Headlines

ಹೆಚ್ಚು ಯೋಚನೆ ಮಾಡುವವರಿಗೆ ಬಿಪಿ ಬೇಗ ಬರುತ್ತಾ? ಈ ಸಮಸ್ಯೆಯನ್ನು ತಡೆಗಟ್ಟುವುದು ಹೇಗೆ? – Kannada News | Does Overthinking Increase Blood Pressure? Anxiety & Hypertension Link

ಇಂದಿನ ವೇಗದ ಜೀವನಶೈಲಿಯಲ್ಲಿ ಹೆಚ್ಚು ಯೋಚನೆ (ಓವರ್‌ಥಿಂಕಿಂಗ್) ಮತ್ತು ಮಾನಸಿಕ ಒತ್ತಡ ಸಾಮಾನ್ಯ ಸಮಸ್ಯೆಯಾಗಿ ಪರಿಣಮಿಸಿದೆ. ಸಣ್ಣ ವಿಷಯಗಳನ್ನೂ ಹೆಚ್ಚು ಆಲೋಚಿಸುವ ಅಭ್ಯಾಸದಿಂದ ಮನಸ್ಸಿನ ಮೇಲೆ ಒತ್ತಡ ಹೆಚ್ಚುತ್ತದೆ. ತಜ್ಞರ ಪ್ರಕಾರ, ಈ ಅಭ್ಯಾಸವು ಕೇವಲ ಮಾನಸಿಕ ಆರೋಗ್ಯಕ್ಕಷ್ಟೇ ಅಲ್ಲ, ದೈಹಿಕ ಆರೋಗ್ಯಕ್ಕೂ ಪರಿಣಾಮ ಬೀರುತ್ತದೆ ಎನ್ನುತ್ತಾರೆ. ಹೌದು, ಇದು ಕೆಲವೊಮ್ಮೆ ಅರಿವಿಗೆ ಬಾರದಿರಬಹುದು. ಹಾಗಾದರೆ ಹೆಚ್ಚು ಯೋಚನೆ ಮಾಡುವುದಕ್ಕೂ ಬಿಪಿ (BP) ಬರುವುದಕ್ಕೂ ಸಂಬಂಧವಿದೆಯೇ ಓವರ್‌ಥಿಂಕ್ ಮಾಡುವುದನ್ನು ತಡೆಗಟ್ಟುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ. ಸಂಪೂರ್ಣ ಮಾಹಿತಿ ಸ್ಟೋರಿಯಲ್ಲಿದೆ.

ಹೆಚ್ಚು ಯೋಚನೆ ಮತ್ತು ರಕ್ತದೊತ್ತಡಕ್ಕಿರುವ ಸಂಬಂಧ;

ವೈದ್ಯರ ಪ್ರಕಾರ, ವ್ಯಕ್ತಿ ನಿರಂತರವಾಗಿ ಒತ್ತಡ ಮತ್ತು ಚಿಂತೆಗೊಳಗಾದಾಗ ದೇಹದಲ್ಲಿ ಕೆಲವು ಹಾರ್ಮೋನ್‌ಗಳು ಸಕ್ರಿಯವಾಗುತ್ತವೆ. ಇವು ಹೃದಯದ ಬಡಿತವನ್ನು ಹೆಚ್ಚಿಸಿ ರಕ್ತದ ಸಂಚಾರವನ್ನು ಪ್ರಭಾವಿತಗೊಳಿಸುತ್ತದೆ. ಇದರ ಪರಿಣಾಮವಾಗಿ ರಕ್ತದ ಒತ್ತಡ (ಬ್ಲಡ್ ಪ್ರೆಶರ್) ಹೆಚ್ಚುವ ಸಾಧ್ಯತೆ ಇರುತ್ತದೆ. ಈ ಸ್ಥಿತಿ ದೀರ್ಘಕಾಲ ಮುಂದುವರಿದರೆ ಹೃದಯದ ಆರೋಗ್ಯಕ್ಕೂ ಅಪಾಯ ಉಂಟುಮಾಡಬಹುದು. ಆದರೆ ಪ್ರತಿ ವ್ಯಕ್ತಿಯ ದೇಹ ವಿಭಿನ್ನವಾಗಿರುವುದರಿಂದ ಪರಿಣಾಮವೂ ವಿಭಿನ್ನವಾಗಿರುತ್ತದೆ. ಕೆಲವರಿಗೆ ತಕ್ಷಣವೇ ಪರಿಣಾಮ ಕಾಣಿಸದಿದ್ದರೂ, ದೀರ್ಘಕಾಲದ ಒತ್ತಡದಿಂದ ಸಮಸ್ಯೆ ಗಂಭೀರವಾಗಬಹುದು. ಆದ್ದರಿಂದ ಮಾನಸಿಕ ಒತ್ತಡವನ್ನು ನಿಯಂತ್ರಿಸುವುದು ಅತ್ಯಂತ ಅಗತ್ಯ.

ಇದನ್ನೂ ಓದಿ: ಬೇಸಿಗೆಯಲ್ಲಿ ಬಿಪಿ ಸಾಮಾನ್ಯವಾಗಿದ್ದರೂ ಹೃದಯಕ್ಕೆ ಅಪಾಯ: ಮಾಸ್ಕ್ಡ್ ಹೈಪರ್ಟೆನ್ಷನ್ ಬಗ್ಗೆ ವೈದ್ಯರ ಎಚ್ಚರಿಕೆ

ಹೆಚ್ಚು ಯೋಚನೆ ಮಾಡುವುದನ್ನು ಹೇಗೆ ನಿಯಂತ್ರಿಸಬೇಕು?

ತಜ್ಞರು ಸಲಹೆ ನೀಡುವಂತೆ, ದಿನಚರಿಯಲ್ಲಿ ಕೆಲವು ಆರೋಗ್ಯಕರ ಬದಲಾವಣೆಗಳನ್ನು ಮಾಡುವುದು ಮುಖ್ಯ. ಧ್ಯಾನ, ಯೋಗ ಮತ್ತು ವ್ಯಾಯಾಮ ಮನಸ್ಸನ್ನು ಶಾಂತಗೊಳಿಸಲು ಸಹಾಯಕ. ದಿನಕ್ಕೆ ಕನಿಷ್ಠ 30 ನಿಮಿಷ ವ್ಯಾಯಾಮ ಮಾಡುವುದು ಒತ್ತಡವನ್ನು ಕಡಿಮೆ ಮಾಡುತ್ತದೆ. ಅದರ ಜೊತೆಗೆ ಸರಿಯಾಗಿ ನಿದ್ರೆ ಮಾಡುವುದು ಬಹಳ ಮುಖ್ಯ. ನಿದ್ರೆ ಕೊರತೆಯಿಂದ ದೇಹ ಮತ್ತು ಮನಸ್ಸು ಎರಡೂ ದಣಿವಿಗೆ ಒಳಗಾಗುತ್ತವೆ. ನಕಾರಾತ್ಮಕ ಚಿಂತನೆಗಳಿಂದ ದೂರವಿದ್ದು, ಹಿತಕರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಉತ್ತಮ. ಅದರೊಂದಿಗೆ, ಮಾನಸಿಕ ಆರೋಗ್ಯವನ್ನು ನಿರ್ಲಕ್ಷಿಸುವುದು ದೊಡ್ಡ ತಪ್ಪು. ಹೆಚ್ಚು ಯೋಚನೆ ದೇಹದ ಮೇಲೂ ಒತ್ತಡ ತರುತ್ತದೆ. ಆದ್ದರಿಂದ ಸಮಯಕ್ಕೆ ಸರಿಯಾಗಿ ತಜ್ಞರ ಸಲಹೆ ಪಡೆಯುವುದು ಮತ್ತು ಮನಸ್ಸನ್ನು ಸಮತೋಲನದಲ್ಲಿಡುವುದು ಅಗತ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *