Headlines

ಹೈದರಾಬಾದ್‌ನಲ್ಲಿ ‘ಸೀನಿಯರ್ ಮ್ಯಾನೇಜರ್’, ಬೆಂಗಳೂರಿನಲ್ಲಿ ‘ಮ್ಯಾನೇಜರ್’!; ಎರಡು ಹುದ್ದೆಗೂ ಒಂದೇ ಸಂಬಳ: ಈಗ ನಗರ ಮುಖ್ಯವೋ ಅಥವಾ ಹುದ್ದೆಯೋ? – Kannada News | MNC Job Offer: Bengaluru Manager or Hyd Senior Manager? IT Pros Debate Career vs. City

ಬೆಂಗಳೂರು, ಏ.17: ಸೋಶಿಯಲ್​ ಮೀಡಿಯಾದಲ್ಲಿ ಈ ಐಟಿ ಕಂಪನಿಗಳು ಉದ್ಯೋಗಿಗಳ ಗೋಳು ಮುಗಿಯುವುದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೊಂದು ಇಂತಹ ಪೋಸ್ಟ್​​​ಗಳು ವೈರಲ್​ ಆಗುತ್ತ ಇರುತ್ತದ. ಸಾಫ್ಟ್‌ವೇರ್ ಮತ್ತು ಕಾರ್ಪೊರೇಟ್ ಲೋಕದಲ್ಲಿ ‘ಹುದ್ದೆಯ ಹೆಸರು’ (Title) ಮುಖ್ಯವೋ ಅಥವಾ ‘ವಾಸಿಸುವ ನಗರ’ (Location) ಮುಖ್ಯವೋ? ರೆಡ್ಡಿಟ್ (Reddit) ಬಳಕೆದಾರರೊಬ್ಬರು ಹಂಚಿಕೊಂಡಿರುವ ಈ ಒಂದು ಪೋಸ್ಟ್ ಈಗ ಐಟಿ ವಲಯದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ.

ಎಂಟು ವರ್ಷಗಳ ಅನುಭವವಿರುವ ಅಭ್ಯರ್ಥಿಯೊಬ್ಬರು ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ (MNC) ‘ಸೀನಿಯರ್ ಮ್ಯಾನೇಜರ್’ ಹುದ್ದೆಗೆ ಸಂದರ್ಶನ ನೀಡಿದ್ದರು. ಅಭ್ಯರ್ಥಿಯು ವೈಯಕ್ತಿಕ ಕಾರಣಗಳಿಂದಾಗಿ ಬೆಂಗಳೂರಿನಲ್ಲೇ ಇರಲು ಬಯಸಿದ್ದರು. ಆದರೆ, ಕಂಪನಿಯು ಅವರ ಮುಂದೆ ಎರಡು ವಿಚಿತ್ರ ಆಯ್ಕೆಗಳನ್ನು ಇಟ್ಟಿದೆ. ಒಂದು ಹೈದರಾಬಾದ್‌ನಲ್ಲಿ ‘ಸೀನಿಯರ್ ಮ್ಯಾನೇಜರ್’ ಹುದ್ದೆ, ಎರಡನೇಯದ್ದು, ಬೆಂಗಳೂರಿನಲ್ಲೇ ಇರಬೇಕೆಂದರೆ ‘ಮ್ಯಾನೇಜರ್’ ಹುದ್ದೆ. ಈಗ ಈ ವ್ಯಕ್ತಿ ವಿಚಿತ್ರ ಸಂಕಷ್ಟಕ್ಕೆ ಸಿಲುಕಿದ್ದೇನೆ ಎಂದು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Private Bus Collision Yadgir (1)

ಎರಡೂ ಆಯ್ಕೆಗಳಲ್ಲಿ ಸಂಬಳ (CTC) ಒಂದೇ ಆಗಿರುತ್ತದೆ! ಕಂಪನಿಯ ಪ್ರಕಾರ, ಎರಡೂ ಕೆಲಸಗಳು ಒಂದೇ ರೀತಿಯದ್ದಾಗಿದ್ದರೂ, ಬೆಂಗಳೂರಿನಲ್ಲಿ ಸದ್ಯಕ್ಕೆ ಸೀನಿಯರ್ ಮ್ಯಾನೇಜರ್ ಹುದ್ದೆಗಳು ಖಾಲಿ ಇಲ್ಲದ ಕಾರಣ ಈ ‘ಟೈಟಲ್ ಹಿಟ್’ (Title Hit) ಅನಿವಾರ್ಯ ಎಂದಿದೆ.ಈ ಗೊಂದಲಕ್ಕೆ ನೆಟ್ಟಿಗರು ಭಿನ್ನ ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು-ಪುಣೆಗೆ ಬರುತ್ತಿದೆ ‘ವಂದೇ ಭಾರತ್ ಸ್ಲೀಪರ್’: 18 ಗಂಟೆಯ ಪ್ರಯಾಣ ಇನ್ಮುಂದೆ ಕೇವಲ 13 ಗಂಟೆ!

“ಹೈದರಾಬಾದ್‌ಗೆ ತೆರಳುವುದು ಉತ್ತಮ. ಬೆಂಗಳೂರಿನ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಮುಂದಿನ ಹತ್ತು ವರ್ಷ ಅಲ್ಲಿ ಯಾವುದೇ ಭರವಸೆ ಇಲ್ಲ. ಉತ್ತಮ ಜೀವನ ಗುಣಮಟ್ಟಕ್ಕಾಗಿ ಹೈದರಾಬಾದ್ ಆರಿಸಿಕೊಳ್ಳಿ” ಎಂದು ಒಬ್ಬರು ಸಲಹೆ ನೀಡಿದ್ದಾರೆ. ಮುಂದಿನ ಕೆಲಸದ ಸಂದರ್ಶನಗಳಲ್ಲಿ ಹುದ್ದೆಯ ಹೆಸರು ಮುಖ್ಯವಾಗುತ್ತದೆ. ಒಂದು ವೇಳೆ ಬೆಂಗಳೂರನ್ನೇ ಆರಿಸಿಕೊಂಡರೆ, ಸಂಬಳ ಮತ್ತು ಜವಾಬ್ದಾರಿ ಒಂದೇ ಆಗಿದ್ದರೂ ಟೈಟಲ್ ಮಾತ್ರ ಬದಲಾಗಿದೆ ಎಂಬ ಬಗ್ಗೆ ಕಂಪನಿಯಿಂದ ಲಿಖಿತ ದಾಖಲೆ ಪಡೆದುಕೊಳ್ಳಿ” ಎಂದಿದ್ದಾರೆ. “ಕೇವಲ ಹುದ್ದೆಯ ಹೆಸರಿಗಾಗಿ ಚೆನ್ನಾಗಿರುವ ಜೀವನಶೈಲಿಯನ್ನು ಹಾಳು ಮಾಡಿಕೊಳ್ಳಬೇಡಿ. ಸಂಬಳ ಒಂದೇ ಇರುವಾಗ ನಿಮಗೆ ಇಷ್ಟವಾದ ನಗರದಲ್ಲೇ ಇರಿ” ಎಂದು ಇನ್ನು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಕೆಲವರು, “ಕೇವಲ 8 ವರ್ಷದ ಅನುಭವಕ್ಕೆ ಸೀನಿಯರ್ ಮ್ಯಾನೇಜರ್ ಹುದ್ದೆ ಸಿಗುತ್ತದೆಯೇ? ಮತ್ತು ಮ್ಯಾನೇಜರ್ ಆಗಿ ಒಬ್ಬರೇ ಕೆಲಸ ಮಾಡುವ (IC Role) ಜವಾಬ್ದಾರಿ ಏಕೆ?” ಎಂಬ ಕುತೂಹಲಕಾರಿ ಪ್ರಶ್ನೆಗಳನ್ನೂ ಎತ್ತಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *