ಫೋನ್ ಎತ್ಕೊಂಡು ಹೋಗ್ಬಿಡು: ಟಿಮ್ ಡೇವಿಡ್ ವಿಡಿಯೋ ವೈರಲ್

ಫೋನ್ ಎತ್ಕೊಂಡು ಹೋಗ್ಬಿಡು: ಟಿಮ್ ಡೇವಿಡ್ ವಿಡಿಯೋ ವೈರಲ್

IPL 2026: ಐಪಿಎಲ್ ಎಂದರೆ ಕೇವಲ ಸಿಕ್ಸರ್-ಬೌಂಡರಿಗಳ ಅಬ್ಬರವಲ್ಲ, ಅಲ್ಲಿ ಆಟಗಾರರ ನಡವಳಿಕೆಯೂ ಅಷ್ಟೇ ಮುಖ್ಯವಾಗುತ್ತದೆ. ಪ್ರಸಕ್ತ 2026ರ ಐಪಿಎಲ್ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುತ್ತಿರುವ ಸ್ಫೋಟಕ ಬ್ಯಾಟರ್ ಟಿಮ್ ಡೇವಿಡ್, ತಮ್ಮ ಬ್ಯಾಟಿಂಗ್ ಮಾತ್ರವಲ್ಲದೆ ತಮ್ಮ ಸಮಾಧಾನದ ಗುಣದಿಂದಲೂ ಅಭಿಮಾನಿಗಳ ಮನ ಗೆದ್ದಿದ್ದಾರೆ.

ಇತ್ತೀಚಿನ ಪಂದ್ಯವೊಂದರ ಮುಕ್ತಾಯದ ನಂತರ, ಟಿಮ್ ಡೇವಿಡ್ ಮೈದಾನದಿಂದ ಹೊರಹೋಗುತ್ತಿದ್ದಾಗ ಅಭಿಮಾನಿಯೊಬ್ಬರು ಅತೀ ಉತ್ಸಾಹದಿಂದ ಅವರ ಬಳಿ ಬಂದು ಸೆಲ್ಫಿಗಾಗಿ ವಿನಂತಿಸಿದರು. ಈ ವೇಳೆ ಆ ಅಭಿಮಾನಿ ಡೇವಿಡ್ ಅವರಿಗೆ ತೀರಾ ಹತ್ತಿರ ಬಂದಿದ್ದರೂ, ಅವರು ಕಿರಿಕಿರಿ ಮಾಡಿಕೊಳ್ಳದೆ ಬಹಳ ಶಾಂತವಾಗಿ ಆತನ ಮೊಬೈಲ್ ಫೋನ್ ಪಡೆದು, ಅದನ್ನು ಹಿಂತಿರುಗಿಸಿದ್ದಾರೆ.

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, “ನಿಜವಾದ ಕ್ರೀಡಾ ಮನೋಭಾವ” ಎಂದು ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ. ಮೈದಾನದಲ್ಲಿ ದೈತ್ಯ ಸಿಕ್ಸರ್‌ಗಳನ್ನು ಹೊಡೆಯುವ ಈ ಆಟಗಾರ, ಮೈದಾನದ ಹೊರಗೆ ಕಿರಿ ಕಿರಿ ಅನುಭವಿಸಿದರೂ ಎಷ್ಟೊಂದು ವಿನಯವಾಗಿ ವರ್ತಿಸಿದ್ದಾರೆ ಎಂದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸದ್ಯ ಮುಂಬೈನಲ್ಲಿರುವ ಟಿಮ್ ಡೇವಿಡ್ ಅ್ಯಂಡ್ ಆರ್​ಸಿಬಿ ಪಡೆ ಇಂದು (ಏ.12) ನಡೆಯಲಿರುವ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದ ಮೂಲಕ ಆರ್​ಸಿಬಿ ಗೆಲುವಿನ ಲಯಕ್ಕೆ ಮರಳುವ ವಿಶ್ವಾಸದಲ್ಲಿದೆ.

 

Source link

Leave a Reply

Your email address will not be published. Required fields are marked *