ಬೆಂಗಳೂರು, ಏಪ್ರಿಲ್ 28: ಬೆಂಗಳೂರಿನ ನಂದಿನಿ ಲೇಔಟ್ನಲ್ಲಿರುವ ರಾಜಕುಮಾರ್ ಸ್ಮಾರಕದ ಸಮೀಪದ ಬ್ಯಾನರ್ ಗೋದಾಮಿನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಸುಮಾರು 50 ಯುವತಿಯರು ಅಪಾಯದಿಂದ ಪಾರಾಗಿದ್ದು, ಭಾರಿ ದುರಂತ ತಪ್ಪಿದೆ. ಬೆಂಕಿ ಗೋದಾಮಿಗೆ ಹತ್ತಿಕೊಂಡು ಪಕ್ಕದಲ್ಲಿದ್ದ ನಾಲ್ಕು ಅಂತಸ್ತಿನ ಪಿಜಿ ಕಟ್ಟಡಕ್ಕೂ ವ್ಯಾಪಿಸಲು ಶುರುವಾಗಿತ್ತು. ಬೆಂಕಿ ಹೊತ್ತಿಕೊಳ್ಳುವುದನ್ನು ಗಮನಿಸಿದ ತಕ್ಷಣ, ಪಿಜಿಯಲ್ಲಿ ವಾಸವಿದ್ದ ಯುವತಿಯರು ಪ್ರಾಣದ ಹಂಗು ತೊರೆದು ಕಟ್ಟಡದಿಂದ ಹೊರಗೆ ಜಿಗಿದು ಓಡಿದ್ದಾರೆ. ಕೆಲವರು ಜೀವ ಉಳಿಸಿಕೊಳ್ಳಲು ಜಿಗಿದು ಪಾರಾಗಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಯುವತಿಯರು ಚೀರಾಡುತ್ತಾ ಕಟ್ಟಡದಿಂದ ಹೊರಬರುವುದು ಸ್ಪಷ್ಟವಾಗಿ ದಾಖಲಾಗಿದೆ ಸಿಸಿಟಿವಿ ದೃಶ್ಯಾವಳಿ ಸಹಿತ ವರದಿ ಇಲ್ಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ