ಕೆಲವೇ ದಿನಗಳ ಹಿಂದೆ ಐಪಿಎಲ್ ಪಂದ್ಯದ ವೇಳೆ ನಿಷೇಧಿತ ಇ-ಸಿಗರೇಟ್ ಸೇದಿದಕ್ಕೆ ಪಂದ್ಯ ಶುಲ್ಕ ಶೇಕಡಾ 25 ರಷ್ಟು ಮೊತ್ತವನ್ನು ಬಿಸಿಸಿಐಗೆ ದಂಡವಾಗಿ ಪಾವತಿಸಿ, ಇದರ ಜೊತೆಗೆ ಒಂದು ಡಿಮೆರಿಟ್ ಅಂಕವನ್ನು ಪಡೆದಿದ್ದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್, ಈ ಆವೃತ್ತಿಯಲ್ಲಿ ಕೊನೆಗೂ ತಮ್ಮ ಫಾರ್ಮ್ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಈ ಪಂದ್ಯದಲ್ಲಿ ಅಬ್ಬರದ ಇನ್ನಿಂಗ್ಸ್ ಆಡಿದ ಪರಾಗ್ ಕೇವಲ 32 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದು ಈ ಆವೃತ್ತಿಯಲ್ಲಿ ಪರಾಗ್ ಬಾರಿಸಿದ ಮೊದಲ ಅರ್ಧಶತಕವಾಗಿತ್ತು.
ವಾಸ್ತವವಾಗಿ ಈ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ವೈಭವ್ ಸೂರ್ಯವಂಶಿ ಬೇಗನೇ ಔಟಾದರು. ಹೀಗಾಗಿ ಬೇಗನೇ ಬ್ಯಾಟಿಂಗ್ಗೆ ಬಂದ ಪರಾಗ್ ತಂಡದ ಇನ್ನಿಂಗ್ಸ್ ಕಟ್ಟುವುದರ ಜೊತೆಗೆ ಧ್ರುವ್ ಜುರೆಲ್ ಅವರೊಂದಿಗೆ ಶತಕದ ಪಾಲುದಾರಿಕೆಯನ್ನು ಹಂಚಿಕೊಂಡರು. ಈ ಇಬ್ಬರು ಬ್ಯಾಟ್ಸ್ಮನ್ಗಳು 102 ರನ್ಗಳ ಜೊತೆಯಾಟವನ್ನು ಕಲೆಹಾಕಿದರು.
ವೈಭವ್ ಸೂರ್ಯವಂಶಿ ವಿಕೆಟ್ ಪತನದ ನಂತರ ಕ್ರೀಸ್ಗೆ ಬಂದ ರಿಯಾನ್ ಪರಾಗ್ ಬಂದ ತಕ್ಷಣ ದೊಡ್ಡ ಹೊಡೆತಗಳನ್ನು ಆಡಲು ಪ್ರಾರಂಭಿಸಿದರು. ಕೈಲ್ ಜೇಮಿಸನ್ ಓವರ್ನಲ್ಲಿ ಎರಡು ಸಿಕ್ಸ್ ಮತ್ತು ಒಂದು ಬೌಂಡರಿ ಬಾರಿಸಿದರು. ನಂತರ ಅಕ್ಷರ್ ಪಟೇಲ್ ಓವರ್ನಲ್ಲಿ ಪರಾಗ್ ಸತತ ಎರಡು ಸಿಕ್ಸ್ಗಳನ್ನು ಬಾರಿಸಿದರು. ತಮ್ಮ ಅರ್ಧಶತಕದ ಬಳಿಕವೂ ಎಂದಿನಂತೆ ತಮ್ಮ ಸ್ಫೋಟಕ ಬ್ಯಾಟಿಂಗ್ ಮುಂದುವರೆಸಿದ ಪರಾಗ್ 50 ಎಸೆತಗಳಲ್ಲಿ 90 ರನ್ ಬಾರಿಸಿದ್ದರು. ಆದರೆ ಈ ಹಂತದಲ್ಲಿ ಬಿಗ್ ಶಾಟ್ ಆಡಲು ಯತ್ನಿಸಿ ಸ್ಟಾರ್ಕ್ಗೆ ಬಲಿಯಾದರು. ಪರಾಗ್ ತಮ್ಮ ಇನ್ನಿಂಗ್ಸ್ನಲ್ಲಿ 8 ಬೌಂಡರಿ ಹಾಗೂ 5 ಸಿಕ್ಸರ್ಗಳನ್ನು ಬಾರಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ