Headlines

Viral: ಹತ್ತನೇ ತರಗತಿ ಪರೀಕ್ಷೆಯಲ್ಲಿ ಮಹಾತ್ಮ ಗಾಂಧೀಜಿ ಪಡೆದ ಅಂಕ ಎಷ್ಟು ಗೊತ್ತಾ? – Kannada News | Do you know what score Mahatma Gandhi got in the 10th class exam?

ಮಹಾತ್ಮ ಗಾಂಧೀಜಿ ಅಂಕ ಪಟ್ಟಿImage Credit source: Twitter/ Pinterest

ಓದೋದ್ರಲ್ಲಿ ಎಲ್ಲಾ ಮಕ್ಕಳು (children) ಬುದ್ಧಿವಂತರಾಗಿರುವುದಿಲ್ಲ. ಕೆಲ ಮಕ್ಕಳು ನೂರಕ್ಕೆ ನೂರು ಮಾರ್ಕ್ ತೆಗೆದುಕೊಂಡರೆ, ಇನ್ನು ಕೆಲವರು ಜಸ್ಟ್ ಪಾಸ್ ಆಗೋದು ಕಷ್ಟಕ್ಕೆ. ರಿಸಲ್ಟ್ ಬರುವ ದಿನವಂತೂ ಕೆಲ ಮಕ್ಕಳಿಗೆ ಪಾಸ್ ಆಗುತ್ತೇವೋ ಇಲ್ವೋ ಅನ್ನೋ ಭಯ ಇರುತ್ತದೆ. ಇದೀಗ ಗಾಂಧೀಜಿಯವರ ಹತ್ತನೇ ತರಗತಿಯ ಅಂಕ ಪಟ್ಟಿ ವೈರಲ್ ಆಗುತ್ತಿದೆ. ಎಷ್ಟೋ ಜನರಿಗೆ  ಮಹಾತ್ಮ ಗಾಂಧೀಜಿಯವರು (Mahatma Gandhiji) ಎಷ್ಟು ಅಂಕ ಪಡೆದಿದ್ದರು ಎನ್ನುವ ಕುತೂಹಲವಿರುವುದು ಸಹಜ. ಹೌದು, ಮಹಾತ್ಮ ಗಾಂಧೀಜಿಯವರು ಹತ್ತನೇ ತರಗತಿ ಪರೀಕ್ಷೆಯಲ್ಲಿ ಒಟ್ಟು 247 ಗಳಿಸಿದ್ದರು ಅಂದ್ರೆ ನಿಮಗೆ ಶಾಕ್ ಆಗ್ಬಹುದು. ಅಂದಹಾಗೆ, ಹತ್ತನೇ ತರಗತಿ ಪರೀಕ್ಷೆಯಲ್ಲಿ ಪಡೆದ ಅಂಕಗಳ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ

Common Man ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಹಾತ್ಮ ಗಾಂಧೀಜಿಯವರ ಅಂಕ ಪಟ್ಟಿಯನ್ನು ಕಾಣಬಹುದು. 1887 ರಲ್ಲಿ ರಾಜ್ ಕೋಟಟ್‌ನ ಆಲ್ಫ್ರೆಡ್ ಹೈಸ್ಕೂಲ್‌ನಲ್ಲಿ ಓದುತ್ತಿದ್ದ ವೇಳೆ ಹತ್ತನೇ ತರಗತಿ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ನೀವಿಲ್ಲಿ ಗಮನಿಸಬಹುದು. ಈ ಅಂಕಪಟ್ಟಿಯ ಪ್ರಕಾರ, ಮಹಾತ್ಮ ಗಾಂಧಿ ಅವರು ಇಂಗ್ಲಿಷ್ ವಿಷಯದಲ್ಲಿ 89 ಅಂಕಗಳನ್ನು ಗಳಿಸಿದರೆ, ದ್ವಿತೀಯ ಭಾಷಾ ವಿಷಯದಲ್ಲಿ 45 ಅಂಕಗಳು ಮತ್ತು ಗಣಿತದಲ್ಲಿ 59 ಅಂಕಗಳು, ವಿಜ್ಞಾನದಲ್ಲಿ 34 ಹಾಗೂ ಇತಿಹಾಸದಲ್ಲಿ 20 ಅಂಕಗಳನ್ನು ಪಡೆದಿರುವುದನ್ನು ನೀವಿಲ್ಲಿ ನೋಡಬಹುದು. ಅಂದರೆ 625 ರಲ್ಲಿ ಕೇವಲ 247.5 ಅಂಕಗಳನ್ನು ಪಡೆದುಕೊಂಡಿರುವುದನ್ನು ಕಾಣಬಹುದು. ಸರಾಸರಿ ವಿದ್ಯಾರ್ಥಿಯಾಗಿದ್ದ ಅವರು ಶಾಲಾ ಅಂತಿಮ ಪರೀಕ್ಷೆಯಲ್ಲಿ 800 ವಿದ್ಯಾರ್ಥಿಗಳಲ್ಲಿ 404ನೇ ರ್ಯಾಂಕ್‌ ಪಡೆದಿದ್ದರು ಎನ್ನುವುದಕ್ಕೆ ಈ ಪೋಸ್ಟ್ ಸಾಕ್ಷಿಯಾಗಿದೆ.

ವೈರಲ್ ಪೋಸ್ಟ್ ಇಲ್ಲಿದೆ

ಇದನ್ನೂ ಓದಿ: ಪುಟಾಣಿ ತೊದಲು ನುಡಿಯಲ್ಲಿ ಬೈಯುತ್ತಿದ್ದರೆ ಮುಗುಳುನಗೆ ಬೀರಿದ ತಂದೆ

ಈ ಪೋಸ್ಟ್ ಒಂದೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಜ್ಞಾನ ಕಡಿಮೆ .ಆ ಸಮಯದಲ್ಲಿ ಕೇವಲ ಬೆರಳೆಣಿಕೆಯಷ್ಟು ಜನರು ಮಾತ್ರ ಶಿಕ್ಷಣ ಪಡೆದಿದ್ದರು ಮತ್ತು ಶಾಲೆಗಳ ಬಗ್ಗೆ ತಿಳಿದಿರಲಿಲ್ಲ .ಇತ್ತೀಚಿನ ದಿನಗಳಲ್ಲಿ ಶಾಲಾ ಶಿಕ್ಷಣವು ತುಂಬಾ ಸಾಮಾನ್ಯವಾದಾಗ ಅವಿದ್ಯಾವಂತರು ಸಹ ಮುಖ್ಯಮಂತ್ರಿ ಮತ್ತು ಪ್ರಧಾನಿ ಸ್ಥಾನಗಳನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ಭಗತ್ ಸಿಂಗ್, ಚಂದ್ರಶೇಖರ್ ಆಜಾದ್ ಮತ್ತು ಸಾವರ್ಕರ್ ಅವರ ಮಾರ್ಕ್‌ಶೀಟ್ ಅನ್ನು ದಯವಿಟ್ಟು ಹಂಚಿಕೊಳ್ಳಬಹುದೇ? ಎಂದು ಕೇಳಿದ್ದಾರೆ. ಮತ್ತೊಬ್ಬರು, ಇದು ನಿಜವೇ ಎಂದು ಪ್ರಶ್ನೆ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *