Headlines

ಒಂದು ಹಾಡಿನಿಂದ ನಿರ್ದೇಶಕನ ಜೊತೆ ಶುರುವಾಯ್ತು ರಮ್ಯಾ ಕೃಷ್ಣ ಪ್ರೀತಿ – Kannada News | Krishna Vamsi and Ramya Krishna Love Story: From ‘Gulabi’ Songs to Happy Marriage

ನಿರ್ದೇಶಕ ಕೃಷ್ಣ ವಂಶಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಜನಪ್ರಿಯ ನಟಿ ರಮ್ಯಾ ಕೃಷ್ಣ ಅವರ ಪ್ರೀತಿ ಮತ್ತು ಮದುವೆಯ ಬಗ್ಗೆ ಆಸಕ್ತಿದಾಯಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಅವರ ಪ್ರೇಮಕಥೆ ‘ಗುಲಾಬಿ’ ಚಿತ್ರದ ಹಾಡುಗಳಿಂದ ಪ್ರಾರಂಭವಾಯಿತು ಎಂದು ಅವರು ಹೇಳಿದರು. ಟಿವಿಯಲ್ಲಿ ‘ಗುಲಾಬಿ’ಸಿನಿಮಾದ ಹಾಡುಗಳನ್ನು ನೋಡಿ ರಮ್ಯಾ ಕೃಷ್ಣ ಇಷ್ಟಪಟ್ಟರು. ಆ ಸಮಯದಲ್ಲಿ ಅವರು ಈಗಾಗಲೇ ದೊಡ್ಡ ತಾರೆಯಾಗಿದ್ದರು ಎಂದು ಕೃಷ್ಣ ವಂಶಿ ಹೇಳಿದರು.

‘ನಮಗೆಲ್ಲರಿಗೂ ಅವರ ಬಗ್ಗೆ ಗೌರವವಿತ್ತು, ನನಗೂ ಸಹ’ ಎಂದು ಅವರು ಹೇಳಿದರು.‘ನಿನ್ನೆ ಪೆಲ್ಲಡತ’ ಚಿತ್ರದ ಪಾತ್ರದ ಬಗ್ಗೆ ಲಕ್ಷ್ಮಿ ಅವರೊಂದಿಗೆ ಮಾತನಾಡಲು ಹೋದಾಗ ಇಬ್ಬರ ನಡುವಿನ ಮೊದಲ ಭೇಟಿಯಾಯಿತು ಎಂದು ಕೃಷ್ಣ ವಂಶಿ ಹೇಳಿದರು. ‘ರಮ್ಯಾ ಕೃಷ್ಣ ಸೆಟ್‌ನಲ್ಲಿದ್ದರು. ಜನಸಂದಣಿಯಿಂದಾಗಿ ಸ್ವಲ್ಪ ನಾಚಿಕೆಪಡುತ್ತಾ ಇದ್ದರು. ಅವರ ಜೊತೆ ಬ್ರಹ್ಮಾನಂದಂ ಇದ್ದರು. ನಂತರ ರಮ್ಯಾ ಕೃಷ್ಣ ಅವರು ಬ್ರಹ್ಮಾನಂದಂ ಬಳಿ ‘ದಯವಿಟ್ಟು ವಂಶಿಯನ್ನು ಪರಿಚಯಿಸಿ’ ಎಂದು ಕೇಳಿದರು.

ಪರಿಚಯದ ನಂತರ ರಮ್ಯಾ ಅವರು, ಕೃಷ್ಣ ವಂಶಿ ಬಳಿ ‘ಗುಲಾಬಿ” ಚಿತ್ರದ ಹಾಡುಗಳು ತುಂಬಾ ಚೆನ್ನಾಗಿವೆ, ತೆಲುಗಿನಲ್ಲಿ ಇಂತಹ ಹಾಡು ಹೊರಬರುತ್ತದೆ ಎಂದು ನಾನು ಎಂದಿಗೂ ನಿರೀಕ್ಷಿಸಿರಲಿಲ್ಲ’ ಎಂದು ಹೊಗಳಿದರು. ರಮ್ಯಾ ಕೃಷ್ಣ ಬಳಿ ಸಿನಿಮಾ ನೋಡಿದ್ದೀರಾ ಎಂದು ಕೇಳಿದಾಗ, ‘ಟಿವಿಯಲ್ಲಿ ಮಾತ್ರ ಹಾಡುಗಳನ್ನು ನೋಡಿದ್ದೇನೆ’ ಎಂದು ಹೇಳಿದರು. ಅದೇ ದಿನ ಸಂಜೆ ರಮ್ಯಾಗಾಗಿ ಸಿನಿಮಾದ ವಿಶೇಷ ಶೋ ಆಯೋಜಿಸಲಾಯಿತು. ಅಂದಹಾಗೆ, ‘ಗುಲಾಬಿ’ ಚಿತ್ರವನ್ನು ಕೃಷ್ಣ ವಂಶಿ ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ: ಈ ಕಲಾವಿದನ ಜೊತೆ ನಟಿಸೋದು ಎಂದರೆ ರಮ್ಯಾ ಕೃಷ್ಣಗೆ ಸಖತ್ ಭಯ

ಆ ದಿನಗಳಲ್ಲಿ ಹೆಚ್ಚು ಫೋನ್‌ಗಳು ಇಲ್ಲದ ಕಾರಣ, ಆರಂಭದಲ್ಲಿ ಪೇಜರ್‌ಗಳ ಮೂಲಕ ಸಂಭಾಷಣೆ ನಡೆಯುತ್ತಿತ್ತು ಎಂದು ಕೃಷ್ಣ ವಂಶಿ ನೆನಪಿಸಿಕೊಂಡಿದ್ದಾರೆ. ನಂತರ, ಅವರು ಶೂಟಿಂಗ್ ವೇಳೆ ಭೇಟಿ ಆದರು. ಇಬ್ಬರೂ ಪ್ರಪೋಸ್ ಮಾಡಿಕೊಂಡಿರಲಿಲ್ಲ. ಇಬ್ಬರ ಮಧ್ಯೆ ಏನೋ ಇದೆ ಎಂದು ಇಬ್ಬರಿಗೂ ಅನಿಸುತ್ತಿತ್ತಂತೆ. ಈಗ ಇಬ್ಬರೂ ಮದುವೆ ಆಗಿ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *