Daily Devotional: ಊಟದ ಬಳಿಕ ನೀವೇ ತಟ್ಟೆ ತೆಗೆಯುವುದರಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ?

Daily Devotional: ಊಟದ ಬಳಿಕ ನೀವೇ ತಟ್ಟೆ ತೆಗೆಯುವುದರಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ?

ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಊಟದ ಬಳಿಕ ತಟ್ಟೆ ತೆಗೆಯುವುದರಹಿಂದೆ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂದು ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಊಟದ ನಂತರ ಸ್ವತಃ ತಮ್ಮ ತಟ್ಟೆಯನ್ನು ತೆಗೆಯುವುದು ಹಿಂದಿನಿಂದಲೂ ರೂಢಿಯಲ್ಲಿರುವ ಒಂದು ಪದ್ಧತಿಯಾಗಿದೆ. ಅನೇಕ ಗುರುಕುಲಗಳು, ಮಠಗಳು ಮತ್ತು ಆಶ್ರಮಗಳಲ್ಲಿ ಈ ಸಂಪ್ರದಾಯವನ್ನು ಪಾಲಿಸಲಾಗುತ್ತದೆ. ಇದನ್ನು ಕೇವಲ ಒಂದು ಆಚಾರವೆಂದು ಪರಿಗಣಿಸದೆ, ಅದರ ಹಿಂದೆ ಆಳವಾದ ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಮಹತ್ವವಿದೆ.

ಈ ಅಭ್ಯಾಸವು ಮನುಷ್ಯರಲ್ಲಿ ವಿನಯ, ವಿಧೇಯತೆ, ಭಕ್ತಿ ಮತ್ತು ಕೃತಜ್ಞತಾ ಭಾವವನ್ನು ಬೆಳೆಸುತ್ತದೆ. ಆಹಾರವನ್ನು ಅನ್ನಯಜ್ಞ ಎಂದು ಪರಿಗಣಿಸಿ, ಅದನ್ನು ತಯಾರಿಸಿದವರಿಗೆ ಮತ್ತು ಪ್ರಕೃತಿಗೆ ಗೌರವ ಸಲ್ಲಿಸಿದಂತಾಗುತ್ತದೆ. ಹೀಗೆ ಮಾಡಿದರೆ ಎಂದಿಗೂ ಆಹಾರದ ಕೊರತೆ ಎದುರಾಗುವುದಿಲ್ಲ ಎಂಬ ನಂಬಿಕೆಯಿದೆ. ತಟ್ಟೆಯನ್ನು ಸ್ವಚ್ಛಗೊಳಿಸಿಡುವುದರಿಂದ ಅಲಕ್ಷ್ಮಿ ದೂರವಾಗಿ ಆರ್ಥಿಕ ಸಮೃದ್ಧಿ ಮತ್ತು ಮನೆಯಲ್ಲಿ ಅನ್ಯೋನ್ಯತೆ ಹೆಚ್ಚುತ್ತದೆ. ಇದು ಶಿಸ್ತು, ನಮ್ರತೆ ಮತ್ತು ಸಹನೆಯ ಬೀಜಗಳನ್ನು ಮೊಳಕೆಯೊಡೆಯಿಸುತ್ತದೆ ಎಂದು ಗುರೂಜಿ ಹೇಳಿದ್ದಾರೆ.

 

 

 

Source link

Leave a Reply

Your email address will not be published. Required fields are marked *