ಪ್ರಾತಿನಿಧಿಕ ಚಿತ್ರ (ಎಐ ಚಿತ್ರ)Image Credit source: tv9 kannada
ಬೆಂಗಳೂರು, ಏಪ್ರಿಲ್ 30: ಬುಧವಾರ ಸಂಜೆ 1 ಗಂಟೆ ಅಬ್ಬರಿಸಿದ ಬಿರುಗಾಳಿ, ಆಲಿಕಲ್ಲು ಸಹಿತ ಮಳೆ (Rain) ಬೆಂಗಳೂರಿನಲ್ಲಿ ಸಾಲು ಸಾಲು ಅವಘಡಗಳನ್ನು ಸೃಷ್ಟಿಸಿದೆ. ಶಿವಾಜಿನಗರದ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿದು ಒಂದು ಮಗು ಸೇರಿ 7 ಮಂದಿ ಉಸಿರು ಚೆಲ್ಲಿದ್ದಾರೆ. ವ್ಯಾಪಾರ ಮಾಡ್ತಿದ್ದವರು, ಖರೀದಿ ಮಾಡಲು ಬಂದಿದ್ದವರು ಸಾವಿನ ಮನೆ ಸೇರಿದ್ದಾರೆ. ಈ ಬೆನ್ನಲ್ಲೇ ಇನ್ಮುಂದೆ ಫುಟ್ಪಾತ್ನಲ್ಲಿ ಯಾರೂ ವ್ಯಾಪಾರ ಮಾಡುವಂತಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar) ಖಡಕ್ ಸೂಚನೆ ನೀಡಿದ್ದಾರೆ.
ನಗರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಹಲವೆಡೆ ಅವಾಂತರಗಳು ಸೃಷ್ಟಿ ಹಿನ್ನೆಲೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ರಸ್ತೆ ಮೇಲೆ ಬಿದ್ದಿರುವ ಮರದ ಕೊಂಬೆ ತೆರವು ಮಾಡಲು ಪೊಲೀಸರಿಗೆ ಈಗಾಗಲೇ ನಿರ್ದೇಶನವನ್ನೂ ನೀಡಿದ್ದೇನೆ. ಈಗಾಗಲೇ ನಗರದಾದ್ಯಂತ ಇರುವ ಸಮಸ್ಯೆ ಪಟ್ಟಿ ಮಾಡಲಾಗಿದೆ. ಎಲ್ಲಾ ಮಾಹಿತಿಯನ್ನ ಈಗ ಕಂಟ್ರೋಲ್ ರೂಂನಲ್ಲಿ ಕಲೆ ಹಾಕಿದ್ದಾರೆ. ಗೋಡೆ ಕುಸಿತ ಕೇಸ್ನಲ್ಲಿ ಅಧಿಕಾರಿ ನಿರ್ಲಕ್ಷವೂ ಇದೆ ಎನ್ನಲ್ಲ. ಇನ್ಮುಂದೆ ಫುಟ್ಪಾತ್ನಲ್ಲಿ ಯಾರೂ ವ್ಯಾಪಾರ ಮಾಡುವಂತಿಲ್ಲ ಸೂಚಿಸಿದ್ದೇನೆ ಎಂದರು.
ಇದನ್ನೂ ಓದಿ: ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿತ: ಸ್ಥಳ ಪರಿಶೀಲನೆ ಬಳಿಕ ಲೋಕಾಯುಕ್ತ ಶಾಕಿಂಗ್ ಹೇಳಿಕೆ
ಗೋಡೆ ಕುಸಿತ ಕೇಸ್ನಲ್ಲಿ ಅಧಿಕಾರಿ ನಿರ್ಲಕ್ಷವೂ ಇದೆ ಎನ್ನಲ್ಲ, ಆದರೆ ಇನ್ಮುಂದೆ ಇಂತಹ ಅಪಾಯಕಾರಿ ಕಾಂಪೌಂಡ್ ಗೋಡೆಗಳನ್ನು ಮೊದಲೇ ಗುರುತಿಸಲು ಸೂಚಿಸಿದ್ದೇನೆ. ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಫುಟ್ಪಾತ್ಗಳ ಮೇಲೆ ಇನ್ಮುಂದೆ ಯಾವುದೇ ವ್ಯಾಪಾರವನ್ನು ನಡೆಸುವಂತಿಲ್ಲ. ಮುಖ್ಯವಾಗಿ ವಾಜಪೇಯಿ ಆಸ್ಪತ್ರೆ ಪಕ್ಕದಂತಹ ಸ್ಥಳಗಳಲ್ಲಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಮಳೆ ಹಾನಿ ಸಂಬಂಧ ಸಿಎಂ ಸಭೆ ಕರೆದಿದ್ದಾರೆ. ನಾನು ಸಹ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. ಬೆಂಗಳೂರು ನಗರದ ಎಲ್ಲೆಲ್ಲಿ ರಸ್ತೆಗೆ ಅಡ್ಡ ಇರುವ ಕೊಂಬೆಗಳ ಬಗ್ಗೆ ಪಟ್ಟಿ ಮಾಡಲು ಸೂಚಿಸಿದ್ದೇನೆ. ಒಣಗಿರುವ ಮರಗಳು ಬಿದ್ದು ಸಂಚಾರಕ್ಕೆ ಸಮಸ್ಯೆ ಆಗಿದೆ. ಹೀಗಾಗಿ ಕೊಂಬೆ ತೆರವು ಮಾಡಿ ಸಂಚಾರಕ್ಕೆ ಅನುವು ಮಾಡಲು ಹೇಳಿದ್ದೇನೆ. ನೀರು ಬ್ಲಾಕ್ ಆಗಿದ್ರೆ ಅದನ್ನು ಕ್ಲೀನ್ ಮಾಡೋಕೆ ಹೇಳಿದ್ದೇನೆ ಎಂದಿದ್ದಾರೆ.
ಮಳೆ ಜಾಸ್ತಿ ಬರಲಿ ಅಂತಾ ನಾನು ದೇವರಲ್ಲಿ ಬೇಡಿಕೊಳ್ಳುತ್ತೇನೆ
ಈ ರೀತಿಯ ಗೋಡೆಗಳನ್ನು ಗುರುತು ಮಾಡಲು ತಿಳಿಸಿದ್ದೇನೆ. ಮಳೆ ಜಾಸ್ತಿ ಬಂದಾಗ ನಾವು ಸಿದ್ಧತೆಯನ್ನು ಮಾಡಿಕೊಳ್ಳಬೇಕು. ಮಳೆ ಜಾಸ್ತಿ ಬರಲಿ ಅಂತಾ ನಾನು ದೇವರಲ್ಲಿ ಬೇಡಿಕೊಳ್ಳುತ್ತೇನೆ. ಮಳೆಯ ಪ್ರಮಾಣ ಕುಸಿಯಲಿದೆ ಅನ್ನೋ ವರದಿಗಳು ಬಂದಿವೆ. ಮಳೆ ಕಡಿಮೆಯಾದರೆ ವಿದ್ಯುತ್ಗೂ ಸಮಸ್ಯೆ ಉಂಟಾಗಲಿದೆ. ಡ್ಯಾಂಗಳಿಗೂ ಸಮಸ್ಯೆ ಆಗುತ್ತದೆ. ಶರಾವತಿಯಲ್ಲಿ ಈಗಾಗಲೇ ಆ ರೀತಿ ಕಾಣಿಸುತ್ತಿದೆ. ಮೇ 3ರಂದು ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡುತ್ತಿದ್ದೇನೆ ಎಂದು ತಿಳಿಸಿದರು.
ನಾಳೆ ಡಿಕೆ ಶಿವಕುಮಾರ್ ಸಿಟಿ ರೌಂಡ್ಸ್
ಇನ್ನ ನಗರದ ಪರಿಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸಲು ಡಿಸಿಎಂ ಡಿ.ಕೆ. ಶಿವಕುಮಾರ್ ನಾಳೆ ಬೆಂಗಳೂರು ಸಿಟಿ ರೌಂಡ್ಸ್ ನಡೆಸಲಿದ್ದಾರೆ. ನಾಳೆ ಮಧ್ಯಾಹ್ನ ಸಿಟಿ ರೌಂಡ್ಸ್ ಹಾಕಲಿರುವ ಡಿಕೆ ಶಿವಕುಮಾರ್, ಮಳೆಯಿಂದಾದ ಸಮಸ್ಯೆ, ಅವಾಂತರಗಳನ್ನು ವೀಕ್ಷಿಸಲಿದ್ದಾರೆ.
ವರದಿ: ಈರಣ್ಣ ಬಸವ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.