿಮೆಗೊಂಡಿದೆ. ಇದರಿಂದ ಜಿಡಿಪಿ ಬೆಳವಣಿಗೆಯಲ್ಲಿ ಶೇ. 1.16ರಷ್ಟು ನಷ್ಟ ಆಗಿರಬಹುದು ಎಂಬುದು ಸರ್ಕಾರದ ಎಣಿಕೆ. ಗ್ರಾಹಕ ವೆಚ್ಚವೂ ಕೂಡ ಶೇ. 1.9ರಷ್ಟು ಹೆಚ್ಚಿದೆ. ಹಿಂದಿನ ಕ್ವಾರ್ಟರ್​ನಲ್ಲಿ ಇದು ಶೇ. 3.5 ಇತ್ತು.

ಇದನ್ನೂ ಓದಿ: ಮೂರು ತಿಂಗಳಲ್ಲಿ 80,000 ಟೆಕ್ಕಿಗಳ ಲೇ ಆಫ್; ಮುಂದೈತೆ ಇನ್ನೂ ದೊಡ್ಡ ಬಲಿ

2025ರಲ್ಲಿ ಅಮೆರಿಕದ ಆರ್ಥಿಕತೆ ಒಟ್ಟಾರೆಯಾಗಿ 2.1ರಷ್ಟು ಬೆಳವಣಿಗೆ ದಾಖಲಿಸಿದೆ. 2023 ಮತ್ತು 2024ರಲ್ಲಿ ಶೇ. 2.9 ಮತ್ತು ಶೇ. 2.8ರಷ್ಟು ಜಿಡಿಪಿ ಹೆಚ್ಚಳ ಕಂಡಿತ್ತು ಅಮೆರಿಕ. 2025ರಲ್ಲಿ ಮಂದ ಬೆಳವಣಿಗೆ ಕಂಡು ಬಂದಿದೆ. 2026ರ ಹೊರನೋಟವೂ ಆಶಾದಾಯಕವಾಗಿಲ್ಲ. ಇರಾನ್ ಯುದ್ಧಕ್ಕೆ ಕೈಹಾಕಿ ಅಮೆರಿಕ ಸಿಕ್ಕಾಪಟ್ಟೆ ನಷ್ಟ ಮಾಡಿಕೊಂಡಿದೆ. ಎಐ ಅಳವಡಿಕೆಯಿಂದ ಕಾರ್ಪೊರೇಟ್ ವಲಯವು ಲೇ ಆಫ್ ಮೇಲೆ ಲೇ ಆಫ್ ಮಾಡುತ್ತಿದೆ. ಇವೆಲ್ಲವೂ ಅಮೆರಿಕಕ್ಕೆ ಮತ್ತಷ್ಟು ಹಿನ್ನಡೆ ತರುವ ನಿರೀಕ್ಷೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *