MI vs RCB: ವಾಂಖೆಡೆಯಲ್ಲಿ ರಾರಾಜಿಸಿದ ರಜತ್..! ವೇಗದ ಅರ್ಧಶತಕ ಜಸ್ಟ್ ಮಿಸ್

MI vs RCB: ವಾಂಖೆಡೆಯಲ್ಲಿ ರಾರಾಜಿಸಿದ ರಜತ್..! ವೇಗದ ಅರ್ಧಶತಕ ಜಸ್ಟ್ ಮಿಸ್

ಮುಂಬೈ ಇಂಡಿಯನ್ಸ್‌ ವಿರುದ್ಧ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ಐಪಿಎಲ್ 2026 ರ ಪಂದ್ಯದಲ್ಲಿ ಆರ್​ಸಿಬಿ ನಾಯಕ ರಜತ್ ಪಾಟಿದರ್ ವಿಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸಿದರು. ಆರಂಭಿಕ ಫಿಲ್ ಸಾಲ್ಟ್ ಔಟಾದ ಬಳಿಕ ಬ್ಯಾಟಿಂಗ್​ಗೆ ಬಂದ ರಜತ್, ಬಂದ ಕೂಡಲೇ ಪ್ರತಿಯೊಬ್ಬ ಮುಂಬೈ ಬೌಲರ್​ಗಳ ವಿರುದ್ಧ ಬೌಂಡರಿಗಳ ಮಳೆಗರೆದರು. ಇದರ ಪರಿಣಾಮವಾಗಿ ರಜತ್ ಕೇವಲ 11 ಎಸೆತಗಳಲ್ಲಿ 44 ರನ್ ಕಲೆಹಾಕಿದರು. ರಜತ್ ತಮ್ಮ ಮುಂದಿನ ಎಸೆತದಲ್ಲಿ ಸಿಕ್ಸರ್ ಸಿಡಿಸಿ 50 ರನ್​ಗಳ ಗಡಿ ದಾಟುತ್ತಿದ್ದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತಿ ವೇಗದ ಅರ್ಧಶತಕ ಬಾರಿಸಿದ ಮೊದಲ ಬ್ಯಾಟರ್ ಎನಿಸಿಕೊಳ್ಳುತ್ತಿದ್ದರು. ಆದರೆ ಅದಕ್ಕೆ ಟ್ರೆಂಟ್ ಬೌಲ್ಟ್ ಅವಕಾಶ ಮಾಡಿಕೊಡಲಿಲ್ಲ.

ಆದಾಗ್ಯೂ ರಜತ್ ಎದುರಿಸಿದ 11 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 3 ಬೌಂಡರಿಗಳನ್ನು ಬಾರಿಸಿದರು. ಅಂದರೆ ಎದುರಿಸಿದ 11 ಎಸೆತಗಳಲ್ಲಿ ಬರೋಬ್ಬರಿ 8 ಬೌಂಡರಿಗಳನ್ನು ರಜತ್ ಬಾರಿಸಿದರು. ಒಟ್ಟಾರೆ ಈ 8 ಎಸೆತಗಳಲ್ಲಿ ರಜತ್ 42 ರನ್​ಗಳನ್ನು ಕಲೆಹಾಕಿದರು. ಅಂತಿಮವಾಗಿ ರಜತ್ 17 ಎಸೆತಗಳಲ್ಲಿ ತಮ್ಮ ಸತತ ಎರಡನೇ ಅರ್ಧಶತಕ ಬಾರಿಸಿದರು. ಸ್ಯಾಂಟ್ನರ್ ಅವರ ಎಸೆತವನ್ನು ಬೌಂಡರಿಗಟ್ಟುವ ಮೂಲಕ ರಜತ್ ತಮ್ಮ ಅರ್ಧಶತಕ ಪೂರೈಸಿದರು.

Source link

Leave a Reply

Your email address will not be published. Required fields are marked *