ಕಿಚ್ಚ ಸುದೀಪ್ ಅವರು (Sudeep) ಯಾವುದೇ ಸುದ್ದಿಗೋಷ್ಠಿಗೆ ತೆರಳಿದರೂ ಅದಕ್ಕೊಂದು ವಿಶೇಷ ಕಳೆ ಬರುತ್ತದೆ. ಅವರು ಆಡುವ ಖಡಕ್ ಮಾತುಗಳನ್ನು ಕೇಳಲು ಫ್ಯಾನ್ಸ್ ಕಾದಿರುತ್ತಾರೆ. ಈಗ ಅವರು ‘ಕೆಡಿ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಭಾಗಿ ಆಗಿದ್ದರು. ಈ ವೇಳೆ ಹಲವು ವಿಷಯಗಳ ಬಗ್ಗೆ ಅವರು ಮಾತನಾಡಿದ್ದಾರೆ. ಈ ವೇಳೆ ತಮ್ಮನ್ನು ಮುಗಿಸುವ ಆಲೋಚನೆ ಮಾಡಬೇಡಿ ಎಂದು ಗಂಭೀರ ಹಾಗೂ ಹಾಸ್ಯ ಮಿಶ್ರಣದಲ್ಲಿ ಹೇಳಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ಕಿಚ್ಚ ಸುದೀಪ್ ಅವರು ‘ಕೆಡಿ’ ಸಿನಿಮಾದಲ್ಲಿ ‘ಕಾಲ ಭೈರವ’ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ರಿಲೀಸ್ಗೂ ಮೊದಲು ಸುದೀಪ್ ಅವರನ್ನು ವೇದಿಕೆ ಮೇಲೆ ತರೋದಾಗಿ ಈ ಮೊದಲು ಪ್ರೇಮ್ ಹೇಳಿದ್ದರು. ಅದರಂತೆ, ಸುದೀಪ್ ಅವರನ್ನು ವೇದಿಕೆಗೆ ಕರೆತರುವ ಕೆಲಸ ಆಗಿದೆ. ಆಗ ಅವರಿಗೆ ವಿವಿಧ ರೀತಿಯ ಪ್ರಶ್ನೆಗಳು ಎದುರಾಗಿವೆ.
ಪತ್ರಕರ್ತರೊಬ್ಬರು ‘ಕೊನೆಯ ಪ್ರಶ್ನೆ, ಮುಗಿಸಿಬಿಡ್ತೀನಿ’ ಎಂದು ಹೇಳಿದರು. ಆಗ ಸುದೀಪ್ ಅವರು ‘ಯಾರನ್ನು ಮುಗಿಸುತ್ತೀರಾ? ನನ್ನನ್ನು ಮುಗಿಸ್ತೀನಿ ಅಂತ ಕನಸಲ್ಲೂ ಅಂದ್ಕೋಬೇಡಿ ’ ಎಂದು ಹೇಳಿದರು. ಆಗ ಅಲ್ಲಿದ್ದವರು ಇದಕ್ಕೆ ನಕ್ಕಿದ್ದಾರೆ. ಸುದೀಪ್ ಅವರು ಪ್ರತಿ ಸುದ್ದಿಗೋಷ್ಠಿಯಲ್ಲೂ ಈ ರೀತಿಯಲ್ಲಿ ಫನ್ ಆಗಿ ಮಾತನಾಡುತ್ತಾ ಇರುತ್ತಾರೆ. ಈ ವಿಡಿಯೋಗಳು ವೈರಲ್ ಆಗುತ್ತವೆ. ಬಿಗ್ ಬಾಸ್ ವೇದಿಕೆಯಲ್ಲೂ ಅವರು ಈ ರೀತಿ ಮಾತುಗಳನ್ನು ಆಡುತ್ತಾರೆ. ಇದಕ್ಕೆ ದೊಡ್ಡ ಅಭಿಮಾನಿ ಬಳಗ ಇದೆ.
ಇದನ್ನೂ ಓದಿ: ಕೆಡಿ ಸಿನಿಮಾ ಸುದ್ದಿಗೋಷ್ಠಿ: ಎಷ್ಟೇ ಕೇಳಿದರೂ ಆ ವಿಷಯ ಬಾಯಿ ಬಿಡಲಿಲ್ಲ ಕಿಚ್ಚ ಸುದೀಪ್
‘ಕೆಡಿ’ ಸಿನಿಮಾ ಏಪ್ರಿಲ್ 30ರಂದು ರಿಲೀಸ್ ಆಗುತ್ತಿದೆ. ಮೇ 1ರಂದು ಕಾರ್ಮಿಕ ದಿನಾಚರಣೆ ಪ್ರಯುಕ್ತ ಸರ್ಕಾರಿ ರಜೆ ಇದೆ. ಹೀಗಾಗಿ, ಈ ದಿನ ಸಿನಿಮಾಗೆ ಸಹಕಾರಿ ಆಗಲಿದೆ. ಈ ಚಿತ್ರದಲ್ಲಿ ಧ್ರುವ ಸರ್ಜಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರೀಷ್ಮಾ ನಾಣಯ್ಯ, ಶಿಲ್ಪಾ ಶೆಟ್ಟಿ, ಕಿಚ್ಚ ಸುದೀಪ್, ಸಂಜಯ್ ದತ್, ರವಿಚಂದ್ರನ್, ರಮೇಶ್ ಅರವಿಂದ್ ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾ ವಿವಾದಗಳ ಮೂಲಕ ಸುದ್ದಿ ಆಗಿದೆ. ಪ್ರೇಮ್ ನಿರ್ದೇಶನದ ಈ ಚಿತ್ರಕ್ಕೆ, ಕೆವಿಎನ್ ಸಂಸ್ಥೆ ಬಂಡವಾಳ ಹೂಡಿದೆ. ಈ ಚಿತ್ರದ ಹಾಡು ಹಾಗೂ ಟ್ರೇಲರ್ ವಿವಾದಕ್ಕೆ ಕಾರಣ ಆಗಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.