Headlines

MI vs SRH Playing XI: SRH ವಿರುದ್ಧ ಟಾಸ್ ಗೆದ್ದ ಮುಂಬೈ ತಂಡದಲ್ಲಿ 4 ಬದಲಾವಣೆ – Kannada News | MI vs SRH Playing XI Mumbai Indians vs Sunrisers Hyderabad Today IPL 2026 match Confirmed playing 11 details with name in Kannada

ಐಪಿಎಲ್ 2026 (IPL 2026) ರ 41 ನೇ ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ (MI vs SRH) ನಡುವೆ ನಡೆಯುತ್ತಿದೆ. ಇದು ಮುಂಬೈಗೆ ಎಂಟನೇ ಪಂದ್ಯ ಮತ್ತು ಹೈದರಾಬಾದ್‌ಗೆ ಒಂಬತ್ತನೇ ಪಂದ್ಯವಾಗಿದೆ. ಎರಡೂ ತಂಡಗಳು ವಾಂಖೆಡೆ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ. ಮುಂಬೈ ಇದುವರೆಗೆ 7 ಪಂದ್ಯಗಳನ್ನಾಡಿದ್ದು, ಕೇವಲ 2 ಪಂದ್ಯಗಳನ್ನು ಗೆದ್ದಿದೆ. ಅಲ್ಲದೆ ಮುಂಬೈ ತವರು ನೆಲದಲ್ಲಿ ಸತತ 3 ಪಂದ್ಯಗಳನ್ನು ಸೋತಿದೆ. ಆದ್ದರಿಂದ, ಮುಂಬೈ ತವರು ನೆಲದಲ್ಲಿ ಸೋಲಿನ ಸರಣಿಯನ್ನು ಮುರಿಯುವ ಸವಾಲನ್ನು ಎದುರಿಸುತ್ತಿದೆ. ಮತ್ತೊಂದೆಡೆ, ಹೈದರಾಬಾದ್ ತನ್ನ ಗೆಲುವಿನ ಸರಣಿಯನ್ನು ಮುಂದುವರೆಸಲು ಪ್ರಯತ್ನಿಸಲಿದೆ.

ಟಾಸ್ ಗೆದ್ದ ಮುಂಬೈ

ಈ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಸನ್​ರೈಸರ್ಸ್​ ಹೈದರಾಬಾದ್ ಬೌಲಿಂಗ್ ಮಾಡಲಿದೆ. ಟಾಸ್ ಜೊತೆಗೆ ಉಭಯ ತಂಡಗಳ ಆಡುವ ಹನ್ನೊಂದರ ಬಳಗವೂ ಹೊರಬಿದ್ದಿದೆ. ಅದರಂತೆ ಉಭಯ ತಂಡಗಳಲ್ಲಿ ಬದಲಾವಣೆಗಳಾಗಿವೆ. ಪ್ಲೇಯಿಂಗ್ 11 ಬಗ್ಗೆ ಮಾತನಾಡಿದ ನಾಯಕ ಹಾರ್ದಿಕ್ ಪಾಂಡ್ಯ ಗಾಯದ ಕಾರಣ ಕ್ವಿಂಟನ್ ಡಿ ಕಾಕ್ ಆಡುತ್ತಿಲ್ಲ. ಅವರ ಬದಲಿಗೆ ರಯಾನ್ ರಿಕಲ್ಟನ್ ಆಡಲಿದ್ದಾರೆ ಎಂದರು. ಹಾಗೆಯೇ ರಾಬಿನ್ ಮಿಂಜ್​ಗೂ ತಂಡದಲ್ಲಿ ಸ್ಥಾನ ನೀಡಲಾಗಿದೆ ಎಂದರು. ಇತ್ತ ಸನ್​ರೈಸರ್ಸ್​ ತಂಡದಲ್ಲೂ 1 ಬದಲಾವಣೆ ಮಾಡಲಾಗಿದೆ.

ಮುಖಾಮುಖಿ ದಾಖಲೆ

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಇದುವರೆಗೆ 34 ಪಂದ್ಯಗಳನ್ನು ಆಡಿವೆ. ಈ ಪಂದ್ಯಗಳಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಸ್ವಲ್ಪ ಮುನ್ನಡೆ ಇದೆ. ಸನ್‌ರೈಸರ್ಸ್ ಹೈದರಾಬಾದ್ 19 ಪಂದ್ಯಗಳನ್ನು ಗೆದ್ದಿದ್ದರೆ, ಮುಂಬೈ ಇಂಡಿಯನ್ಸ್ 15 ಪಂದ್ಯಗಳನ್ನು ಗೆದ್ದಿದೆ.

ಉಭಯ ತಂಡಗಳ ಪ್ಲೇಯಿಂಗ್ 11

ಮುಂಬೈ ಇಂಡಿಯನ್ಸ್: ರಯಾನ್ ರಿಕಲ್ಟನ್ (ವಿಕೆಟ್ ಕೀಪರ್), ವಿಲ್ ಜ್ಯಾಕ್ಸ್, ನಮನ್ ಧೀರ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ರಾಬಿನ್ ಮಿಂಜ್, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ, ಎಎಮ್ ಗಜನ್ಫರ್ ಮತ್ತು ಅಶ್ವನಿ ಕುಮಾರ್.

ಇಂಪ್ಯಾಕ್ಟ್ ಪ್ಲೇಯರ್ಸ್​: ಮಯಾಂಕ್ ರಾವತ್, ರಘು ಶರ್ಮಾ, ಶಾರ್ದೂಲ್ ಠಾಕೂರ್, ಕ್ರಿಶ್ ಭಗತ್ ಮತ್ತು ರಾಜ್ ಬಾವಾ.

MI vs SRH IPL 2026 Live Score: ಟಾಸ್ ಗೆದ್ದ ಮುಂಬೈ ಬ್ಯಾಟಿಂಗ್ ಆಯ್ಕೆ

ಸನ್​ರೈಸರ್ಸ್​ ಹೈದರಾಬಾದ್: ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಹೆನ್ರಿಚ್ ಕ್ಲಾಸೆನ್, ಸಲೀಲ್ ಅರೋರಾ, ನಿತೀಶ್ ಕುಮಾರ್ ರೆಡ್ಡಿ, ಪ್ಯಾಟ್ ಕಮ್ಮಿನ್ಸ್ (ನಾಯಕ), ಹರ್ಷ್ ದುಬೆ, ಸಾಕಿಬ್ ಹುಸೇನ್, ಪ್ರಫುಲ್ ಹಿಂಗೆ ಮತ್ತು ಇಶಾನ್ ಮಾಲಿಂಗ.

ಇಂಪ್ಯಾಕ್ಟ್ ಪ್ಲೇಯರ್ಸ್​: ರವಿಚಂದ್ರನ್ ಸ್ಮರಣ್, ಅನಿಕೇತ್ ವರ್ಮಾ, ಲಿಯಾಮ್ ಲಿವಿಂಗ್ಸ್ಟೋನ್, ಶಿವಂಗ್ ಕುಮಾರ್ ಮತ್ತು ಹರ್ಷಲ್ ಪಟೇಲ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:21 pm, Wed, 29 April 26

Source link

Leave a Reply

Your email address will not be published. Required fields are marked *