Gold Rate Today Bangalore: ಚಿನ್ನದ ಬೆಲೆ ಇಳಿಕೆ; ಬೆಳ್ಳಿ ಬೆಲೆ ಮತ್ತೆ ದಾಖಲೆ – Kannada News | Gold Price Today on 29th December 2025, Gold And Silver Rates In Bengaluru, Delhi, Mumbai | Latest News in Kannada

ಬೆಂಗಳೂರು, ಡಿಸೆಂಬರ್ 29: ಚಿನ್ನದ ಬೆಲೆ ಸೋಮವಾರ ಕಡಿಮೆಗೊಂಡಿದೆ. ನಿನ್ನೆ 100 ರೂನಷ್ಟು ಹೆಚ್ಚಿದ್ದ ಇದರ ಬೆಲೆ ಇವತ್ತು 65 ರೂ ಕಡಿಮೆಗೊಂಡಿದೆ. 13,000 ರೂ ದಾಟಿದ ಆಭರಣ ಚಿನ್ನದ ಬೆಲೆ (gold rates) ಇದೀಗ 12,990 ರೂಗೆ ಇಳಿದಿದೆ. ವಿದೇಶಗಳಲ್ಲೂ ಹಲವೆಡೆ ಬೆಲೆ ಇಳಿದಿದೆ. ಕೆಲ ದೇಶಗಳಲ್ಲಿ ಬೆಲೆ ಅಲ್ಪ ಹೆಚ್ಚಳ ಪಡೆದಿದೆ. ಆದರೆ, ಇದಕ್ಕೆ ತದ್ವಿರುದ್ಧವಾಗಿ, ಬೆಳ್ಳಿ ಬೆಲೆಯ ಭರ್ಜರಿ ಓಟ ಮುಂದುವರಿಯುತ್ತಲೇ ಇದೆ. ಇಂದು ಇದರ ಬೆಲೆ 4 ರೂ ಹೆಚ್ಚಿದೆ. ನಿನ್ನೆಯಿಂದ ಇದರ ಬೆಲೆ ಬರೋಬ್ಬರಿ 7 ರೂ ಜಾಸ್ತಿಯಾಗಿದೆ. ಕೆಲ ನಗರಗಳಲ್ಲಿ ಬೆಳ್ಳಿ ಬೆಲೆ ಮೊದಲ ಬಾರಿಗೆ 280 ರೂ ಗಡಿ ದಾಟಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,29,900 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,41,710 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 25,800 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,29,900 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 25,800 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 28,100 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಡಿಸೆಂಬರ್ 29ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,171 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,990 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,628 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 258 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,171 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,990 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 258 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 12,990 ರೂ
  • ಚೆನ್ನೈ: 13,020 ರೂ
  • ಮುಂಬೈ: 12,990 ರೂ
  • ದೆಹಲಿ: 13,005 ರೂ
  • ಕೋಲ್ಕತಾ: 12,990 ರೂ
  • ಕೇರಳ: 12,990 ರೂ
  • ಅಹ್ಮದಾಬಾದ್: 12,995 ರೂ
  • ಜೈಪುರ್: 13,005 ರೂ
  • ಲಕ್ನೋ: 13,005 ರೂ
  • ಭುವನೇಶ್ವರ್: 12,990 ರೂ

ಇದನ್ನೂ ಓದಿ: 2025ರಲ್ಲಿ ಭಾರತದ ಬಿಲಿಯನೇರ್​ಗಳ ಪಟ್ಟಿ; ಯಾರು ಅತಿ ಶ್ರೀಮಂತರು, ಯಾರ ಶ್ರೀಮಂತಿಕೆ ಹೆಚ್ಚು ಏರಿದ್ದು?

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 570 ರಿಂಗಿಟ್ (12,639 ರುಪಾಯಿ)
  • ದುಬೈ: 505.75 ಡಿರಾಮ್ (12,387 ರುಪಾಯಿ)
  • ಅಮೆರಿಕ: 141 ಡಾಲರ್ (12,678 ರುಪಾಯಿ)
  • ಸಿಂಗಾಪುರ: 180.50 ಸಿಂಗಾಪುರ್ ಡಾಲರ್ (12,627 ರುಪಾಯಿ)
  • ಕತಾರ್: 503.50 ಕತಾರಿ ರಿಯಾಲ್ (12,419 ರೂ)
  • ಸೌದಿ ಅರೇಬಿಯಾ: 513 ಸೌದಿ ರಿಯಾಲ್ (12,298 ರುಪಾಯಿ)
  • ಓಮನ್: 53.65 ಒಮಾನಿ ರಿಯಾಲ್ (12,529 ರುಪಾಯಿ)
  • ಕುವೇತ್: 41.13 ಕುವೇತಿ ದಿನಾರ್ (12,052 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 258 ರೂ
  • ಚೆನ್ನೈ: 281 ರೂ
  • ಮುಂಬೈ: 258 ರೂ
  • ದೆಹಲಿ: 258 ರೂ
  • ಕೋಲ್ಕತಾ: 258 ರೂ
  • ಕೇರಳ: 281 ರೂ
  • ಅಹ್ಮದಾಬಾದ್: 258 ರೂ
  • ಜೈಪುರ್: 258 ರೂ
  • ಲಕ್ನೋ: 258 ರೂ
  • ಭುವನೇಶ್ವರ್: 281 ರೂ
  • ಪುಣೆ: 258

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *