ತಮಿಳು ನಟ ದಳಪತಿ ವಿಜಯ್ ಮತ್ತು ತ್ರಿಷಾ ಕೃಷ್ಣನ್ ಅವರ ಸ್ನೇಹದ ವಿಷಯ ಆಗಾಗ ಚರ್ಚೆ ಆಗುಇತ್ತಲೇ ಇರುತ್ತದೆ. ಕಳೆದ ಹಲವು ತಿಂಗಳುಗಳಿಂದ ಇವರಿಬ್ಬರ ನಡುವೆ ಪ್ರೇಮ ಸಂಬಂಧವಿದೆ ಎಂಬ ವದಂತಿಗಳು ಹರಿದಾಡುತ್ತಿದ್ದವು. ಇದೇ ಸಂದರ್ಭದಲ್ಲಿ ವಿಜಯ್ ಪತ್ನಿ ಸಂಗೀತಾ, ಪತಿಗೆ ನಟಿಯ ಜೊತೆ ಅಕ್ರಮ ಸಂಬಂಧ ಇದೆ ಎಂದು ಆರೋಪಿಸಿದ್ದು ಮತ್ತಷ್ಟು ಚರ್ಚೆಯನ್ನು ಹುಟ್ಟುಹಾಕಿತು. ಈಗ ನಟಿ ತ್ರಿಷಾ ಅವರ ಕಾರಿನಲ್ಲಿ ಕಾಣಿಸಿಕೊಂಡ ಒಂದು ಕ್ರಾಸ್ ಚಿಹ್ನೆ ಚರ್ಚೆಗೆ ಕಾರಣ ಆಗಿದೆ. ಇದು ಚರ್ಚೆ ಮಾಡುವ ವಿಷಯವೇ ಅಲ್ಲ ಎಂದು ಅನೇಕರು ಹೇಳಿದ್ದಾರೆ.
ಇತ್ತೀಚೆಗೆ ತಮಿಳುನಾಡು ಚುನಾವಣೆ ನಡೆದಿದೆ. ಮತದಾನ ಮಾಡಿದ ತ್ರಿಷಾ ಅವರು, ಜನರ ಬಳಿಯೂ ಮತ ಹಾಕುವಂತೆ ಕೋರಿದರು. ಇದಕ್ಕಾಗಿ ಅವರು ತಮ್ಮ ಕಾರಿನಲ್ಲಿ ಕುಳಿತು, ಇಂಕ್ ಹಾಕಿರುವ ಬೆರಳನ್ನು ತೋರಿಸುತ್ತಿದ್ದರು. ಈ ಫೋಟೋದಲ್ಲಿ ತ್ರಿಷಾ ಅವರ ಕಾರಿನ ಮುಂಭಾಗದಲ್ಲಿ ಕ್ರೈಸ್ತ ಧರ್ಮದ ಸಂಕೇತವಾದ ‘ಕ್ರಾಸ್’ (Cross) ಇರುವುದು ಅಭಿಮಾನಿಗಳ ಕಣ್ಣಿಗೆ ಬಿದ್ದಿದೆ. ತ್ರಿಷಾ ಮೂಲತಃ ಹಿಂದೂ ಧರ್ಮದವರು. ಹೀಗಿರುವಾಗ, ಅವರ ಕಾರಲ್ಲಿ ಕ್ರಾಸ್ ಚಿಹ್ನೆ ಬರಲು ಹೇಗೆ ಸಾಧ್ಯ ಎಂಬುದು ಅನೇಕರ ಪ್ರಶ್ನೆ.
ದಳಪತಿ ವಿಜಯ್ ಅವರು ಕ್ರಿಶ್ಚಿಯನ್ ಧರ್ಮದವರಾಗಿದ್ದು, ತ್ರಿಷಾ ಅವರ ಕಾರಿನಲ್ಲಿ ಕ್ರಾಸ್ ಕಂಡಿದ್ದಕ್ಕೂ ವಿಜಯ್ ಅವರೊಂದಿಗಿನ ಇತ್ತೀಚಿನ ಒಡನಾಟಕ್ಕೂ ಸಂಬಂಧ ಕಲ್ಪಿಸಲಾಗುತ್ತಿದೆ. ಇತ್ತೀಚೆಗೆ ಇಬ್ಬರೂ ಒಟ್ಟಾಗಿ ಮದುವೆ ಸಮಾರಂಭವೊಂದಕ್ಕೆ ತೆರಳಿದ್ದ ಫೋಟೋಗಳು ವೈರಲ್ ಆಗಿದ್ದವು. ವಿಜಯ್ಗಾಗಿ ತ್ರಿಷಾ ಧರ್ಮ ಬದಲಿಸಿದ್ದಾರೆಯೇ ಅಥವಾ ಇಬ್ಬರೂ ಗುಟ್ಟಾಗಿ ಮದುವೆಯಾಗಲು ತಯಾರಿ ನಡೆಸುತ್ತಿದ್ದಾರೆಯೇ ಎಂಬ ಪ್ರಶ್ನೆಗಳು ಈಗ ಕಾಲಿವುಡ್ ಅಂಗಳದಲ್ಲಿ ಜೋರಾಗಿ ಕೇಳಿಬರುತ್ತಿವೆ.
ಇದನ್ನೂ ಓದಿ: ತಮಿಳುನಾಡು ಚುನಾವಣೆ: ಮತದಾನ ಮಾಡಿದ ತ್ರಿಷಾ, ವಿಡಿಯೋ ನೋಡಿ
ಆದರೆ, ತ್ರಿಷಾ ಅವರ ಕೆಲವು ಆಪ್ತ ಅಭಿಮಾನಿಗಳು ಇದನ್ನು ತಳ್ಳಿಹಾಕಿದ್ದಾರೆ. ಒಬ್ಬ ನಟಿಯಾಗಿ ಅವರು ಎಲ್ಲಾ ಧರ್ಮಗಳನ್ನು ಗೌರವಿಸುತ್ತಾರೆ ಅಥವಾ ಅದು ಅವರ ವೈಯಕ್ತಿಕ ನಂಬಿಕೆಯಾಗಿರಬಹುದು ಎಂದು ವಾದಿಸುತ್ತಿದ್ದಾರೆ. ಒಟ್ಟಿನಲ್ಲಿ, ಈ ಜೋಡಿಯ ಸುತ್ತ ಎದ್ದಿರುವ ಗಾಳಿ ಸುದ್ದಿಗಳು ಮಾತ್ರ ದಿನಕ್ಕೊಂದು ಹೊಸ ತಿರುವು ಪಡೆಯುತ್ತಿವೆ. ಸದ್ಯ ವಿಜಯ್ ಹಾಗೂ ಸಂಗೀತಾ ವಿಚ್ಛೇದನ ವಿಷಯ ಕೋರ್ಟ್ನಲ್ಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.