‘ಜನ ನಾಯಗನ್’ ಲೀಕ್ ವೀಷಯ; ಸುತ್ತಿ ಬಳಸಿ ವಿಜಯ್ ಮೇಲೆ ಬಂತು ಆರೋಪ

‘ಜನ ನಾಯಗನ್’ ಲೀಕ್ ವೀಷಯ; ಸುತ್ತಿ ಬಳಸಿ ವಿಜಯ್ ಮೇಲೆ ಬಂತು ಆರೋಪ

‘ಜನ ನಾಯಗನ್’ ಸಿನಿಮಾ (Jana Nayagan Movie) ರಿಲೀಸ್​​ಗೂ ಮೊದಲೇ ಲೀಕ್ ಆಗಿದೆ. ಇದು ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ಜನರು ಈ ಬಗ್ಗೆ ಸಾಕಷ್ಟು ಪ್ರಶ್ನೆ ಮಾಡುತ್ತಿದ್ದಾರೆ. ಅನೇಕರು ಲೀಕ್ ಮಾಡಿದವರ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಹೀಗಿರುವಾಗಲೇ ‘ಜನ ನಾಯಗನ್’ ಸಿನಿಮಾ ಕ್ಲಿಪ್ ಸೋರಿಕೆಗೆ ವಿಜಯ್ ಕೈವಾಡವೇ ಇದೆ ಎಂದು ಕೆಲವರು ಆರೋಪಿಸಿದ್ದಾರೆ. ಇದಕ್ಕೆ ವಿಜಯ್ ಅಭಿಮಾನಿಗಳು ಖಡಕ್ ಆಗಿ ಉತ್ತರಿಸುವ ಕೆಲಸ ಮಾಡುತ್ತಿದ್ದಾರೆ.

ಎಲ್ಲಾ ಹೀರೋಗಳಿಗೆ ತಾವು ಮಾಡಿದ ಸಿನಿಮಾಗಳ ಮೇಲೆ ಪ್ರೀತಿ ಇರುತ್ತದೆ. ಅದು ಲೀಕ್ ಆಗಲಿ ಎಂದು ಯಾರೊಬ್ಬರೂ ಬಯಸುವುದಿಲ್ಲ. ಹಾಗಿದ್ದರೂ ವಿಜಯ್ ಮೇಲೆ ಈ ರೀತಿಯ ಗಂಭೀರ ಆರೋಪವನ್ನು ಕೆಲವರು ಮಾಡಿದ್ದಾರೆ. ‘ಜನ ನಾಯಗನ್ ಲೀಕ್ ಮಾಡಿ ಸಿಂಪತಿ ಗಿಟ್ಟಿಸಿಕೊಳ್ಳುವ ಪ್ಲ್ಯಾನ್ ವಿಜಯ್ ಅವರದ್ದು’ ಎಂದು ಕೆಲವರು ಆರೋಪ ಮಾಡಿದ್ದಾರೆ.

‘ಜನ ನಾಯಗನ್’ ಎಲ್ಲಿಯೂ ಪ್ರದರ್ಶನ ಆಗಿಲ್ಲ. ಹೀಗಾಗಿ, ಇದರ ಲೀಕ್ ಹಿಂದೆ ತಂಡದವರಲ್ಲಿದ್ದವರ ಕೈವಾಡ ಇರಬಹುದು ಎಂಬುದು ಕೆಲವರ ಅನುಮಾನ. ಈ ಕಾರಣದಿಂದ ಈಗಾಗಲೇ ಕೆವಿಎನ್ ಸಂಸ್ಥೆ ತನಿಖೆಗೆ ಆದೇಶ ಮಾಡಿದೆ. ಈ ವರದಿ ಹೊರ ಬಂದ ಬಳಿಕ ಅಸಲಿಯತ್ತು ತಿಳಿಯಲಿದೆ. ಇದರ ವರದಿ ಬರೋದಕ್ಕೂ ಮೊದಲೇ ಕೆಲವರು ವಿಜಯ್ ಹಾಗೂ ಅವರ ತಂಡದ ಮೇಲೆ ಸುಖಾಸುಮ್ಮನೆ ಆರೋಪ ಮಾಡುವ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ: ‘ಜನ ನಾಯಗನ್’ ಲೀಕ್ ಬಗ್ಗೆ ಪ್ರಶ್ನೆ ಮಾಡಿದರೆ ಉತ್ತರಿಸದೆ ಹೋದ ದಳಪತಿ ವಿಜಯ್

ಇನ್ನು, ಸಿನಿಮಾ ಲೀಕ್ ಬಗ್ಗೆ ವಿಜಯ್ ಮೌನವಹಿಸಿದ್ದಾರೆ. ಅವರು ಸಂಪೂರ್ಣವಾಗಿ ಚುನಾವಣಾ ಪ್ರಚಾರದಲ್ಲಿ ಬ್ಯುಸಿ ಇದ್ದಾರೆ. ಈ ಕಾರಣಕ್ಕೆ ಅವರು ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಿಲ್ಲ ಎನ್ನಲಾಗಿದೆ. ಇನ್ನು, ಕೆಲವು ಪೈರಸಿ ಸೈಟ್​​ಗಳು ಒಳ್ಳೆಯತನ ಮೆರೆಯುವ ಕೆಲಸ ಮಾಡುತ್ತಿವೆ. ಸಿನಿಮಾ ರಿಲೀಸ್ ಆದ ಹೊರತಾಗಿಯೂ ಪೈರಸಿ ಕಾಪಿಯನ್ನು ಅಪ್​​ಲೋಡ್ ಮಾಡುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿವೆ. ಇದು ಅನೇಕರಿಗೆ ಅಚ್ಚರಿ ಮೂಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *