ಆತ್ಮಹತ್ಯೆ ಮಾಡಿಕೊಳ್ಳಲು ಕಾಡಿಗೆ ಹೋದವನಿಗೆ ವಿಷ್ಣುವಿನ ದರ್ಶನ; ದೇವಾಲಯ ಕಟ್ಟಿ ಪೂಜಿಸಿದ ಬೀದರ್​​​ನ ಜನ – Kannada News | Karnataka’s 1000 Year Old Vishnu Temple: Bidar Forest Finds Healing Waters

ಬೀದರ್, ಡಿ.31: ಇಂದಿನ ಆಧುನಿಕ ಕಾಲದಲ್ಲೂ ಆಧ್ಯಾತ್ಮಿಕ ವಿಚಾರಗಳ ಮೇಲೆ ನಂಬಿಕೆ ಇದೆ. ಈ ನಂಬಿಕೆಗೆ ಕೆಲವೊಂದು ಅಚ್ಚರಿಯ ಸಂಗತಿಗಳು ಕಾರಣ. ಭಾರತದ ಅನೇಕ ಕಡೆ ಕಳೆದ 10 ವರ್ಷಗಳಿಂದ ಪುರಾತನ ದೇವಾಲಯಗಳು ಪತ್ತೆಯಾಗುತ್ತಿದೆ. ಜತೆಗೆ ಅವುಗಳ ಜೀರ್ಣೋದ್ಧಾರ ಕೂಡ ನಡೆಯುತ್ತಿದೆ. ಇದೀಗ ಇಂತಹದೇ ಘಟನೆಯೊಂದು ಬೀದರ್​​ನಲ್ಲಿ ನಡೆದಿದೆ. ಜಿಲ್ಲೆಯ ಭಾಲ್ಕಿ ತಾಲೂಕಿನ ಸೇವಾನಗರ ತಾಂಡಾದ ಬಳಿಯ ದಟ್ಟವಾದ ಅರಣ್ಯ ಪ್ರದೇಶದಲ್ಲಿ ಪುರಾತನ ವಿಷ್ಣು ದೇವಸ್ಥಾನಯೊಂದು (Bidar Ancient Vishnu Temple) ಐದು ವರ್ಷಗಳ ಹಿಂದೆ ಪತ್ತೆಯಾಗಿತ್ತು. ಇದೀಗ ಈ ದೇವಾಲಯದಲ್ಲಿ ದಿನ ನಿತ್ಯ ಪೂಜೆಗಳು ನಡೆಯುತ್ತಿದೆ. ಕಳೆದ ಮೂರು ವರ್ಷಗಳಿಂದ ಇಲ್ಲಿಗೆ ಸಾವಿರಾರೂ  ಭಕ್ತರು ಆಗಮಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಈ ದೇವಾಲಯದ ಜೀರ್ಣೋದ್ಧಾರ ನಡೆದಿದೆ. ನೂರಾರು ವರ್ಷಗಳ ಇತಿಹಾಸವಿರುವ ದೇವಾಲಯ ಈ ಕಾಡಿನಲ್ಲಿತ್ತು ಎಂಬುದನ್ನು ಯಾರಿಗೂ ಗೊತ್ತಿರಲಿಲ್ಲ. ಹಾಗಾದರೆ ಈ ದೇವಾಲಯ ಇರುವುದು ಗೊತ್ತಾಗಿರುವುದು ಹೇಗೆ? ಎಂಬ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ಈ ವಿಷ್ಣುವಿನ ದೇವಾಲಯ ಇರುವ ಬಗ್ಗೆ ಹೇಳಿದ್ದು ಒಬ್ಬ ಸಾಮಾನ್ಯ ವ್ಯಕ್ತಿ, ಐದು ವರ್ಷದ ಹಿಂದೆ ಸೇವಾನಗರ ತಾಂಡಾದ ನಿವಾಸಿ ಶಿವಾಜಿರಾವ್ ಜೀವನದಲ್ಲಿ ಯಾವುದೂ ಕೈಹಿಡಿಯದೆ, ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಳ್ಳಲು, ಈ ಕಾಡಿನ ಒಳಗೆ ಶಿವಾಜಿರಾವ್ ಬಂದಾಗ, ಒಂದು ದೊಡ್ಡ ಆಲದ ಮರ ಅವರಿಗೆ ಸಿಕ್ಕಿದೆ. ಇದಕ್ಕೆ ನೇಣು ಬಿಗಿದುಕೊಳ್ಳಬೇಕು ಎಂದು ಯೋಚನೆ ಮಾಡುತ್ತಿದ್ದಾಗ ಇವರ ಕಣ್ಣಿಗೆ ಪುರಾತನ ನೀರಿನ ಹೊಂಡ ಕಂಡಿದೆ. ಸಾವಿನ ಕೊನೆಯಲ್ಲೂ ಅವರಿಗೆ ಬಾಯರಿಕೆ ಆಗಿ, ನೀರು ಕುಡಿಯುವ ಎಂದು ಆ ಹೊಂಡದ ನೀರು ಕುಡಿಯುತ್ತಾರೆ. ಅಚ್ಚರಿ ಎಂಬಂತೆ ಈ ನೀರು ಕುಡಿದ ನಂತರ ಅವರಿಗೆ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂಬ ಯೋಚನೆ ಬದಲಾಯಿತು ಎಂದು ಹೇಳಿದ್ದಾರೆ. ಅಷ್ಟಕ್ಕೂ ಈ ನೀರಿನಲ್ಲಿರುವ ಶಕ್ತಿ ಏನು ಎಂಬುದನ್ನು ವಿವರವಾಗಿ ವಿವರಿಸಿದ್ದಾರೆ.

ನೀರು ಕುಡಿಯುತ್ತಿದ್ದ ವೇಳೆ ಹೊಂಡ ಗೋಡೆಯಲ್ಲಿ ವಿಷ್ಣು ಹಾವಿನ ಮೇಲೆ ನಿದ್ರಿಸುವ ಭಂಗಿಯಲ್ಲಿರುವ ಮೂರ್ತಿ ನೋಡಿದ್ದಾರೆ. ತಕ್ಷಣ ಕೈ ಮುಗಿದು, ಮರಳಿ ಊರಿಗೆ ಬಂದು ತಾಂಡಾ ಜನರಿಗೆ ಈ ಬಗ್ಗೆ ತಿಳಿಸಿದ್ದಾರೆ. ಅವರು ಕೂಡ ಈ ಸ್ಥಳಕ್ಕೆ ಬಂದು ನೋಡಿದ್ದಾರೆ. ಅಲ್ಲಿ ವಿಷ್ಣುವಿನ ಮೂರ್ತಿ ನೋಡಿ, ಹಿರಿಯರ ಮಾರ್ಗದರ್ಶದಂತೆ ಅದನ್ನು ಜೀರ್ಣೋದ್ಧಾರ ಮಾಡಲು ಹಣ ಸಂಗ್ರಹ ಮಾಡಿ. ದೊಡ್ಡ ದೇವಸ್ಥಾನವನ್ನು ಕಟ್ಟಿದ್ದಾರೆ. ಇಲ್ಲಿಗೆ ಬರುವ ಭಕ್ತರಿಗೆ ಒಂದು ರೀತಿಯ ನೆಮ್ಮದಿ ಸಿಕ್ಕಿದೆ ಎಂದು ಹಲವು ಭಕ್ತರು ಹೇಳಿದ್ದಾರೆ.

ಇದನ್ನು ಓದಿ: ವೆಂಕಟೇಶ್ವರನಿಗೆ ಹರಕೆ ಅಥವಾ ಮುಡುಪು ಕಟ್ಟುವ ಸರಿಯಾದ ವಿಧಾನ ಇಲ್ಲಿದೆ

ಒಂದು ಸಾವಿರ ವರ್ಷ ಹಳೆಯ ದೇವಾಲಯ:

ಈ ದೇವಸ್ಥಾನದ ಇತಿಹಾಸ ನೋಡುವುದಾರೆ ಸುಮಾರು ಒಂದು ಸಾವಿರ ವರ್ಷದಷ್ಟು ಹಳೆಯದಾದ ಪುರಾತನ ವಿಷ್ಣುವಿನ ಮೂರ್ತಿ ಹಾಗೂ ಈ ನೀರಿನ ಹೊಂಡ ಆಗಿರಬಹುದು ಎಂದು ಹೇಳಲಾಗಿದೆ. ದೇವಸ್ಥಾನದ ಸುತ್ತಮುತ್ತಲಿನ ಬೆಟ್ಟ ಹಲವಾರು ವಿಸ್ಮಯಗಳನ್ನೊಳಗೊಂಡಿದೆ ಎಂದು ಇಲ್ಲಿನ ಭಕ್ತರು ಹೇಳುತ್ತಿದ್ದಾರೆ. ಹೊರ ರಾಜ್ಯದ ಜನರು ಕೂಡ ಈ ದೇವಾಲಯಕ್ಕೆ ಬರುತ್ತದೆ. ಈ ಬಗ್ಗೆ ಟಿವಿ9 ಕನ್ನಡ ಒಂದು ವರದಿ ಮಾಡಿದ ನಂತರ ಈ ಪ್ರದೇಶದಲ್ಲಿ ಇಂತಹ ಒಂದು ವಿಸ್ಮಯಕಾರಿ ದೇವಾಲಯ ಇದೆ ಎಂಬುದು ಗೊತ್ತಾಗಿದೆ. ಇನ್ನು ಈ ಹೊಂಡದಲ್ಲಿರುವ ನೀರು ಯಾವತ್ತು ಬತ್ತಿ ಹೋಗಲ್ಲ ಎಂದು ಹೇಳಲಾಗಿದೆ. ನಿರಂತರವಾಗಿ ಹರಿಯುವ ನೀರನ್ನ ಔಷಧಿ ರೂಪದಲ್ಲಿಯೂ ಪ್ರತಿನಿತ್ಯ ಕುಡಿಯುವುದರಿಂದ ನಮ್ಮ ದೇಹದಲ್ಲಿರುವ ಖಾಯಿಲೆಗಳು ವಾಸಿಯಾಗುತ್ತದೆಂಬ ನಂಬಿಕೆ ಇಲ್ಲಿನ ಗ್ರಾಮಸ್ಥರದ್ದು, ಈ ನೀರಿನ ಹೊಂಡ ಸುಮಾರು ಹದಿನೈದು ಅಡಿಯಷ್ಟು ಆಳವಾಗಿದೆ. ಈ ನೀರು ಬೆಸಿಗೆಯ ಸಮಯದಲ್ಲಿ ಪ್ರಾಣಿ, ಪಕ್ಷೀಗಳಿಗೆ ನೀರಿನ ದಾಹ ಇಂಗಿಸುತ್ತದೆ ಈ ನೀರು ಶುದ್ಧವಾಗಿದ್ದ ರುಚಿಕರವಾಗಿದೆ ಎಂದು ಇಲ್ಲಿ ಭಕ್ತ ಸಮೂಹ ಹೇಳಿದೆ.

ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *