Headlines

SRH vs DC: ಡೆಲ್ಲಿ ವಿರುದ್ಧ ಅಬ್ಬರಿಸಿದ ಅಭಿಷೇಕ್; ಸ್ಫೋಟಕ ಅರ್ಧಶತಕ – Kannada News | IPL 2026: Abhishek Sharma’s Blazing Fifty Powers SRH vs DC in Hyderabad Clash

ಐಪಿಎಲ್ 2026 ರ 31 ನೇ ಪಂದ್ಯದು ಸನ್‌ರೈಸರ್ಸ್ ಹೈದರಾಬಾದ್ ಮತ್ತು ದೆಹಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿವೆ. ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಸನ್‌ರೈಸರ್ಸ್ ಹೈದರಾಬಾದ್‌ ತಂಡಕ್ಕೆ ಆರಂಭಿಕ ಅಭಿಷೇಕ್ ಶರ್ಮಾ ಮತ್ತೆ ನೆರವಾಗಿದ್ದಾರೆ. ಬೌಲಿಂಗ್ ಸ್ನೇಹಿ ಪಿಚ್​ನಲ್ಲಿ ನಿಧಾನಗತಿಯ ಆರಂಭ ಪಡೆದುಕೊಂಡ ಅಭಿಷೇಕ್ 25 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

ಈ ಪಂದ್ಯದಲ್ಲಿ ಸನ್‌ರೈಸರ್ಸ್​ಗೆ ಸ್ಫೋಟಕ ಆರಂಭ ಸಿಗಲಿಲ್ಲ. ಮೊದಲ 6 ಓವರ್​ಗಳಲ್ಲಿ ಸನ್‌ರೈಸರ್ಸ್ ತಂಡ 67 ರನ್ ಮಾತ್ರ ಕಲೆಹಾಕಿತು. ಆದರೆ ತಂಡ ಒಂದೇ ಒಂದು ವಿಕೆಟ್ ಕಳೆದುಕೊಂಡಿರಲಿಲ್ಲ. ಆದಾಗ್ಯೂ ಇಲ್ಲಿಂದ ಗೇರ್ ಬದಲಿಸಿದ ಅಭಿಷೇಕ್ 25 ಎಸೆತಗಳಲ್ಲಿ ಈ ಆವೃತ್ತಿಯ ಮೂರನೇ ಅರ್ಧಶತಕವನ್ನು ಪೂರೈಸಿದರು. ಇದರ ಜೊತೆಗೆ ಹೆಡ್ ಅವರೊಂದಿಗೆ ಮೊದಲ ವಿಕೆಟ್​ಗೆ 97 ರನ್​ಗಳ ಜೊತೆಯಾಟವನ್ನು ರಚಿಸಿದರು.

Source link

Leave a Reply

Your email address will not be published. Required fields are marked *