ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯತೆ ಗಳಿಸಲು ಮತ್ತು ಕ್ಷಣಿಕ ಸಾಹಸ ಪ್ರದರ್ಶಿಸಲು ಜನರು ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಚಲಿಸುವ ಬೃಹತ್ ವಾಹನಗಳ ಬಳಿ ಬೈಕ್ ಸವಾರರು ಮಾಡುವ ಇಂತಹ ಅಪಾಯಕಾರಿ ಸಾಹಸಗಳು ಮತ್ತು ನಂತರ ಚಾಲಕರ ಮೇಲೆ ಗೂಬೆ ಕೂರಿಸುವ ಪ್ರವೃತ್ತಿಯ ಕುರಿತಾದ ವಿಡಿಯೋ ಇಲ್ಲಿದೆ. ರಸ್ತೆ ಸುರಕ್ಷತೆಯ ನಿಯಮಗಳನ್ನು ಗಾಳಿಗೆ ತೂರಿ, ಚಲಿಸುವ ಟ್ರಕ್ಗಳ ಅಡಿಯಲ್ಲಿ ಅಥವಾ ಅತ್ಯಂತ ಸಮೀಪದಲ್ಲಿ ಬೈಕ್ ನುಗ್ಗಿಸುವ ‘ಸ್ಟಂಟ್’ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಇಂತಹ ಘಟನೆಗಳು ಕೇವಲ ಅಪಘಾತಗಳಿಗೆ ಕಾರಣವಾಗುವುದಲ್ಲದೆ,ಟ್ರಕ್ ಚಾಲಕರ ಬದುಕನ್ನು ಸಂಕಷ್ಟಕ್ಕೆ ದೂಡುತ್ತಿವೆ. ಟ್ರಾಫಿಕ್ ಇದೆ ಎಂದು ಬೈಕ್ ಸವಾರರು ಟ್ರಕ್ ಅಡಿ ಗಾಡಿಯೊಂದಿಗೆ ನುಸುಳುತ್ತಿರುವ ವಿಡಿಯೋ ವೈರಲ್ ಆಗಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ