ಐಸ್​​ ಕ್ರೀಂನಲ್ಲಿ ಸಿಕ್ತು ರಬ್ಬರ್​​: ಪ್ರತಿಷ್ಠಿತ ಹೋಟೆಲ್​​ಗೆ ನಗರಸಭೆಯಿಂದ ಭರ್ಜರಿ ದಂಡ

ಐಸ್​​ ಕ್ರೀಂನಲ್ಲಿ ಸಿಕ್ತು ರಬ್ಬರ್​​: ಪ್ರತಿಷ್ಠಿತ ಹೋಟೆಲ್​​ಗೆ ನಗರಸಭೆಯಿಂದ ಭರ್ಜರಿ ದಂಡ

ನೆಲಮಂಗಲ, ಏಪ್ರಿಲ್​​ 12: ರಾಜ್ಯದ ಹಲವೆಡೆ ಶಾಖೆಗಳನ್ನು ಹೊಂದಿರುವ ಪ್ರತಿಷ್ಠಿತ ಉಡುಪಿ ಗ್ರಾಂಡ್ ಹೋಟೆಲ್​​ನ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಸೊಂಡಿಕೊಪ್ಪದಲ್ಲಿರುವ ಶಾಖೆಯಲ್ಲಿ ನೈರ್ಮಲ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಕಂಡುಬಂದಿದೆ. ಧನಂಜಯ ಎಂಬ ಗ್ರಾಹಕರು ತಮ್ಮ ಊಟದ ನಂತರ ಆರ್ಡರ್ ಮಾಡಿದ ಐಸ್ ಕ್ರೀಮ್‌ನಲ್ಲಿ ರಬ್ಬರ್ ಬ್ಯಾಂಡ್ ಪತ್ತೆಯಾಗಿದೆ. ಐಸ್ ಕ್ರೀಮ್‌ನ ಮಧ್ಯಭಾಗದಲ್ಲಿ ರಬ್ಬರ್ ಬ್ಯಾಂಡ್ ಇದ್ದು, ಇದನ್ನು ಮಕ್ಕಳು ಸೇವಿಸಿದ್ದರೆ ಅಪಾಯವಾಗುವ ಸಾಧ್ಯತೆ ಇತ್ತು ಎಂದು ಗ್ರಾಹಕರು ಆತಂಕ ವ್ಯಕ್ತಪಡಿಸಿದ್ದಾರೆ. ಗ್ರಾಹಕರು ಈ ಬಗ್ಗೆ ಪ್ರಶ್ನಿಸಿದಾಗ ಹೋಟೆಲ್ ಮಾಲೀಕರು ಉಡಾಫೆ ಉತ್ತರ ನೀಡಿದ್ದಾರೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದ ಕೆರಳಿದ ಗ್ರಾಹಕರು ಹೋಟೆಲ್ ಲೈಸೆನ್ಸ್ ರದ್ದುಗೊಳಿಸುವಂತೆ ಆಗ್ರಹಿಸಿದ್ದಾರೆ. ಈ ಘಟನೆ ಬಗ್ಗೆ ಟಿವಿ9ನಲ್ಲಿ ವರದಿ ಪ್ರಸಾರವಾದ ನಂತರ, ನೆಲಮಂಗಲ ನಗರಸಭೆ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಹೋಟೆಲ್‌ಗೆ 20,000 ದಂಡ ವಿಧಿಸಿದ್ದಾರೆ. ಹೋಟೆಲ್ ಮಾಲೀಕರು ನಂತರ ಕ್ಷಮೆ ಯಾಚಿಸಿ, ಇನ್ನು ಮುಂದೆ ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

 

Source link

Leave a Reply

Your email address will not be published. Required fields are marked *