ಧಾರ್ಮಿಕ ಹಬ್ಬ, ಹರಿದಿನಗಳನ್ನು ಆಚರಿಸುವಂತೆ ಪ್ರತಿ ತಿಂಗಳು ಸಹ ಒಂದಷ್ಟು ಪ್ರಮುಖ ರಾಷ್ಟ್ರೀಯ ಅಂತಾರಾಷ್ಟ್ರೀಯ ದಿನಾಚರಣೆಗಳನ್ನು ಆಚರಿಸಲಾಗುತ್ತದೆ. ಒಂದೊಂದು ಉದ್ದೇಶ, ಧ್ಯೇಯವಾಕ್ಯಗಳನ್ನು ಇಟ್ಟುಕೊಂಡು ಜನ ಜಾಗೃತಿಯನ್ನು ಮೂಡಿಸುವ ಸಲುವಾಗಿ ಈ ದಿನಾಚರಣೆಗಳನ್ನು ಆಚರಿಸಲಾಗುತ್ತದೆ. ಇನ್ನೇನೂ ವರ್ಷದ 5 ನೇ ತಿಂಗಳಾದ ಮೇ (May) ಆರಂಭವಾಗುತ್ತಿದ್ದು, ಈ ತಿಂಗಳಲ್ಲಿ ಯಾವೆಲ್ಲಾ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತದೆ ಎಂಬುದನ್ನು ಸಂಕ್ಷಿಪ್ತ ಮಾಹಿತಿಯನ್ನು ತಿಳಿದುಕೊಳ್ಳಿ.
ಮೇ ತಿಂಗಳಲ್ಲಿನ ರಾಷ್ಟ್ರೀಯ ಅಂತಾರಾಷ್ಟ್ರೀಯ ಕಾರ್ಯಕ್ರಮಗಳು:
- ಮೇ 1 – ಕಾರ್ಮಿಕರ ದಿನ
- ಮೇ 1 – ಬುದ್ಧ ಪೂರ್ಣಿಮೆ
- ಮೇ 3 – ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ
- ಮೇ 3 – ವಿಶ್ವ ನಗು ದಿನ
- ಮೇ 4 – ಅಂತರರಾಷ್ಟ್ರೀಯ ಅಗ್ನಿಶಾಮಕ ದಳದವರ ದಿನ
- ಮೇ 5 – ವಿಶ್ವ ಆಸ್ತಮಾ ದಿನ
- ಮೇ 7 – ವಿಶ್ವ ಅಥ್ಲೆಟಿಕ್ಸ್ ದಿನ
- ಮೇ 8 – ವಿಶ್ವ ರೆಡ್ ಕ್ರಾಸ್ ದಿನ
- ಮೇ 8 – ವಿಶ್ವ ಥಲಸ್ಸೆಮಿಯಾ ದಿನ
- ಮೇ 10 – ತಾಯಂದಿರ ದಿನ
- ಮೇ 11 – ರಾಷ್ಟ್ರೀಯ ತಂತ್ರಜ್ಞಾನ ದಿನ
- ಮೇ 12 – ಅಂತರರಾಷ್ಟ್ರೀಯ ದಾದಿಯರ ದಿನ
- ಮೇ 15 – ಅಂತರರಾಷ್ಟ್ರೀಯ ಕುಟುಂಬಗಳ ದಿನ
- ಮೇ 17 – ವಿಶ್ವ ಅಧಿಕ ರಕ್ತದೊತ್ತಡ ದಿನ
- ಮೇ 17 – ವಿಶ್ವ ದೂರಸಂಪರ್ಕ ದಿನ
- ಮೇ 17 – ಸಶಸ್ತ್ರ ಪಡೆಗಳ ದಿನ
- ಮೇ 18 – ವಿಶ್ವ ಏಡ್ಸ್ ಲಸಿಕೆ ದಿನ
- ಮೇ 18 – ಅಂತರರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನ
- ಮೇ 21 – ಅಂತರರಾಷ್ಟ್ರೀಯ ಚಹಾ ದಿನ
- ಮೇ 21 – ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ದಿನ
- ಮೇ 22 – ಅಂತರರಾಷ್ಟ್ರೀಯ ಜೈವಿಕ ವೈವಿಧ್ಯತೆ ದಿನ
- ಮೇ 24 – ರಾಷ್ಟ್ರೀಯ ಸಹೋದರರ ದಿನ
- ಮೇ 26 – ರಾಷ್ಟ್ರೀಯ ಸ್ಮಾರಕ ದಿನ
- ಮೇ 28 – ಮುಟ್ಟಿನ ನೈರ್ಮಲ್ಯ ದಿನ
- ಮೇ 31 – ವಿಶ್ವ ತಂಬಾಕು ರಹಿತ ದಿನ
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ