Headlines

ನಾಪತ್ತೆ ಆಗಿದ್ದ ದರ್ಶನ್ ಮಾಜಿ ಮ್ಯಾನೇಜರ್ ದಿಢೀರ್ ಪತ್ತೆ; ಹೇಳಿದ್ದೇನು? – Kannada News | Darshan’s Ex Manager Mallikarjun Resurfaces, Reveals Disappearance Reason

ನಟ ದರ್ಶನ್ ಅವರು (Darshan) ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದಾಗ ಸಾಕಷ್ಟು ಟೀಕೆಗಳು ಬಂದವು. ಇದೇ ವೇಳೆ ಅವರ ಮಾಜಿ ಮ್ಯಾನೇಜರ್ ಮಲ್ಲಿ ಅಲಿಯಾಸ್ ಮಲ್ಲಿಕಾರ್ಜುನ್ ವಿಷಯ ಕೂಡ ಮುನ್ನೆಲೆಗೆ ಬಂತು. ‘ಅವರನ್ನು ಕೊಲೆ ಮಾಡಲಾಗಿದೆ. ಈ ಪ್ರಕರಣದಲ್ಲಿ ತನಿಖೆ ಆಗಬೇಕು’ ಎಂದೆಲ್ಲ ಒತ್ತಾಯಿಸಲಾಯಿತು. ಈಗ ಈ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ಎದುರಾಗಿದೆ. ಮಲ್ಲಿಕಾರ್ಜುನ್ ಅವರೇ ಎಲ್ಲರ ಎದುರು ಬಂದಿದ್ದು, ಇಷ್ಟು ದಿನ ತಲೆಮರಿಸಿಕೊಂಡಿದ್ದಕ್ಕ ಕಾರಣ ನೀಡಿದ್ದಾರೆ.

ಮಲ್ಲಿಕಾರ್ಜುನ ಅವರು ವೃತ್ತಿಯಲ್ಲಿ ನಿರ್ಮಾಪಕರಾಗಿದ್ದರು. ವಿತರಣೆ ಕೂಡ ಮಾಡುತ್ತಿದ್ದರು. ಅವರು ಯಶ್ ಅಭಿನಯದ ‘ಮೊದಲ ಸಲ’ ಚಿತ್ರದ ನಿರ್ಮಾಣದಲ್ಲಿ ಕೈ ಜೋಡಿಸಿದ್ದರು. ಅವರು ಹೋಟೆಲ್ ಉದ್ಯಮ ಕೂಡ ನಡೆಸುತ್ತಿದ್ದರು ಎನ್ನಲಾಗಿದೆ. ಆ ಬಳಿಕ ದರ್ಶನ್ ಮ್ಯಾನೇಜರ್ ಆದರು. ನಂತರ ಅವರು ಕೆಲವು ವರ್ಷ ಮಾಯ ಆದರು. ರೇಣುಕಾಸ್ವಾಮಿ ಕೊಲೆ ಪ್ರಕರಣ ಚರ್ಚೆಗೆ ಬಂದಾಗ ಮಲ್ಲಿಕಾರ್ಜುನ ನಾಪತ್ತೆ ಪ್ರಕರಣದ ತನಿಖೆಯೂ ಆಗಬೇಕು ಎಂಬ ಒತ್ತಾಯ ಕೇಳಿ ಬಂತು.

ಈಗ ಮಲ್ಲಿಕಾರ್ಜುನ ಪತ್ತೆಯಾಗಿದ್ದಾರೆ. ಇಂದು (ಏಪ್ರಿಲ್ 16) ಸುದ್ದಿಗೋಷ್ಠಿ ಕರೆದಿದ್ದಾರೆ. ಈ ಬಗ್ಗೆ ಸುತ್ತೋಲೆ ನೀಡಿರೋ ಅವರು, ‘ನಾನು ಮಲ್ಲಿಕಾರ್ಜುನ್ ಬಿ ಸಂಕನಗೌಡರ. ಮೂಲತಃ ಗದಗದವನು. 18 ವರ್ಷಗಳ ಕಾಲ ನಾನು ಚಲನಚಿತ್ರ ಕ್ಷೇತ್ರದಲ್ಲಿ ಹಲವಾರು ಪ್ರಾಜೆಕ್ಟ್‌ಗಳಲ್ಲಿ ಸಹಾಯಕ ನಿರ್ದೇಶಕ ನಾಗಿ,ಸಹ ನಿರ್ದೇಶಕನಾಗಿ, ನಿರ್ಮಾಪಕನಾಗಿ, ವಿತರಕನಾಗಿ, ಕೆಲಸ ಮಾಡಿದ್ದೇನೆ. ಕೆಲವು ಅನಿವಾರ್ಯ ಕಾರಣಗಳಿಂದ, ವೈಯಕ್ತಿಕ ಸಮಸ್ಯೆಗಳ ಹಿನ್ನೆಲೆ ಮತ್ತು ಉದ್ಯಮದಲ್ಲಿ ನಷ್ಟ ಉಂಟಾದ ಹಿನ್ನೆಲೆಯಲ್ಲಿ ಕೆಲವು ವರ್ಷಗಳ ಹಿಂದೆ ನಾನು ಬೆಂಗಳೂರನ್ನು ತಾತ್ಕಾಲಿಕವಾಗಿ ಬಿಡುವಂತಹ ಪರಿಸ್ಥಿತಿ ಬಂತು’ ಎಂದು ಅವರು ನಾಪತ್ತೆ ಹಿಂದಿನ ಉದ್ದೇಶ ರಿವೀಲ್ ಮಾಡಿದ್ದಾರೆ.

ಇದನ್ನೂ ಓದಿ: ದರ್ಶನ್ ಫಾರಂ ಹೌಸ್ ಮ್ಯಾನೇಜರ್ ಎನ್ನಲಾದ ವ್ಯಕ್ತಿಯ ಆತ್ಮಹತ್ಯೆ: ಪ್ರಕರಣದ ಮರು ತನಿಖೆ?

‘ಕೆಲವು ವರ್ಷಗಳಾದ ಮೇಲೆ ಮತ್ತೆ ನಾನು ವಾಪಾಸ್ ಬಂದಿದ್ದೀನಿ. ನನ್ನ ಮುಂದಿನ ಯೋಜನೆಗಳ ಬಗ್ಗೆ ನಿಮ್ಮೊಂದಿಗೆ ಮಾತನಾಡುತ್ತೇನೆ’ ಎಂದು ಅವರು ಹೇಳಿದ್ದಾರೆ. ಈ ವೇಳೆ ದರ್ಶನ್ ಬಗ್ಗೆಯೂ ಅವರು ಮಾತನಾಡಬಹುದು ಎಂದು ನಿರೀಕ್ಷಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *