Headlines

International Dance Day 2026: ಅಂತಾರಾಷ್ಟ್ರೀಯ ನೃತ್ಯ ದಿನದ ಆಚರಣೆ ಹೇಗೆ ಪ್ರಾರಂಭವಾಯಿತು? – Kannada News | International Dance Day 2026: How did the celebration of International Dance Day begin?

ಅಂತಾರಾಷ್ಟ್ರೀಯ ನೃತ್ಯ ದಿನImage Credit source: Getty Images

ನೃತ್ಯವು (Dance) ಒಬ್ಬ ವ್ಯಕ್ತಿಯು ತನ್ನ ಆಂತರಿಕತೆಯನ್ನು ಅನ್ವೇಷಿಸಲು ಅನುವು ಮಾಡಿಕೊಡುವ, ಭಾವನೆಯನ್ನು ವ್ಯಕ್ತಪಡಿಸುವ ಒಂದು ಕಲಾ ಪ್ರಕಾರವಾಗಿದೆ. ಈ ನೃತ್ಯ ಕಲೆ ಮನೋರಂಜನೆಯನ್ನು ನೀಡುವುದು, ಭಾವನೆಯನ್ನು ವ್ಯಕ್ತಪಡಿಸುವುದು, ಸಂಸ್ಕೃತಿಯನ್ನು ಪ್ರತಿನಿಧಿಸುವುದು ಮಾತ್ರವಲ್ಲದೆ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಉತ್ತೇಜಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ. ನೃತ್ಯದ ವೈವಿಧ್ಯತೆಯನ್ನು ಗುರುತಿಸಲು ಮತ್ತು ಈ ಕಲಾ ಪ್ರಕಾರವನ್ನು ಗೌರವಿಸಲು ಪ್ರತಿವರ್ಷ ಏಪ್ರಿಲ್‌ 29 ರಂದು ಅಂತರರಾಷ್ಟ್ರೀಯ ನೃತ್ಯ ದಿನವನ್ನು ಆಚರಿಸಲಾಗುತ್ತದೆ.  ಈ ದಿನದ ಆಚರಣೆ ಹೇಗೆ ಪ್ರಾರಂಭವಾಯಿತು, ಇದರ ಮಹತ್ವವೇನು ಎಂಬುದನ್ನು ತಿಳಿಯೋಣ ಬನ್ನಿ.

ಅಂತಾರಾಷ್ಟ್ರೀಯ ನೃತ್ಯ ದಿನದ ಇತಿಹಾಸವೇನು?

ಅಂತಾರಾಷ್ಟ್ರೀಯ ನೃತ್ಯ ದಿನಾಚರಣೆಯನ್ನು 1982 ರಲ್ಲಿ ಅಂತಾರಾಷ್ಟ್ರೀಯ ರಂಗಭೂಮಿ ಸಂಸ್ಥೆಯ (ಐಟಿಐ) ಅಂತಾರಾಷ್ಟ್ರೀಯ ನೃತ್ಯ ಸಮಿತಿಯು ಪ್ರಾರಂಭಿಸಿತು. ಐಟಿಐ ಒಂದು ಸರ್ಕಾರೇತರ ಸಂಸ್ಥೆಯಾಗಿದ್ದು, ಇದು ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೋ)ಯ ಭಾಗವಾಗಿದೆ. ಅಂತಾರಾಷ್ಟ್ರೀಯ ನೃತ್ಯ ದಿನವನ್ನು ನೃತ್ಯ ಮಾಂತ್ರಿಕ ಜೀನ್ ಜಾರ್ಜಸ್ ನೊವೆರೆ ಅವರಿಗಾಗಿ ಸಮರ್ಪಿಸಲಾಗಿದೆ. ಜಾರ್ಜಸ್ ನೊವೆರೆ ಒಬ್ಬ ಪ್ರಸಿದ್ಧ ಬ್ಯಾಲೆ ಮಾಸ್ಟರ್ ಆಗಿದ್ದರು, ಅವರನ್ನು ಬ್ಯಾಲೆಯ ಪಿತಾಮಹ ಎಂದೂ ಕರೆಯುತ್ತಾರೆ. ಈ ಡ್ಯಾನ್ಸ್‌ ಮಾಂತ್ರಿಕನ ಜನ್ಮ ದಿನದ ಸವಿ ನೆನಪಿಗಾಗಿ 1982 ರಲ್ಲಿ, ಐಟಿಐನ ನೃತ್ಯ ಸಮಿತಿಯು ಜಾರ್ಜಸ್ ನೊವೆರ್ರೆ ಅವರ ಜನ್ಮದಿನವಾದ ಏಪ್ರಿಲ್ 29 ರಂದು ಅಂತಾರಾಷ್ಟ್ರೀಯ ನೃತ್ಯ ದಿನವನ್ನು ಆಚರಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಿತು. ಆ ಬಳಿಕ ಪ್ರತಿ ವರ್ಷ ಈ ವಿಶೇಷ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.

ಇದನ್ನೂ ಓದಿ: ಮೇ ತಿಂಗಳ ಪ್ರಮುಖ ರಾಷ್ಟ್ರೀಯ-ಅಂತಾರಾಷ್ಟ್ರೀಯ ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ

ಅಂತಾರಾಷ್ಟ್ರೀಯ ನೃತ್ಯ ದಿನದ ಮಹತ್ವವೇನು?

  • ಅಂತಾರಾಷ್ಟ್ರೀಯ ನೃತ್ಯ ದಿನವು ನೃತ್ಯ ಕಲೆಯ ಮಹತ್ವವನ್ನು ಆಚರಿಸುವ ಮತ್ತು ಬೆಂಬಲಿಸುವ ಮಹತ್ವದ ದಿನವಾಗಿದೆ. ಈ ದಿನವು ಕಲೆ ಮತ್ತು ಸಂಸ್ಕೃತಿಯನ್ನು ಉತ್ತೇಜಿಸುತ್ತದೆ. ಅಲ್ಲದೆ  ಇದು ಹಲವಾರು ಪ್ರಕಾರದ ನೃತ್ಯ ಪ್ರಕಾರಗಳು ಹಾಗೂ ನೃತ್ಯ ಕಲೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದೆ.
  • ಪ್ರತಿ ವರ್ಷ ಏಪ್ರಿಲ್ 29 ರಂದು, ನೃತ್ಯ ಕಲೆಯನ್ನು ಬೆಂಬಲಿಸಲು ಮತ್ತು ಉತ್ತೇಜಿಸಲು ಪ್ರಪಂಚದಾದ್ಯಂತ ಅಂತಾರಾಷ್ಟ್ರೀಯ ನೃತ್ಯ ದಿನವನ್ನು ಆಚರಿಸಲಾಗುತ್ತದೆ.
  • ನೃತ್ಯ ಕಲೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಜನರಿಗೆ ನೃತ್ಯ ಕಲೆಯ ಮಹತ್ವವನ್ನು ಅರ್ಥಮಾಡಿಕೊಳ್ಳಲು ಈ ದಿನವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಈ ದಿನದಂದು, ನೃತ್ಯ ಕಲೆಯನ್ನು ವೈಭವೀಕರಿಸುವ ವಿವಿಧ ನೃತ್ಯ ಸಂಬಂಧಿತ ಕಾರ್ಯಕ್ರಮಗಳು ಮತ್ತು ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಅಷ್ಟೇ ಅಲ್ಲದೆ ನೃತ್ಯಗಾರರನ್ನು ಗೌರವಿಸುವುದ ಜೊತೆಗೆ ನೃತ್ಯದ ಪ್ರಯೋಜನಗಳ ಬಗ್ಗೆ ಜನರಿಗೆ ತಿಳಿಸಲು ಈ ವಿಶೇಷ ದಿನವನ್ನು ಆಚರಿಸಲಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *