ರಾಜ್ಕುಮಾರ್ ಮೃತಪಟ್ಟು ಅದೆಷ್ಟೋ ವರ್ಷಗಳು ಕಳೆದಿವೆ. ಆದಾಗ್ಯೂ ಅವರು ಹಾಕಿಕೊಟ್ಟ ಮಾರ್ಗದರ್ಶನ, ಅವರ ವರ್ಚಸ್ಸು ಈಗಲೂ ಹಾಗೆಯೇ ಇದೆ. ಕನ್ನಡಿಗರು ಮಾತ್ರ ಅಲ್ಲ, ಪರಭಾಷಿಗರೂ ರಾಜ್ಕುಮಾರ್ ಅವರನ್ನು ತುಂಬಾನೇ ಇಷ್ಟಪಡುತ್ತಾರೆ. ಇತ್ತೀಚೆಗೆ ಮಲಯಾಳಂ ನಟ ಮೋಹನ್ಲಾಲ್ ಅವರು ರಾಜ್ಕುಮಾರ್ ಹಾಡನ್ನು ಹಾಡಿದ್ದರು. ಈಗ ಈ ವಿಡಿಯೋನ ಶಿವರಾಜ್ಕುಮಾರ್ ಅವರಿಗೆ ತೋರಿಸಿದ್ದಾರೆ. ಈ ಸಂದರ್ಭದ ವಿಡಿಯೋ ಗಮನ ಸೆಳೆದಿದೆ.
ಇತ್ತೀಚೆಗೆ ಅಮೆರಿಕದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮೋಹನ್ಲಾಲ್ ಅವರು ಭಾಗಿ ಆಗಿದ್ದರು. ವೇದಿಕೆ ಮೇಲೆ ಅವರು ಹಾಡು ಹಾಡಿದ್ದಾರೆ. ಅದು ಕೂಡ ರಾಜ್ಕುಮಾರ್ ಮತ್ತು ಮಂಜುಳಾ ನಟನೆಯ ‘ಎರಡು ಕನಸು’ ಸಿನಿಮಾದ್ದು. ಈ ಚಿತ್ರದ ಎವರ್ಗ್ರೀನ್ ಹಾಡು ‘ಎಂದೆಂದೂ ನಿನ್ನನು ಮರೆತು ಬದುಕಿರಲಾರೆ’ ಗೀತೆ ಮೋಹನ್ಲಾಲ್ ಕಂಠದಿಂದ ಮೂಡಿ ಬಂದಿದೆ.
ಇದನ್ನೂ ಓದಿ: ಡಾ. ರಾಜ್ಕುಮಾರ್ ಮೇಲಿನ ಅಭಿಮಾನಕ್ಕೆ ಅಮೆರಿಕದಲ್ಲಿ ಕನ್ನಡ ಗೀತೆ ಹಾಡಿದ ಮೋಹನ್ಲಾಲ್
ಏಪ್ರಿಲ್ 24 ರಾಜ್ಕುಮಾರ್ ಜನ್ಮದಿನ. ಈ ವಿಶೇಷ ಸಂದರ್ಭದಲ್ಲಿ ಈ ಹಾಡು ವೈರಲ್ ಆಗಿತ್ತು. ಇದಾದ ಬೆನ್ನಲ್ಲೇ ಇದರ ಮುಂದಿನ ವರ್ಷನ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದೆ. ತಾವು ಹಾಡಿದ ಹಾಡನ್ನು ಶಿವರಾಜ್ಕುಮಾರ್ ಅವರಿಗೆ ಮೋಹನ್ಲಾಲ್ ಅವರು ತೋರಿಸಿದ್ದಾರೆ. ಮೋಹನ್ಲಾಲ್ ಹಾಡಿದ ಹಾಡಿನ ವಿಡಿಯೋ ನೋಡುತ್ತಾ ಶಿವಣ್ಣ ತಲೆದೂಗಿದ್ದಾರೆ. ‘ನಾನು ಅಣ್ಣಾವ್ರ ಹಾಡನ್ನು ಹಾಡಿದ್ದೀನಿ ಹೇಗಿದೆ ನೋಡಿ’ ಎಂದು ಶಿವಣ್ಣಗೆ ಮೋಹನ್ಲಾಲ್ ಹೇಳಿದಂತಿದೆ.
Malayalam superstar Mohanlal sings Kannada legend Rajkumar’s hit song Endendu Ninnanu Maretu, at an event in the US recently.#mohanlal #drrajkumar #rajkumar #kfi #kannadacinema pic.twitter.com/rF2FYg0BAN
— Bangalore Times (@BangaloreTimes1) April 23, 2026
ಶಿವರಾಜ್ಕುಮಾರ್ ಹಾಗೂ ಮೋಹನ್ಲಾಲ್ ಅವರು ‘ಜೈಲರ್ 2’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ರಜನಿಕಾಂತ್ ಹೀರೋ. ಮೊದಲ ಭಾಗದಲ್ಲಿ ಶಿವಣ್ಣ ಹಾಗೂ ಮೋಹನ್ಲಾಲ್ ಅವರದ್ದು ಅತಿಥಿ ಪಾತ್ರ ಆಗಿತ್ತು. ಎರಡೂ ಪಾತ್ರಗಳು ಜನಮೆಚ್ಚುಗೆ ಪಡೆದಿದ್ದವು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.