ಚಿಕ್ಕಮಗಳೂರು, ಮೇ 02: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯಲ್ಲಿ ಕಾಂಗ್ರೆಸ್ ಶಾಸಕ ಟಿಡಿ ರಾಜೇಗೌಡ ಗೆಲುವು ಸಾಧಿಸಿದ್ದು, ಅಧಿಕೃತ ಘೋಷಣೆ ಇನ್ನು ಬಾಕಿ ಇದೆ. ಆದರೆ ಇಂದು ಬೆಳಿಗ್ಗೆ ಮತಗಳ ಮರು ಎಣಿಕೆ ವೇಳೆ ಮತಗಳಿರುವ ಬಾಕ್ಸ್ ಸೀಲ್ ಓಪನ್ ಮಾಡಲಾಗಿತ್ತು. ಹೀಗಾಗಿ ಶಾಸಕ ಟಿಡಿ ರಾಜೇಗೌಡ ಟ್ಯಾಂಪರ್ ಅನುಮಾನ ವ್ಯಕ್ತಪಡಿಸಿದ್ದರು. ಈ ಬಗ್ಗೆ ಮಾತನಾಡಿರುವ ಅವರು, ಬಿಜೆಪಿ ಅಭ್ಯರ್ಥಿ 40, 42 ಮತಗಳಿಂದ ಗೆಲುವು ನಮ್ಮದೆ ಎಂದು ಹೇಳಿದ್ದರು. ಹಾಗಾಗಿ ನನಗೆ ಅನುಮಾನ ಬಂದಿತ್ತು. ಸದ್ಯ ಚುನಾವಣಾ ಅಧಿಕಾರಿಗಳು ಈ ಆರೋಪಗಳ ಬಗ್ಗೆ ತನಿಖೆ ನಡೆಸಬೇಕೆಂದು ಎರಡೂ ಕಡೆಯಿಂದಲೂ ದೂರನ್ನು ನೀಡಲಾಗಿದೆ. ಯಾವುದೇ ಮತಪತ್ರ ಟ್ಯಾಂಪರ್ ಕಂಡುಬಂದರೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುವುದು ಎಂಬ ಭರವಸೆ ಬಳಿಕ ಮತ ಎಣಿಕೆ ಮುಂದುವರೆಯಿತು ಎಂದು ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.